Agriculture: ಒಂದೇ ಬೆಳೆಯಲ್ಲಿ 25 ಲಕ್ಷ ಆದಾಯ; ಸುಲಭವಾಗಿ ನೀವೂ ಈ ಕೃಷಿ ಮಾಡ್ಬಹುದು ಗೊತ್ತಾ?

Agriculture: ನಮ್ಮ ಭಾರತ ದೇಶ ಸಂಪೂರ್ಣವಾಗಿ ತನ್ನನ್ನು ತಾನು ಕೃಷಿ ಕ್ಷೇತ್ರಕ್ಕೆ ತೊಡಗಿಸಿಕೊಂಡಿರುವಂತಹ ದೇಶಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಕೃಷಿ ಅವಲಂಬಿತ ದೇಶವಾಗಿರುವಂತಹ ಭಾರತ ರೈತರ ಉಪಯೋಗಕ್ಕಾಗಿ ಕೆಲವೊಂದು ಯೋಜನೆಗಳನ್ನು ಕೂಡ ಆಗಾಗ ಜಾರಿಗೆ ತರುತ್ತದೆ. ಇನ್ನು ರೈತರು ಕೂಡ ಕೇವಲ ಒಂದೇ ಬೆಳೆಗೆ ಸೀಮಿತವಾಗಿರದೆ ಕೆಲವೊಂದು ಕೈತುಂಬ ಹಣವನ್ನು ಸಂಪಾದನೆ ಮಾಡಿ ಕೊಡುವಂತಹ ಬೆಳೆಗಳಿಗೂ ಕೂಡ ತಮ್ಮ ಒಲವನ್ನು ತೋರುತ್ತಾರೆ. ಇವತ್ತಿನ ಲೇಖನದಲ್ಲಿ ನಾವು ಹೇಳಲು ಹೊರಟಿರೋದು ಕೈ ತುಂಬಾ ಹಣವನ್ನು ಸಂಪಾದನೆ ಮಾಡಬಲ್ಲಂತಹ ಶುಂಠಿ ಕೃಷಿಯ ಬಗ್ಗೆ.

ಕೈ ತುಂಬಾ ಲಾಭ ಮಾಡಿಕೊಡಲಿದೆ ಶುಂಠಿ!

ನಮ್ಮ ಭಾರತ ದೇಶ ಅನಾದಿಕಾಲದಿಂದಲೂ ಕೂಡ ಮಸಾಲೆ ಪದಾರ್ಥಗಳಿಗೆ ಹೆಸರುವಾಸಿ ಆಗಿರುವಂತಹ ದೇಶವಾಗಿದೆ. ಇವುಗಳಲ್ಲಿ ಶುಂಠಿ ಕೂಡ ಒಂದು ಪ್ರಮುಖ ಮಸಾಲೆ ಪದಾರ್ಥವಾಗಿದೆ. ಶುಂಠಿ ಕೇವಲ ಅಡುಗೆ ಮನೆಯಲ್ಲಿ ಮಾತ್ರ ಉಪಯೋಗಕ್ಕೆ ಬಾರದೆ ಇದರಿಂದಾಗಿ ಸಾಕಷ್ಟು ಔಷಧೀಯ ಗುಣಗಳನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. ವಿಶೇಷವಾಗಿ ಜೀರ್ಣ ಪ್ರಕ್ರಿಯೆಯಲ್ಲಿ ಶುಂಠಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಇನ್ನು ಅಡುಗೆಯ ವಿಚಾರಕ್ಕೆ ಬಂದರೆ ವೆಜ್ ಹಾಗೂ ನಾನ್ ವೆಜ್ ಎರಡರಲ್ಲಿ ಕೂಡ ಶುಂಠಿಯ ಬಳಕೆಯಾಗುತ್ತದೆ.

ಶುಂಠಿ ಮಾತ್ರವಲ್ಲದೆ ಶುಂಠಿಯ ಜೊತೆಗೆ ಕಾಳು ಮೆಣಸು ಗೆಣಸು ಹಾಗೂ ಇನ್ನಿತರ ಬೆಳೆಯನ್ನು ಕೂಡ ಬೆಳೆಯುವ ಮೂಲಕ ರೈತರು ಲಾಭವನ್ನು ಗಳಿಸಬಹುದಾಗಿದ್ದು ಭಾರತದಲ್ಲಿ ವಿಶ್ವದ 45% ಶುಂಠಿಯನ್ನು ಬೆಳೆಯಲಾಗುತ್ತದೆ. ಇನ್ನು ಅದರಲ್ಲಿ ವಿಶೇಷವಾಗಿ ಭಾರತ ದೇಶದಲ್ಲಿ ಶುಂಠಿಯನ್ನು ಹೆಚ್ಚಾಗಿ ಕೇರಳ ತಮಿಳುನಾಡು ಪಶ್ಚಿಮ ಬಂಗಾಳ ಬಿಹಾರ ಹಿಮಾಚಲ ಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

ಹೆಚ್ಚಿನ ಆದಾಯ ನೀಡುತ್ತೆ ಶುಂಠಿ ಬೆಳೆ!

ಆರ್ಥಿಕವಾಗಿ ಒಬ್ಬ ರೈತ ಅಭಿವೃದ್ಧಿ ಆಗೋದಕ್ಕೆ ಶುಂಠಿ ಯಾವ ಮಟ್ಟದಲ್ಲಿ ಸಹಾಯ ಮಾಡುತ್ತಿದೆ ಎನ್ನುವುದಕ್ಕೆ ಒಂದು ಎಕರೆ ಭೂಮಿಯಲ್ಲಿ ಶುಂಠಿ ಬೆಳೆಯನ್ನು ಬೆಳೆದು 25 ರಿಂದ 30 ಲಕ್ಷ ರೂಪಾಯಿ ಲಾಭವನ್ನು ಪಡೆದುಕೊಂಡಿರುವಂತಹ ರೈತರನ್ನು ನೋಡಿ ನೀವು ಅರ್ಥ ಮಾಡಿಕೊಳ್ಳಬಹುದಾಗಿದೆ.

ಮರಳು ಮಿಶ್ರಿತ ಕೆಂಪು ಮಣ್ಣು ಅಂದರೆ ಜಂಬಿಟ್ಟಿಗೆ ಮಣ್ಣಿನಲ್ಲಿ ಶುಂಠಿ ಬೆಳೆಯನ್ನು ಬೆಳೆಯುವುದು ಸಾಕಷ್ಟು ಫಲವತ್ತತೆಯನ್ನು ನೀಡುತ್ತದೆ. ಮಹಿಮಾ ಹಾಗೂ ಮಾರನ್ ಎನ್ನುವಂತಹ ಎರಡು ತಳಿಗಳು ಶುಂಠಿ ಬೆಳೆಯಲ್ಲಿ ಇಲ್ಲಿ ಪ್ರಮುಖವಾಗಿ ಕಂಡುಬರುತ್ತವೆ. 30 ಸೆಂಟಿ ಮೀಟರ್ ಗಳ ಅಂತರದಲ್ಲಿ ಎರಡು ಸಾಲುಗಳಲ್ಲಿ ಶುಂಠಿಯನ್ನು ನೆಟ್ಟರೆ ಒಳ್ಳೆದಾಗುತ್ತದೆ. ಮನೆಯ ಸಾವಯುವ ಗೊಬ್ಬರ ಹಾಗೂ ಬೇವಿನ ಹಿಂಡಿಯನ್ನು ಶುಂಠಿಯನ್ನು ಬಿತ್ತನೆ ಮಾಡುವಾಗ ಹಾಕಬೇಕಾಗಿರುತ್ತದೆ. ಇದರಿಂದಾಗಿ ಕೊಳೆ ರೋಗ ಸೇರಿದಂತೆ ಸಾಕಷ್ಟು ಕೀಟಗಳಿಂದ ಇದು ರಕ್ಷಿಸುತ್ತದೆ.

ಶುಂಠಿಯನ್ನು ಬಿತ್ತನೆ ಮಾಡಿರುವಂತಹ ಹತ್ತು ದಿನಗಳ ಒಳಗಾಗಿ ನೀರನ್ನು ಹಾಯಿಸ ಬೇಕಾಗಿರುತ್ತದೆ. ಶುಂಠಿ ಬೆಳೆಯನ್ನು ಬೆಳೆಯುವುದಕ್ಕೆ 8-9 ತಿಂಗಳು ಬೇಕಾಗುತ್ತದೆ. ನೀರು ಹೆಚ್ಚಾಗಿ ನಿಲ್ಲುವ ಜಾಗದಲ್ಲಿ ಶುಂಠಿಯನ್ನು ಬೆಳೆಯಬಾರದು. ಶುಂಠಿಯ ಕೃಷಿಗಾಗಿ ನೀವು ಮುಖ್ಯವಾಗಿ 6-7pH ಮಣ್ಣನ್ನು ಬಳಸಬೇಕು.

agriculture