Akshaya Tritiya 2024: ನಾಳೆ, ಅಕ್ಷಯ ತೃತೀಯದ ದಿನ ಮನೆಯ ಮುಖ್ಯ ದ್ವಾರದ ಮೇಲೆ ಇದನ್ನು ಬರೆದಿಡೊ; ಲಕ್ಷ್ಮಿ ಮನೆ ಬಿಟ್ಟು ಹೋಗುವುದಿಲ್ಲ! ದುಡ್ಡಿಗೆ ಕೊರತೆ ಅಗುವುದಿಲ್ಲ!

Akshaya Tritiya 2024: ಅಕ್ಷಯ ತೃತೀಯ ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಮೇ 10ರಂದು ಈ ಬಾರಿ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯ ದಿನದಂದು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿ ಮಾಡುವುದು ಮನೆಗೆ ಲಕ್ಷ್ಮೀಯನ್ನು ಆಹ್ವಾನ ಮಾಡಿದ್ದಕ್ಕೆ ಸಮನಾಗಿರುತ್ತದೆ ಎಂಬುದಾಗಿ ನಂಬಿಕೆ ಇದೆ. ಇದರಿಂದಾಗಿ ಮನೆಯಲ್ಲಿ ಹಣದ ಹರಿವು ಕೂಡ ಹೆಚ್ಚಾಗಲಿದೆ ಎನ್ನುವಂತಹ ವಿಶ್ವಾಸ ಕೂಡ ಇದೆ. ಅದೇ ರೀತಿಯಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರದ ಮೇಲೆ ಈ ರೀತಿ ಬರೆದರೆ ಲಕ್ಷ್ಮಿ ಮನೆ ಬಿಟ್ಟು ಹೋಗುವುದಿಲ್ಲ ಎಂಬುದಾಗಿ ಕೂಡ ನಂಬಿಕೆಯಿದು ಬನ್ನಿ ಇದರ ಬಗ್ಗೆ ಸಂಪೂರ್ಣ ವಿವರವನ್ನು ಪಡೆದುಕೊಳ್ಳೋಣ.

ಅಕ್ಷಯ ತೃತೀಯದ ದಿನದಂದು ಈ ರೀತಿ ಮನೆಯ ಮುಖ್ಯ ದ್ವಾರದ ಮೇಲೆ ಬರೆದರೆ ಲಕ್ಷ್ಮಿ ಮನೆ ಬಿಟ್ಟು ಹೋಗುವುದಿಲ್ಲ!

ಅಕ್ಷಯ ತೃತೀಯ ಎನ್ನುವುದು ಮಹಾ ವಿಷ್ಣು ಹಾಗು ಶ್ರೀ ಲಕ್ಷ್ಮಿ ಪೂಜಿಸುವುದಕ್ಕೆ ಹಾಗೂ ಅವರ ಪೂಜೆಯಿಂದ ಅದೃಷ್ಟವನ್ನು ಸಂಪಾದನೆ ಮಾಡುವುದಕ್ಕೆ ಇರುವಂತಹ ದಿನವಾಗಿದೆ. ಈ ಸಮಯದಲ್ಲಿ ನೀವು ವಿಶೇಷವಾಗಿ ಮನೆಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಹಾಗೂ ನೀವು ಸ್ನಾನ ಮಾಡುವ ಸಂದರ್ಭದಲ್ಲಿ ಕೂಡ ನೀರಿಗೆ ಸ್ವಲ್ಪ ಕಲ್ಲುಪ್ಪು ಹಾಗು ಅರಿಶಿನ ಪುಡಿಯನ್ನು ಸೇರಿಸಿ ನಂತರ ಬಳಸಬೇಕು. ಈಗ ಮಾಡಿದ್ರೆ ನಿಮ್ಮ ಮನೆಯಲ್ಲಿ ಹಾಗೂ ನಿಮ್ಮ ಮೈ ಮೇಲೆ ಇರುವಂತಹ ಎಲ್ಲ ನೆಗೆಟಿವ್ ಎನರ್ಜಿಗಳು ದೂರವಾಗುತ್ತವೆ. ಇದರ ಜೊತೆಗೆ ದೇವರ ಕೋಣೆಯನ್ನು ಕೂಡ ಇದೇ ರೀತಿಯಲ್ಲಿ ಸ್ವಚ್ಛಗೊಳಿಸಬೇಕಾಗುತ್ತದೆ.

ಅಕ್ಷಯ ತೃತೀಯದ ದಿನದಂದು ನೀವು ಅಪ್ಪಿತಪ್ಪಿಯು ಕೂಡ ತಲೆ ಕೂದಲನ್ನು ಹಾಗೂ ಕೈಕಾಲು ಉಗುರನ್ನು ತೆಗೆಸುವಂತಹ ಕೆಲಸವನ್ನು ಮಾಡಬೇಡಿ ಅದು ಒಳ್ಳೆಯದಲ್ಲ. 5 ಬಿಳಿಯ ವಸ್ತುಗಳನ್ನು ಹೊರಗೆ ದಾನ ನೀಡುವುದು ಕೂಡ ಒಳ್ಳೆಯದಲ್ಲ. ಇವುಗಳಲ್ಲಿ ಉಪ್ಪು ಸಕ್ಕರೆ ಮೊಸರುಗಳಂತಹ ವಸ್ತುಗಳು ಕೂಡ ಸೇರುತ್ತವೆ. ಎಲ್ಲಕ್ಕಿಂತ ಪ್ರಮುಖವಾಗಿ ಅಕ್ಷಯ ತೃತೀಯ ದಿನದಂದು ಲಕ್ಷ್ಮಿ ದೇವಿಗೆ ಪೂಜೆ ಮಾಡುವ ಸಂದರ್ಭದಲ್ಲಿ ಆಕೆಯ ಕಾಲ ಕೆಳಗೆ ಒಂದು ಏಲಕ್ಕಿಯನ್ನು ಇಟ್ಟು ಪೂಜೆ ಮಾಡಿ ನಿಮಗೆ ಖಂಡಿತವಾಗಿ ಒಳ್ಳೆಯದಾಗುತ್ತದೆ. ಇನ್ನು ಮನೆಯ ಮುಖ್ಯ ದ್ವಾರದ ಮುಂದೆ ಏನು ಬರೆದರೆ ಒಳ್ಳೆಯದಾಗುತ್ತೆ ಹಾಗೂ ಮಹಾಲಕ್ಷ್ಮಿ ಮನೆ ಬಿಟ್ಟು ಹೋಗೋದಿಲ್ಲ ಅನ್ನೋದನ್ನ ನೀವು ತಿಳಿದುಕೊಳ್ಳಲು ಕುತೂಹಲ ಭರಿತರಾಗಿದ್ದೀರಿ ಎಂಬುದಾಗಿ ನಮಗೆ ತಿಳಿದಿದೆ. ಹಾಗಿದ್ರೆ ಬನ್ನಿ ಅದನ್ನು ಕೂಡ ತಿಳಿಯೋಣ.

ಅಕ್ಷಯ ತೃತೀಯ ದಿನದಂದು ಅರಶಿನದ ಪುಡಿಯನ್ನು ಪೇಸ್ಟ್ ರೀತಿಯಲ್ಲಿ ಮಾಡಿ ಅದನ್ನು ನಿಮ್ಮ ಮುಖ್ಯ ದ್ವಾರದ ಬಲ ಹಾಗೂ ಎಡಗಡೆಗಳಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು. ಇದರಿಂದಾಗಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾಳೆ. ನಿಮ್ಮ ಜೀವನದಲ್ಲಿ ಧನಕ ರಾಶಿ ನಿಮ್ಮ ಕಾಲ ಬುಡದಲ್ಲಿ ಬಂದು ಬೀಳಲಿದೆ. ನಿಮ್ಮ ಜೀವನದಲ್ಲಿ ಇರುವಂತಹ ಪ್ರತಿಯೊಂದು ಆರ್ಥಿಕ ಸಮಸ್ಯೆಗಳು ಕೂಡ ದೂರವಾಗಲಿವೆ. ಈ ಮೂಲಕ ನೀವು ಅಕ್ಷಯ ತೃತೀಯ ದಿನವನ್ನು ಅರ್ಥಗರ್ಭಿತವಾಗಿ ಆಚರಿಸಿದಂತಾಗುತ್ತದೆ.

Akshaya Tritiya 2024