Actress Name: ಹೆಸರು ಬದಲಾಯಿಸಿಕೊಂಡು ಅದೃಷ್ಟ ತಂದುಕೊಂದ ನಟಿಮಣಿಯರು ಇವ್ರು, ಹೆಸರಲ್ಲೂ ಎಷ್ಟ್ ಪವರ್ ಇದೆ ಗುರು!

Actress Name: ನಮ್ಮ ಕನ್ನಡ ಚಿತ್ರರಂಗ ಸಾಕಷ್ಟು ವರ್ಷಗಳ ಇತಿಹಾಸವನ್ನು ಹೊಂದಿರುವಂತಹ ಚಿತ್ರರಂಗ ಆಗಿದ್ದು ಅದೆಷ್ಟೋ ಪ್ರತಿಭೆಗಳಿಗೆ ಅವಕಾಶವನ್ನು ನೀಡಿರುವಂತಹ ನಮ್ಮ ಕನ್ನಡ ಚಿತ್ರರಂಗ ಇವತ್ತಿಗೂ ಕೂಡ ಭಾರತದ ಅತ್ಯಂತ ಪ್ರಮುಖ ಭಾಷೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಅದೇ ರೀತಿಯಲ್ಲಿ ಸಾಕಷ್ಟು ನಟಿಯರಿಗೂ ಕೂಡ ಅವಕಾಶದ ಸೂರನ್ನು ನೀಡಿರುವಂತಹ ಚಿತ್ರರಂಗ ನಮ್ಮ ಕನ್ನಡ ಚಿತ್ರರಂಗ. ಹಾಗಿದ್ದರೆ ಬನ್ನಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹೆಸರನ್ನು ಬದಲಾಯಿಸಿಕೊಂಡಿರುವಂತಹ ನಟಿಯರು ಯಾರೆಲ್ಲ ಎನ್ನುವುದನ್ನು ತಿಳಿದುಕೊಳ್ಳೋಣ.

ಹೆಸರು ಬದಲಾಯಿಸಿಕೊಂಡು ಅದೃಷ್ಟವನ್ನೇ ಬದಲಾಯಿಸಿಕೊಂಡ ಕನ್ನಡದ ನಟಿಯರು ಇವರು!

ರಮ್ಯ

ನಮ್ಮ ಕನ್ನಡ ಚಿತ್ರರಂಗದ ಅನಭಿಷಿಕ್ತ ರಾಣಿ ಎಂಬುದಾಗಿ ನಟಿ ರಮ್ಯಾ ಅವರನ್ನ ಕರೆಯಲಾಗುತ್ತದೆ. ಕೇವಲ ಸಿನಿಮಾ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ನಟಿ ರಮ್ಯಾ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಪ್ಪು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಚಿತ್ರರಂಗಕ್ಕೆ ಕಾಲಿಟ್ಟು ಈಗಾಗಲೇ ಸಾಕಷ್ಟು ವರ್ಷಗಳೇ ಕಳೆದಿದ್ದರೂ ಕೂಡ ರಮ್ಯಾ ಅವರ ಬೇಡಿಕೆ ಇನ್ನೂ ಕೂಡ ಕಡಿಮೆ ಆಗಿಲ್ಲ ಎಂದು ಹೇಳಬಹುದಾಗಿದೆ. ರಮ್ಯಾ ಅವರ ನಿಜವಾದ ಹೆಸರು ದಿವ್ಯ ಸ್ಪಂದನ ಆಗಿದೆ. ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ದಿವ್ಯ ಸ್ಪಂದನ ಅವರಿಗೆ ರಮ್ಯಾ ಎನ್ನುವಂತಹ ಹೆಸರಿನ ನಾಮಕರಣ ಮಾಡಿದ್ದು ಪಾರ್ವತಮ್ಮ ರಾಜಕುಮಾರ್. ಸಾಕಷ್ಟು ನಟರಿಗೆ ಇವರು ಲಕ್ಕಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಬಹುದು.

ಸುಧಾರಾಣಿ

ಕನ್ನಡ ಚಿತ್ರರಂಗದ ಎವರ್ಗ್ರೀನ್ ನಾಯಕ ನಟಿ ಆಗಿರುವಂತಹ ಸುಧಾರಾಣಿ ಅವರು ಶಿವಣ್ಣ ಅಭಿನಯದ ಆನಂದ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಚಿಕ್ಕವಯಸ್ಸಿನಲ್ಲಿ ಕೂಡ ಬಾಲ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಪೋಷಕ ಪಾತ್ರದ ಜೊತೆಗೆ ಧಾರವಾಹಿಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ನಿಜವಾದ ಹೆಸರು ಜಯಶ್ರೀ ಯಾಗಿದೆ.

ಸಂಗೀತ ಶೃಂಗೇರಿ

ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮ ಹಾಗೂ ಚಾರ್ಲಿ ಸಿನಿಮಾದ ಮೂಲಕ ಕರ್ನಾಟಕದ ಮನೆ ಮಂದಿಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವಂತಹ ನಟಿ ಸಂಗೀತ ಶೃಂಗೇರಿ ಅವರ ನಿಜವಾದ ಹೆಸರು ಶ್ರೀದೇವಿಯಾಗಿದೆ.

ಪೂಜಾ ಗಾಂಧಿ

ಒಂದು ಕಾಲದಲ್ಲಿ ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಳೆ ಹುಡುಗಿ ಎಂಬುದಾಗಿ ಪ್ರಖ್ಯಾತಿಯನ್ನು ಹೊಂದಿದ್ದ ಪೂಜಾ ಗಾಂಧಿ ಅವರು ಆ ಕಾಲದಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆಯನ್ನು ಹೊಂದಿರುವಂತಹ ನಾಯಕನಹಟ್ಟಿ ಆಗಿದ್ದರು ಅನ್ನೋದನ್ನ ಯಾವುದೇ ಅನುಮಾನವಿಲ್ಲ. ಇವತ್ತಿಗೂ ಕೂಡ ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಪೂಜಾ ಗಾಂಧಿಯವರ ನಿಜವಾದ ಹೆಸರು ಸಂಜನಾ ಗಾಂಧಿಯಾಗಿದೆ.

ಆರಾಧನಾ ರಾಮ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ಸೂಪರ್ ಹಿಟ್ ಸಿನಿಮಾ ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ಪಾದರ್ಪಣೆ ಮಾಡಿರುವಂತಹ ಮಾಲಾಶ್ರೀ ಅವರ ಮಗಳಾಗಿರುವಂತಹ ಆರಾಧನಾ ರಾಮ್ ರವರ ನಿಜವಾದ ಹೆಸರು ಅನನ್ಯ ಆಗಿದೆ.

ಅಮೂಲ್ಯ

ಕನ್ನಡ ಚಿತ್ರರಂಗದಲ್ಲಿ ದಿಗ್ಗಜ ನಟರ ಜೊತೆಗೆ ಬಾಲ ನಟಿಯಾಗಿ ಹಾಗೂ ಸಾಕಷ್ಟು ಸೂಪರ್ ಸ್ಟಾರ್ಗಳ ಜೊತೆಗೆ ನಾಯಕಿಯಾಗಿ ಕಾಣಿಸಿಕೊಂಡಿರುವಂತಹ ಅಮೂಲ್ಯ ಅವರ ನಿಜವಾದ ಹೆಸರು ಮೌಲ್ಯ ಎನ್ನುವುದಾಗಿದೆ.

Actressname