Ration Card: ಕ್ಯೂನಲ್ಲಿ ನಿಲ್ಲೋದು ಬೇಡ, ತಿಂಗಳುಗಟ್ಟಲೆ ಕಾಯೋದು ಬೇಡ, ರೇಶನ್ ಕಾರ್ಡ್ ನೀವಿರುವಲ್ಲಿಯೇ ಬರುತ್ತದೆ ಹೇಗೆ ಗೊತ್ತೇ?

Ration Card: ಆಧಾರ್ ಕಾರ್ಡ್ ಗೆ ಇರುವ ಮಾನ್ಯತೆ ದೇಶದಲ್ಲಿ ರೇಶನ್ ಕಾರ್‍ಡ್ ಗೂ ಇದೆ. ಕೇವಲ, ಸರ್ಕಾರ ಸೌಲಭ ಪಡೆಯುವುದಕ್ಕೆ ಮಾತ್ರವಲ್ಲ. ನಿಮ್ಮ ಗುರುತಿನ ಚೀಟಿಯಾಗಿ ರೇಶನ್ ಕಾರ್ಡ್ ಬಳಸಬಹುದು. ಆಧಾರ ಕಾರ್ಡ್ (Adhar Card) ಪಡೆಯುವುದಕ್ಕೂ ಮೂಲ ದಾಖಲೆಗಾಗಿ ರೇಶನ್ ಕಾರ್ಡ್ ನೀಡಬೇಕು. ನೀವು ಇನ್ನೂ ರೇಶನ್ ಕಾರ್ಡ್ ಹೊಂದಿಲ್ಲದೇ ಇದ್ದರೆ ಚಿಂತೆ ಬೇಡ. ಈಗ ಮೊದಲಿನಂತೆ ಕ್ಯೂ ನಿಂತು ದಿನಗಟ್ತಲೇ ಅಲೆದು ರೇಶನ್ ಕಾರ್ಡ್ ಗೆ ಅರ್ಜಿ (Application) ಸಲ್ಲಿಸಬೇಕಾಗಿಲ್ಲ. ಕೆಲವೇ ಕ್ಷಣಗಳಲ್ಲಿ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಕುಳಿತಲ್ಲಿಯೇ ರೇಶನ್ ಕಾರ್ಡ್ ಬರುವಂತೆ ಮಾಡಿಕೊಳ್ಳಬಹುದು. ಆನ್ ಲೈನ್ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

Ration Card: ಕ್ಯೂನಲ್ಲಿ ನಿಲ್ಲೋದು ಬೇಡ, ತಿಂಗಳುಗಟ್ಟಲೆ ಕಾಯೋದು ಬೇಡ, ರೇಶನ್ ಕಾರ್ಡ್ ನೀವಿರುವಲ್ಲಿಯೇ ಬರುತ್ತದೆ ಹೇಗೆ ಗೊತ್ತೇ? https://sihikahinews.com/amp/apply-for-ration-card-in-online/

ಆನ್ ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

  • http://ahara.kar.nic.in ವೆಬ್ ಸೈಟ್ ಗೆ ತೆರೆಯಿರಿ. ಅಲ್ಲಿ ಈ ಸೇವೆ ಮೇನು ಕ್ಲಿಕ್ ಮಾಡಿ. ಅಲ್ಲಿ ಹೊಸ ರೇಷನ್ ಕಾರ್ಡ್ ಇನ್ನು ಆಯ್ಕೆ ಮಾಡಿಕೊಳ್ಳಬೇಕು. ರೇಶನ್ ಕಾರ್ಡ್ ಅರ್ಜಿ ಸಲ್ಲಿಸಲು ಕನ್ನಡ ಅಥವಾ ಇಂಗ್ಲೀಷ್ ಭಾಷೆಯನ್ನು  ಸೆಲೆಕ್ಟ್ ಮಾಡಿ. ಈಗ ‘ನ್ಯೂ ರೇಶನ್ ಕಾರ್ಡ್ ರಿಕ್ವೆಸ್ಟ್ (New Ration Card Request)’ ಮೇಲೆ ಕ್ಲಿಕ್ ಮಾಡಿ.
  • ಈಗ ’ನಾನ್ ಪ್ರಿಯಾರಿಟಿ ಹೌಸ್ ಹೋಲ್ಡ್ Non-Priority Household (NPHH) ಮೇಲೆ ಕ್ಲಿಕ್ ಮಾಡಿ. ತಪ್ಪಾಗದೇ ಇರುವ ಹಾಗೆ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ. ಮೊಬೈಲ್ ಗೆ ಒಟಿಪಿ ಬರುತ್ತದೆ. ಅದನ್ನು ಸ್ಕೀನ್ ಮೇಲೆ ಬಾಕ್ಸ್ ನಲ್ಲಿ ಹಾಕಿ ಒಕೆ ಕೊಡಿ.  
  •  ರೇಷನ್ ಕಾರ್ಡ್ ನ ನಿಮ್ಮ ಹೆಸರು, ಜನನ ದಿನಾಂಕ, ಲಿಂಗ, ಛಾಯಾಚಿತ್ರ ಮೊದಲಾದವುಗಳು ಸ್ಕೀನ್ ಮೇಲೆ ಕಾಣಿಸುತ್ತದೆ. ಈಗ ಫಿಂಗರ್ ಪ್ರಿಂಟ್ ವೆರಿಫಿಕೇಶನ್ ಮಾಡಿಕೊಳ್ಳಬೇಕು.  ಬೆರಳಚ್ಚು ( Finger Print Verification) ಕೊಟ್ಟು ವೇರಿಫಿಕೇಶನ್ ಮಾಡಿ ಕೊಳ್ಳಬೇಕು. ನಿಮ್ಮ ಆಧಾರ್ ಮಾಹಿತಿ ಸರಿಯಾಗಿದ್ದರೆ ಆಡ್ (Add) ಕ್ಲಿಕ್ ಮಾಡಿ, ಅರ್ಜಿ ಸಂಖ್ಯೆ ಜನರೇಟ್ ಆಗುತ್ತದೆ.
  • ಕುಟುಂಬ ಸದಸ್ಯರ ಮಾಹಿತಿ, ಸಂಬಂಧವನ್ನು ಉಲ್ಲೇಖಿಸಿದ ಬಳಿಕ ಅಪ್ಲಿಕೇಷನ್ ಸಂಖ್ಯೆ ಜನರೇಟ್ ಆಗುತ್ತದೆ.
  • ವಾರ್ಡ್, ಏರಿಯಾವನ್ನು ಆಯ್ಕೆ ಮಾಡಿಕೊಳ್ಳಿ, ಆಟೋ ಸೆಲೆಕ್ಟ್ ಆಪ್ಶನ್ ಇರುತ್ತದೆ. ಈ ಎಲ್ಲಾ ಹಂತವನ್ನು ಮುಗಿಸಿದ ನಂತರ  Save ಬಟನ್ ಕ್ಲಿಕ್ ಮಾಡಿ. ಜನರೆಟ್ ಆರ್ ಸಿ (Generate RC) ಆಯ್ಕೆ ಮಾಡಿದರೆ ಪ್ರಿಂಟ್ ಕೂಡಾ ಪಡೆಯಬಹುದು.

ನೀವು ಆನ್ ಲೈನ್ ಅಪ್ಲಿಕೇಸನ್ ಹಾಕಿದ ಮೇಲೆ ದಾಖಲೆಗಳು ಸರಿಯಾಗಿ ಇದ್ದಲ್ಲಿ, ಪೋಸ್ಟ್ ಮೂಲಕ ರೇಷನ್ ಕಾರ್ಡ್ ನಿಮ್ಮ ಮನೆಗೇ ಬರುತ್ತದೆ. 70 ರೂಪಾಯಿ ಸೇವಾ ಶುಲ್ಕ ಪಾವತಿಸಿ ಕಾರ್ಡ್ ಪಡೆಯಿರಿ.

Online applicationRation Cardಅರ್ಜಿ ಸಲ್ಲಿಸುವುದು