ಮಗನ ಜೊತೆಗೆ ಮೊದಲ ಬಾರಿಗೆ ರೀಲ್ಸ್ ಮಾಡಿದ ಸಂಜನಾ ಗರ್ಲಾನಿ; ಹೇಗಿತ್ತು ಗೊತ್ತಾ ಅದ್ಭುತ ರೀಲ್ಸ್??

ಮಗನ ಜೊತೆಗೆ ಮೊದಲ ಬಾರಿಗೆ ರೀಲ್ಸ್ ಮಾಡಿದ ಸಂಜನಾ ಗರ್ಲಾನಿ; ಹೇಗಿತ್ತು ಗೊತ್ತಾ ಅದ್ಭುತ ರೀಲ್ಸ್??

ಸ್ಯಾಂಡಲ್ ವುಡ್ ಸದ್ಯ ಕಲಾವಿದರ ವಯಕ್ತಿಕ ಜೀವನದಲ್ಲಿ ಒಂದಲ್ಳಾ ಒಂದು ಸಂಭ್ರಮ ಎದ್ದು ಕಾಣುತ್ತಿದೆ. ಕೆಲವರು ಮದುವೆಯ ಸಂಭ್ರಮದಲ್ಲಿದ್ದರೆ, ಇನ್ನೂ ಕೆಲವರು ತಾಯ್ತನದ ಸುಖವನ್ನು ಅನುಭವಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಬಹುತೇಕ ತಾರೆಯರು, ಅದರಲ್ಲೂ ಸ್ಟಾರ್ ನಟಿಯರೂ ಕೂಡ ತಮ್ಮ ಮುದ್ದಾದ ಮಕ್ಕಳ ಜೊತೆಗಿನ ಪೋಟೊಗಳನ್ನು ಹಂಚಿಕೊಂಡು ಖುಷಿಪಡುತ್ತಿರುತ್ತಾರೆ.

ಇತ್ತೀಚಿಗೆ ನಟಿ ಸಂಜನಾ ಗಲ್ರಾನಿ ಕೂಡ ತಾಯ್ತನದ ಬೆಚ್ಚಗಿನ ಅನುಭವವನ್ನು ಪಡೆದುಕೊಂಡಿದ್ದಾರೆ. ಹೌದು, ಸ್ಯಾಂಡಲ್ ವುಡ್ ನಲ್ಲಿ ಗಂಡ ಹೆಂದತಿ ಸಿನಿಮಾ ಮೂಲಕ ಗುರುತಿಸಿಕೊಂಡಿದ್ದ ನಟಿ ಸಂಜನಾ ಗಲ್ರಾನಿ ಇತ್ತೀಚಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇವರು ಗರ್ಭಿಣಿಯಾಗಿದ್ದಾಗಲೂ ಸಾಕಷ್ಟು ಬೇಬಿ ಬಂಪ್ ಫೊಟೋಗಳನ್ನು, ಸೀಮಂತದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಸಂಜನಾ ಗಲ್ರಾನಿ ತಮ್ಮ ಮಗನಿಗೆ ’ಅಲಾರಿಕ್’ ಎಂದು ನಾಮಕರಣ ಮಾಡಿದ್ದಾರೆ. ಈ ವಿಷಯವನ್ನು ಕೂಡ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಗರ್ಭಾವಸ್ಥೆಯಿಂದ ಮಗುವಾದ ಮೇಲೂ ಎಲ್ಲಾ ಕ್ಷಣವನ್ನೂ ಅಭಿಮಾನಿಗಳ ಜೊತೆ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ ನಟಿ ಸಂಜನಾ ಗಲ್ರಾನಿ!

ಇನ್ನು ನಟಿ ಸಂಜನಾ ಗಲ್ರಾನಿ ಗರ್ಭಿಣಿಯಾದಾಗಲೂ ಮೆಟರ್ನಿಟಿ ಕುರ್ತಾಗಳ ಜಾಹಿರಾತುಗಳಲ್ಲಿಯೂ ಕಾಣಿಸಿಕೊಂಡಿದ್ದರು. ಇದ್ಗ ತಮ್ಮ ಮಗುವನ್ನು ಕೈನಲ್ಲಿ ಮಲಗಿಸಿಕೊಂಡು ಫಸ್ಟ್ ರೀಲ್ ಒಂದನ್ನು ಮಾಡಿದ್ದಾರೆ ಸಂಜನಾ ಗಲ್ರಾನಿ! ’ಇತ್ತೀಸಿ ಖ್ಹುಷಿ, ಇತ್ತೀಸಿ ಹಸಿ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಸಂಜನಾ. ಇದೂ ಕೂಡ ಜಾಹಿರಾತಿನ ಭಾಗವೇ ಆಗಿದ್ದು, ಮೊಮ್ಸ್ ಜೋಯ್ ಎನ್ನುವ ಮೆಟರ್ನಿಟಿ ವೇರ್ ಕಂಪನಿಗೆ ಈ ರೀಲ್ ಮೂಲಕ ಜಾಹಿರಾತು ಮಾಡಿದ್ದಾರೆ ನಟಿ ಸಂಜನಾ ಗಲ್ರಾನಿ.

ಸದಾ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿರುವ ಸಂಜನಾ ಗಲ್ರಾನಿ ಇನ್ನು ಕೆಲವೇ ದಿನಗಳಲ್ಲಿ ಭರ್ಜರಿಯಾಗಿ ಸಿನಿಮಾಕ್ಕೆ ರೀ ಎಂಟ್ರಿಕೊಡುವುದರಲ್ಲಿ ಸಂಶಯವೇ ಇಲ್ಲ. ತಮ್ಮ ಮೇಲೆ ಬಂದಿರುವ ಆರೋಪಗಳನ್ನೂ ಕೂಡ ಎದುರಿಸಿ, ಕೊನೆಗೆ ಮೊದಲ ಮಗುವಿನ ಮುಖ ನೋಡಿ ಸಂಜನಾ ಎಲ್ಲವನ್ನೂ ಮರೆಯುತ್ತಿರುವಂತೆ ಕಾಣುತ್ತಿದೆ. ಅವರು ಆದಷ್ಟು ಬೇಗ ಉತ್ತಮ ಸಿನಿಮಾಗಳನ್ನು ಕೊಡುವಂತಾಗಲಿ ಎನ್ನುವುದೇ ಅಭಿಮಾನಿಗಳ ಹಾರೈಕೆ!

Comments (0)
Add Comment