Agriculture: ರೈತರ ಖಾತೆಗೆ ಬರ ಪರಿಹಾರದ ಹಣ ಬಾರದೆ ಇರೋದಕ್ಕೆ ಇಲ್ಲಿದೆ ನೋಡಿ ನಿಜವಾದ ಕಾರಣ!

Agriculture: ನಮ್ಮ ಸರ್ಕಾರಗಳು ರೈತರಿಗಾಗಿ ವಿಶೇಷವಾದ ಯೋಜನೆಗಳನ್ನು ಹಾಗೂ ಅವರಿಗೆ ಬೇಕಾಗಿರುವಂತಹ ಪರಿಹಾರಗಳನ್ನು ನೀಡುವುದಕ್ಕೆ ಸದಾ ಕಾಲ ಮುಂದಿರುತ್ತದೆ. ಅದೇ ರೀತಿಯಲ್ಲಿ ಈಗ ಬರ ಪರಿಹಾರವನ್ನು ಕೂಡ ರೈತರಿಗಾಗಿ ಜಾರಿಗೆ ತಂದಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಅನ್ವಯ ರಾಜ್ಯದಲ್ಲಿರುವಂತಹ 32.12 ಲಕ್ಷ ರೈತರಿಗೆ 3454 ಕೋಟಿ ಅಧಿಕ ಬರ ಪರಿಹಾರವನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ 1.5 ಲಕ್ಷಕ್ಕೂ ಅಧಿಕ ರೈತರ ಖಾತ್ರಿ ಗೆ ಬರ ಪರಿಹಾರ ನಿಧಿಯ ಎರಡನೇ ಕಂತಿನ ಹಣ ಇದುವರೆಗೂ ಕೂಡ ಬಂದಿಲ್ಲ ಎಂಬುದಾಗಿ ತಿಳಿದು ಬಂದಿದೆ. ಇದನ್ನು ಸರಿಪಡಿಸುವುದು ಹೇಗೆ ಹಾಗೂ ಮೊಬೈಲ್ನಲ್ಲಿ ಚೆಕ್ ಮಾಡುವುದು ಹೇಗೆ ಎನ್ನುವಂತಹ ಮಾಹಿತಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ನೀಡುವುದಕ್ಕೆ ಹೊರಟಿದ್ದೇವೆ.

ಬರ ಪರಿಹಾರ ಸಿಗದೇ ಇರೋದಕ್ಕೆ ಕಾರಣಗಳು!

  • FID ನಂಬರ್ ರಚನೆ ಆಗದೆ ಇರೋದು ಅಥವಾ ಅದಕ್ಕೆ ಎಲ್ಲ ಸರ್ವೆ ನಂಬರ್ ಸೇರದೆ ಇದ್ರೆ ಈ ರೀತಿ ಆಗಿರಬಹುದು ಎಂಬುದಾಗಿ ತಿಳಿದು ಬಂದಿದೆ.
  • ಆಧಾರ್ ಲಿಂಕ್ ಆಗಿರುವಂತಹ ಬ್ಯಾಂಕ್ ಅಕೌಂಟ್ ರದ್ದಾಗಿರಬಹುದು ಅಥವಾ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಆಗದೆ ಇರಬಹುದು.
  • ನಿಮ್ಮ ಆರ್ ಟಿ ಸಿ ನಲ್ಲಿ ಇರುವಂತಹ ಹೆಸರು ಹಾಗೂ ಆಧಾರ್ ಕಾರ್ಡ್ ನಲ್ಲಿ ಇರುವಂತಹ ಹೆಸರು ಎರಡು ಕೂಡ ಮ್ಯಾಚ್ ಆಗದೆ ಇದ್ದಲ್ಲಿ ಈ ರೀತಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ.
  1. ಎಫ್ ಐ ಡಿ ನಂಬರ್ ರಚನೆ ಆಗದೆ ಇರುವುದು ಅಥವಾ ಸರ್ವೆ ನಂಬರಿಗೆ ಸೇರ್ಪಡೆ ಆಗದೆ ಇದ್ದರೆ ಈ ಸಂದರ್ಭದಲ್ಲಿ ರೈತರು ತಮ್ಮ ತಾಲೂಕಿನ ಕೃಷಿ ಇಲಾಖೆಗೆ ಹೋಗಿ ಈ ವಿಚಾರದ ಬಗ್ಗೆ ಸಮಸ್ಯೆಯನ್ನು ಪರಿಹಾರ ಮಾಡಿಕೊಂಡು ಬರಬಹುದಾಗಿದೆ.
  2. ಸಾಕಷ್ಟು ಬಾರಿ ಬರ ಪರಿಹಾರ ರೈತರ ಖಾತೆಗೆ ವರ್ಗಾವಣೆ ಆಗದೆ ಇರುವುದಕ್ಕೆ ಅಥವಾ ಯಾವುದೇ ರೀತಿಯ ಯೋಜನೆಗಳು ಕೂಡ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ಅವರವರ ಖಾತೆಗೆ ಹೋಗದೆ ಇರೋದಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳದೆ ಇರುವುದೇ ಪ್ರಮುಖ ಕಾರಣವಾಗಿರುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ. ಹೀಗಾಗಿ ತಮ್ಮ ಬ್ಯಾಂಕ್ ಖಾತೆ ಮಾಡಿರುವಂತಹ ಬ್ಯಾಂಕಿನ ಬ್ರಾಂಚ್ ಗೆ ಹೋಗಿ ನೇರವಾಗಿ ಈ ಲಿಂಕ್ ಮಾಡಿಸುವಂತ ಕೆಲಸವನ್ನು ಮಾಡಿಕೊಂಡು ಬರಬೇಕು.
  3. ನೀವು ಒಂದು ವೇಳೆ ಬರ ಪರಿಹಾರ ಯೋಜನೆಯ ಪಡೆದುಕೊಳ್ಳಲು ಇಟ್ಟಿರುವಂತಹ ಬ್ಯಾಂಕ್ ಅಕೌಂಟ್ ನಲ್ಲಿ ಯಾವುದೇ ರೀತಿಯ ಟ್ರಾನ್ಸಾಕ್ಷನ್ ಅನ್ನು ಕೆಲವೊಂದು ನಿರ್ದಿಷ್ಟ ಸಮಯಗಳ ವರೆಗೆ ಮಾಡದೆ ಹೋದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ರದ್ದಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆ ಸಂದರ್ಭದಲ್ಲಿ ಕೂಡ ಹಣ ಬಾರದೆ ಇರಬಹುದಾಗಿದೆ. ಇದನ್ನು ಕೂಡ ನೀವು ನೇರವಾಗಿ ಬ್ಯಾಂಕಿಗೆ ಹೋಗಿ ಸರಿ ಮಾಡಿಕೊಂಡು ಬರಬೇಕು.
  4. ಕೊನೆಯದಾಗಿ ನಿಮ್ಮ ಆರ್‌ಟಿಸಿನಲ್ಲಿರುವಂತಹ ಹೆಸರು ಹಾಗೂ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತಹ ಹೆಸರು ಮ್ಯಾಚ್ ಆಗದೆ ಹೋದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಹೋಗಿ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ.

ಬರ ಪರಿಹಾರದ ಹಣವನ್ನು ಪಡೆದುಕೊಳ್ಳದೆ ಇರುವಂತಹ ರೈತರ ಲಿಸ್ಟ್ ಅನ್ನು ಯೋಜನೆ ಅಧಿಕೃತ ವೆಬ್ ಸೈಟ್ ಗೆ ಹೋಗಿ ತಿಳಿದುಕೊಳ್ಳಬಹುದಾಗಿದೆ.

agriculture