Ambani Wedding:ಅಂಬಾನಿ ಮಗನ ಮದುವೆ ಮಾಡಿಸಿದ ಪೂಜಾರಿಗೆ ಸಿಕ್ಕ ದಕ್ಷಿಣೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??

Ambani Wedding: ನಮ್ಮ ಭಾರತ ದೇಶ ಹಾಗೂ ಏಷ್ಯಾ ಖಂಡದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವಂತಹ ಮುಖೇಶ್ ಅಂಬಾನಿ ಅವರ ಮಗನ ಮದುವೆ ಅದ್ದೂರಿಯಾಗಿ ನಡೆದಿರುವುದು ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈ ಮದುವೆನಾ ಭಾರತ ದೇಶದಲ್ಲಿ ಶತಮಾನಗಳ ಕಾಲ ನೆನಪಿಟ್ಟುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ಬರೋಬ್ಬರಿ ಈ ಮದುವೆ ಮಾಡಿಸುವುದಕ್ಕೆ 5000 ಕೋಟಿ ರೂಪಾಯಿಗಳನ್ನು ಅಂಬಾನಿ ಖರ್ಚು ಮಾಡಿದ್ದಾರೆ. ಇನ್ನು ದೇಶ ವಿದೇಶದ ದೊಡ್ಡಮಟ್ಟದ ಸೆಲೆಬ್ರಿಟಿಗಳು ಕೂಡ ಈ ಮದುವೆಯಲ್ಲಿ ಭಾಗವಹಿಸಿದ್ದಾರೆ ಹಾಗೂ ದೊಡ್ಡಮಟ್ಟದ ಗಿಫ್ಟ್ಗಳನ್ನು ಕೂಡ ಅಂಬಾನಿ ಕುಟುಂಬದ ಪಡೆದುಕೊಂಡಿದ್ದಾರೆ. ಬಹುತೇಕ ದೊಡ್ಡಮಟ್ಟದ ಎಲ್ಲಾ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಕೂಡ ಈ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಆದರೆ ಇವತ್ತಿನ ಈ ಲೇಖನದಲ್ಲಿ ನಾನು ನಿಮಗೆ ಹೇಳೋದಕ್ಕೆ ಹೊರಟಿರೋದು ಒಂದು ವಿಶೇಷ ಮಾಹಿತಿಯ ಬಗ್ಗೆ.

ಅಂಬಾನಿ ಮಗನ ಮದುವೆ ಮಾಡಿಸಿರುವ ಪೂಜಾರಿ ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ?

ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ಕೂಡ ಅಂಬಾನಿ ಮಗನ ಮದುವೆ ಮಾಡಿಸಿರುವಂತಹ ಪೂಜಾರಿಯಾಗಿರುವ ಪಂಡಿತ್ ಚಂದ್ರಶೇಖರ್ ಶರ್ಮ ಅವರ ಬಗ್ಗೆ ಸಾಕಷ್ಟು ಮಾತುಕತೆಗಳು ವೈರಲ್ ಆಗುತ್ತಿವೆ. ಪ್ರಖ್ಯಾತ ಜ್ಯೋತಿಷ್ಯ ಶಾಸ್ತ್ರಜ್ಞರಾಗಿರುವಂತಹ ಇವರು ಮುಂದೆ ನಿಂತು ಅಂಬಾನಿ ಮಗನ ಮದುವೆಯನ್ನು ಮಾಡಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇವರು ಮದುವೆ ಮಾಡಿಸುವುದಕ್ಕಾಗಿ ಎಷ್ಟು ಹಣವನ್ನು ಪಡೆದುಕೊಂಡಿದ್ದಾರೆ ಅನ್ನೋದೇ ಈಗ ಕುತೂಹಲಕಾರಿ ವಿಚಾರವಾಗಿದೆ ಎಂದು ಹೇಳಬಹುದಾಗಿದೆ. ಗುಜರಾತಿನ ಜಾಮ್ ನಗರದಲ್ಲಿ ನಡೆದಿರುವಂತಹ ವಿವಾಹ ಸಂಬಂಧ ಪಟ್ಟಂತಹ ಕಾರ್ಯಕ್ರಮದಲ್ಲಿ ಕೂಡ ಇವರೇ ಮುಂದೆ ನಿಂತು ಎಲ್ಲಾ ಕಾರ್ಯಕ್ರಮಗಳನ್ನು ನೋಡಿಕೊಂಡಿದ್ದರು. ಕೇವಲ ಇಷ್ಟು ಮಾತ್ರವಲ್ಲ ಅಂಬಾನಿ ಕುಟುಂಬದಲ್ಲಿ ಯಾವುದೇ ರೀತಿಯ ಶುಭ ಕಾರ್ಯಕ್ರಮಗಳು ನಡೆದರೂ ಕೂಡ ಇವರೇ ಮುಂದೆ ನಿಂತು ಎಲ್ಲಾ ಕಾರ್ಯಕ್ರಮಗಳನ್ನು ನೋಡಿಕೊಳ್ಳುವುದು ಹೀಗಾಗಿ ಇವರು ಫ್ಯಾಮಿಲಿ ಪುರೋಹಿತರು ಅಂದ್ರು ಕೂಡ ತಪ್ಪಾಗಲಾರದು.

ಸಾಮಾನ್ಯವಾಗಿ 25000 ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಳ್ಳುವಂತಹ ಚಂದ್ರಶೇಖರ್ ಶರ್ಮ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯ ಮಗನ ಮದುವೆಯಲ್ಲಿ ಲಕ್ಷಗಟ್ಟಲೆ ಹಣವನ್ನು ಸಂಭಾವನೆಯ ರೂಪದಲ್ಲಿ ಪಡೆದುಕೊಂಡಿದ್ದಾರೆ ಅನ್ನುವುದಾಗಿ ತಿಳಿದು ಬಂದಿದೆ. ಕೇವಲ ಲಕ್ಷಗಟ್ಟಲೆ ಹಣವನ್ನು ಚಂದ್ರಶೇಖರ್ ಶರ್ಮ ಅವರು ಪೌರೋಹಿತ್ಯ ಮಾಡೋದಕ್ಕೆ ಪಡೆದುಕೊಂಡಿರುವುದು ಮಾತ್ರವಲ್ಲದೆ ಸಾಕಷ್ಟು ಬೆಲೆ ಬಾಳುವಂತಹ ದುಬಾರಿ ಉಡುಗೊರೆಗಳನ್ನು ಕೂಡ ಅಂಬಾನಿ ಕುಟುಂಬದಿಂದ ಇವರು ಪಡೆದುಕೊಂಡಿದ್ದಾರೆ ಅನ್ನೋದಾಗಿ ತಿಳಿದು ಬಂದಿದೆ.

ಅಂಬಾನಿ ಮದುವೆಗೆ ಬಂದಿರುವಂತಹ ಕೆಲವು ಸೆಲೆಬ್ರಿಟಿಗಳಿಗೆ ಎರಡು ಕೋಟಿ ರೂಪಾಯಿ ಮೌಲ್ಯದ ವಾಚ್ ಗಿಫ್ಟ್ ಆಗಿ ಸಿಕ್ಕಿರುವಾಗ ಇದೆಲ್ಲಾ ಏನು ಅಲ್ಲ ಬಿಡಿ ಅಂತ ಕೆಲವರು ಹೇಳಿದ್ದಾರೆ. ಒಟ್ಟಾರೆಯಾಗಿ ಇಡೀ ವಿಶ್ವವೇ ನೆನಪಿಟ್ಟುಕೊಳ್ಳುವ ರೀತಿಯಲ್ಲಿ 5000 ಕೋಟಿ ರೂಪಾಯಿ ಖರ್ಚಿನಲ್ಲಿ ಅಂಬಾನಿ ಕುಟುಂಬ ಈ ಮದುವೆಯನ್ನು ಮಾಡಿ ಮುಗಿಸಿದ್ದು ಕೊನೆಗೂ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಇಬ್ರು ಕೂಡ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Ambani Wedding