Business course: PUC ಮಾಡಿದ ನಂತರ ಈ ಕೋರ್ಸ್ ಮಾಡಿ ಸಾಕು- ಕೆಲಸ,ಹಣ ಎರಡು ಹುಡುಕಿಕೊಂಡು ಬರುತ್ತದೆ.

Business course: ಈಗ ಬಹಳಷ್ಟು ವಿದ್ಯಾರ್ಥಿಗಳಿಗೆ ಜಾಬ್ ಒರಿಯಂಟಡ್ ಕೋರ್ಸ್ ಮಾಡಬೇಕು ಎಂದು ಆಸೆ ಇರುತ್ತದೆ. ಆದರೆ ಯಾವ ಕೋರ್ಸ್ ಮಾಡಿದರೆ ಬೇಗ ಒಳ್ಳೆಯ ಕೆಲಸ ಸಿಗುತ್ತದೆ ಎನ್ನುವ ಐಡಿಯಾ ಇರುವುದಿಲ್ಲ, ಅಂಥ ವಿದ್ಯಾರ್ಥಿಗಳಿಗಾಗಿ ಇಂದು ಒಂದು ಕೋರ್ಸ್ ಬಗ್ಗೆ ತಿಳಿಸುತ್ತೇವೆ. 12ನೇ ತರಗತಿ ಮುಗಿದ ನಂತರ ನೀವು ಈ ಕೋರ್ಸ್ ಗೆ ಸೇರಿಕೊಳ್ಳಬಹುದು. ಯಾವಾಗಲೂ ಟ್ರೆಂಡಿಂಗ್ ನಲ್ಲಿರುವ ಇದು ಬ್ಯೂಟಿಶಿಯನ್ ಕೋರ್ಸ್ ಆಗಿದೆ. ಜ್ ಕೋರ್ಸ್ ಮಾಡಿ ನೀವು ಒಳ್ಳೆಯ ಆದಾಯ ಗಳಿಸಬಹುದು. 12ನೇ ತರಗತಿಯಲ್ಲಿ ಇಂಥದ್ದೇ ಸ್ಟ್ರೀಮ್ ನಲ್ಲಿ ಓದಿರಬೇಕು ಎನ್ನುವ ಅಗತ್ಯವಿಲ್ಲ.

ಬ್ಯೂಟಿಶಿಯನ್ ಕೋರ್ಸ್ ಬಗ್ಗೆ ತಿಳಿಸಿ, ಅದನ್ನು ನಿಮ್ಮ ಪ್ರೊಫೆಷನ್ ಆಗಿ ತೆಗೆದುಕೊಳ್ಳುವುದು ಹೇಗೆ ಎಂದು ಇಂದು ನಿಮಗೆ ತಿಳಿಸುತ್ತೇವೆ. ಕಲಾ ಪ್ರಪಂಚದಲ್ಲಿ ಸೀರಿಯಲ್ ಹಾಗೂ ಸಿನಿಮಾ ಲೋಕದಲ್ಲಿ ಬ್ಯೂಟಿಶಿಯನ್ ಗಳಿಗೆ ಭಾರಿ ಬೇಡಿಕೆ ಇದೆ. ಮೇಕಪ್ ಇಷ್ಟಪಡುವವರು ಈ ಕೆಲಸವನ್ನು ವೃತ್ತಿಯಾಗಿ ತೆಗೆದುಕೊಳ್ಳಬಹುದ. ಇಲ್ಲಿ ನಿಮಗೆ ಉತ್ತಮವಾದ ಪೇಮೆಂಟ್ ಸಿಗುತ್ತದೆ, ಚೆನ್ನಾಗಿ ಹಣ ಗಳಿಸುತ್ತೀರಿ.

ಇದು ಹುಡುಗಿಯರಿಗೆ ಇರುವ ವೃತ್ತಿ ಮಾತ್ರವಲ್ಲ, ಹುಡುಗರು ಕೂಡ ಈ ಕೆಲಸ ಮಾಡಬಹುದು. ಮದುವೆ ಸೀಸನ್ ಗಳಲ್ಲಿ ಬ್ಯೂಟಿಶಿಯನ್ ಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಫ್ಯಾಮಿಲಿ ಕಾರ್ಯಕ್ರಮಗಳು, ಫ್ರೆಂಡ್ಸ್ ಮದುವೆ ಎಲ್ಲಿಗೆ ಹೋಗಬೇಕು ಎಂದರು ಸುಂದರವಾಗಿ ಕಾಣಬೇಕು ಎಂದು ಜನರು ಬಯಸುತ್ತಾರೆ. ಅದಕ್ಕಾಗಿ ಬ್ಯೂಟಿಶಿಯನ್ ಅಥವಾ ಮೇಕಪ್ ಆರ್ಟಿಸ್ಟ್ ಗಳನ್ನು ಹುಡುಕುತ್ತಾರೆ.

ಬ್ಯೂಟಿಶಿಯನ್ ಗಳ ಕೆಲಸ ಏನು ಎಂದು ನೋಡುವುದಾದರೆ, ಯಾರೇ ಆದರೂ ಸುಂದರವಾಗಿ ಕಾಣುವುದಕ್ಕೆ ಬ್ಯೂಟಿಶಿಯನ್ ಗಳು ಬೇಕೇ ಬೇಕು. ಬ್ಯೂಟಿಶಿಯನ್ ಗಳು ಫೇಶಿಯಲ್ ಮಸಾಜ್, ಹೇರ್ ಸ್ಟೈಲ್, ಪಾದಗಳ ಕಾಳಜಿ, ವ್ಯಾಕ್ಸಿನ್ಗ್, ಮೇಕಪ್ ಐಬ್ರೋ ಹಾಗೂ ಇನ್ನಿತರ ಕೆಲಸಗಳನ್ನು ಮಾಡಬೇಕಾಗುತ್ತದೆ. ಟೋಟಲ್ ಆಗಿ ಹೇಳುವುದಾದರೆ, ಬ್ಯೂಟಿಶಿಯನ್ ಗಳ ಕೆಲಸ ಒಬ್ಬ ವ್ಯಕ್ತಿಯ ಮುಖ ಸುಂದರವಾಗಿ ಕಾಣುವ ಹಾಗೆ ಮಾಡುವುದು. ಇದಕ್ಕಾಗಿ ಹಲವು ಮೇಕಪ್ ಪ್ರಾಡಕ್ಟ್ ಗಳನ್ನು ಬಳಸಲಾಗುತ್ತದೆ.

ಬ್ಯೂಟಿಷಿಯನ್ ಆಗೋದಕ್ಕೆ ನೀವು 12ನೇ ತರಗತಿ ಪಾಸ್ ಆಗಿರುವ ಸರ್ಟಿಫಿಕೇಟ್ ಇರಬೇಕು. ಈ ಕೋರ್ಸ್ ನಲ್ಲಿ ನೀವು ಡಿಪ್ಲೊಮಾ, ಡಿಗ್ರಿ ಅಥವಾ ಮಾಸ್ಟರ್ ಡಿಗ್ರಿ ಮಾಡಬಹುದು. 10ನೇ ತರಗತಿ ಪಾಸ್ ಆದ ನಂತರ ಕೂಡ ಬ್ಯೂಟಿ ಕಾಸ್ಮೆಟಾಲಜಿ ಕೋರ್ಸ್ ಮಾಡುವ ಮೂಲಕ ನೀವು ಪ್ರೊಫೆಷನಲ್ ಬ್ಯೂಟಿಶಿಯನ್ ಆಗಬಹುದು. ಈ ವೃತ್ತಿಯಲ್ಲಿ ನೀವು ಯಶಸ್ಸು ಹಣ ಕಾಣಬಹುದು.

business courseBusiness Ideasbusiness ideas for womenBusiness ideas in kannadaLive News KannadaNews in Kannadatop most bussniess man