Reliance-Jio Recharge Plan: ಏರ್ಟೆಲ್ ಗೆ ಮತ್ತೊಂದು ಶಾಕ್ ಕೊಟ್ಟ ಅಂಬಾನಿ ಜಿಯೋ: ಕೇವಲ 222ರೂ.ಗೆ ಕೊಟ್ಟ ಆಕರ್ಷಕ ಆಫರ್ ಏನು ಗೊತ್ತೇ?

Reliance-Jio Recharge Plan: ಭಾರತದ ದೈತ್ಯ ಟೆಲಿಕಾಂ ಕಂಪನಿ (Telecom Company) ಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ಗ್ರಾಹಕರಿಗೆ ಇದೀಗ ಹೊಸದೊಂದು ರಿಚಾರ್ಜ್ ಪ್ಲಾನ್ (Recharge Plan) ಬಿಡುಗಡೆ ಮಾಡಿದೆ ಈ ಪ್ಲಾನ್ ಬಗ್ಗೆ ಕೇಳುತ್ತಿದ್ದಂತೆ ಗ್ರಾಹಕರು ಮುಗಿಬಿದ್ದು ಈ ಪ್ಲಾನ್ ರಿಚಾರ್ಜ್ ಮಾಡಿಸಿಕೊಳ್ಳುತ್ತಿದ್ದಾರೆ. ಇದು ಆಡ್ ಆನ್ (Addon)  ರಿಚಾರ್ಜ್ ಪ್ಲಾನ್ ಆಗಿದ್ದು ಅತಿ ಕಡಿಮೆ ಬೆಲೆಗೆ ಅತಿ ಹೆಚ್ಚು ಡಾಟಾ (Data) ಸಿಗುವಂತೆ ಮಾಡುವ ಪ್ಲಾನ್ ಆಗಿದೆ.

ರಿಯಲಾಯ್ಸ್ ಜಿಯೋ ಇದುವರೆಗೆ ತನ್ನ ಗ್ರಾಹಕರಿಗೆ ಅನುಕೂಲವಾದಂತಹ ಸಾಕಷ್ಟು ರಿಚಾರ್ಜ್ ಪ್ಲಾನ್ ಗಳನ್ನು ನೀಡಿದೆ. ಮೊದಲು ಉಚಿತವಾಗಿ ಜಿಯೋ ಸಿಮ್ ವಿತರಣೆ ಮಾಡಿದ್ದಲ್ಲದೆ ಅತಿ ಕಡಿಮೆ ಬೆಲೆಗೆ ಹೈ ಸ್ಪೀಡ್ (High Speed Data)ಡಾಟಾ ಅನಿಯಮಿತ ಧ್ವನಿ ಕರೆಗಳು, ಎಸ್ಎಂಎಸ್ ಎಲ್ಲ ರೀತಿಯ ಸೌಲಭ್ಯವನ್ನು ಒದಗಿಸಿತ್ತು. ಇದೀಗ ಜಿಯೋ ಪರಿಚಯಿಸುವ ಈ ಹೊಸ ಯೋಜನೆಯ ಹೆಸರೇ ಫುಟ್ಬಾಲ್ ವಿಶ್ವಕಪ್ ಡೇಟಾ ಪ್ಯಾಕ್!

ಜಿಯೋ ಫುಟ್ಬಾಲ್ ವಿಶ್ವಕಪ್ ಡಾಟಾ ಪ್ಯಾಕ್ ನಲ್ಲಿ ಏನಿದೆ?

ಜಿಯೋ ಪರಿಚಯಿಸುವ ಈ ಹೊಸ ಡಾಟಾ ರಿಚಾರ್ಜ್ ಪ್ಲಾನ್ 222 ರೂಪಾಯಿಗಳಿಗೆ ಸಿಗುತ್ತದೆ. ಈ ಯೋಜನೆಯಂತೆ ಜಿಯೋಗ್ರಾಹಕರು 30 ದಿನಗಳ ವ್ಯಾಲಿಡಿಟಿಯಲ್ಲಿ 50ಜಿಬಿ ಡಾಟಾ ಪಡೆಯಲಿದ್ದಾರೆ ಅಂದರೆ ಒಂದು ದಿನ ತಿಂಗಳುಗಳ ಕಾಲ 50ಜಿಬಿ 4ಜಿ ಹೈ ಸ್ಪೀಡ್ ಡಾಟಾವನ್ನು ಪಡೆಯಬಹುದು. ಇದು ಆಡ್ ಆನ್ ಡೇಟಾ ಯೋಜನೆಯಾಗಿದೆ. ಹಾಗಾಗಿ ಈಗಾಗಲೇ ಬಳಸುತ್ತಿರುವ ರಿಚಾರ್ಜ್ ಪ್ಲಾನಿಗೆ ಇದನ್ನ ಸೇರಿಸಿಕೊಳ್ಳಬಹುದು ಎಂದು ಜಿಯೋ ಸಂಸ್ಥೆ ತಿಳಿಸಿದೆ.

ಈ ಹಿಂದೆ ಒಂದು ತಿಂಗಳ ವ್ಯಾಲಿಡಿಟಿ ಅವಧಿಯಲ್ಲಿ 30ಜಿಬಿ ಹೈ ಸ್ಪೀಡ್ ಡಾಟಾ ಪ್ರಯೋಜನವನ್ನು 181 ಪ್ಲಾನ್ ನಲ್ಲಿ ಪಡೆಯಬಹುದಿತ್ತು. ನಂತರ ಆ ಪ್ಲಾನ್ ಅನ್ನು 241 ರೂಪಾಯಿಗಳಿಗೆ ಹೆಚ್ಚಿಸಿ 40 ಜಿ ಬಿ ಹೈ ಸ್ಪೀಡ್ ಡೇಟಾ ನೀಡಲಾಗುತ್ತಿತ್ತು ಆದರೆ ಇದೀಗ ಕೇವಲ 222 ರೂಪಾಯಿಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಡಾಟಾವನ್ನು ನೀಡುತ್ತಿದೆ. ಅಂದರೆ ಒಂದು ತಿಂಗಳ ಅವಧಿಗೆ ಸಂಪೂರ್ಣ ಐವತ್ತು ಜಿಬಿಗಳ ಹೈ ಸ್ಪೀಡ್ ಡಾಟಾ ಪ್ರಯೋಜನವನ್ನು ಗ್ರಾಹಕರು ಪಡೆಯಬಹುದು. ಇದನ್ನೂ ಈದಿ: Business Idea:ಈ ತಿಂಗಳಿನಲ್ಲಿ ನೀವು ಈ ಬ್ಯುಸಿನೆಸ್ ಆರಂಭಿಸುವುದರಿಂದ ತುಂಬಾನೆ ಲಾಭ; ಸುಮ್ಮನೆ ಕೂರುವ ಬದಲು ಪ್ರಯತ್ನ ಪಡೋದ್ರಲ್ಲಿ ತಪ್ಪಿಲ್ಲ ಅಲ್ವಾ. ಯಾವ ಉದ್ಯಮ ಗೊತ್ತೇ?

ಇನ್ನು ಜಿಯೋ ಗ್ರಾಹಕರು ಇದಕ್ಕಿಂತ ಹೆಚ್ಚಿನ ಡಾಟಾ ಬಳಸಲು ಇಚ್ಚಿಸಿದರೆ ಜೀಯೋ ತನ್ನ ಗ್ರಾಹಕರಿಗಾಗಿ ಕೆಲವು ಯೋಜನೆಗಳನ್ನು ಪರಿಚಯಿಸಿದೆ. 301 ರೂಪಾಯಿಗಳ ಯೋಜನೆ ಕೂಡ 30 ದಿನಗಳ ವ್ಯಾಲಿಡಿಟಿ ಹೊಂದಿದೆ ಇದರಲ್ಲಿಯೂ ಜಿಬಿ ಹೈ ಸ್ಪೀಡ್ ಟಾಟಾ ಸಿಗುತ್ತದೆ ಇದು 55 ದಿನಗಳ ವ್ಯಾಲಿಡಿಟಿ ಹೊಂದಿದ್ದು 55ಜಿಬಿ ಹೈ ಸ್ಪೀಡ್ ಡಾಟಾವನ್ನು ನೀಡುತ್ತದೆ. ರೂ.222 ಪ್ಯಾಕ್ 31 ಯೋಜನೆಗೆ ಸರಿ ಸಮಾನವಾಗಿದೆ. ಅಂದರೆ ಮೊದಲು ಬರಿಸುತ್ತಿದ್ದ ಅದೇ 50ಜಿಬಿ ಡಾಟಾಗೆ 80 ರೂಪಾಯಿ ಕಡಿಮೆ ಹಣವನ್ನ ನೀಡಿ ರಿಚಾರ್ಜ್ ಮಾಡಿಕೊಳ್ಳಬಹುದು. 64 ಕೆ ಬಿ ಪಿ ಎಸ್ ವೇಗದಲ್ಲಿ ಇಂಟರ್ನೆಟ್ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಜಿಯೋ ಅಧಿಕೃತ ವೆಬ್ಸೈಟ್ ನೋಡಬಹುದು.

airtel-vs-jio-plan-in-kannadaJioJio new planRecharge PlanTelecom Company