Arecanut: ಕಡೆಗೂ ಅಡಿಕೆ ಹಾಗೂ ಕಾಳು ಮೆಣಸು ಬೆಳೆಯುವ ರೈತರ ಗೋಳನ್ನು ಅರ್ಥ ಮಾಡಿಕೊಂಡ ಸರ್ಕಾರ: ಎಂಥಾ ಬಂಪರ್ ಆಫರ್ ಸಿಕ್ಕಿದೆ ಗೊತ್ತೇ?

Arecanut: ತೋಟಗಾರ ಇಲಾಖೆ (Department of Horticulture) 2023- 24ರ ಹವಾಮಾನಧಾರಿತ ಬೆಳೆವಿಮೆ (weather based crop insurance scheme) ಯೋಜನೆಯನ್ನು ಮರು ವಿನ್ಯಾಸಗೊಳಿಸಿದೆ. ಇದರಿಂದ ಹಲವು ರೈತರಿಗೆ (Farmer) ಪ್ರಯೋಜನವಾಗಲಿದೆ. ಅದರಲ್ಲೂ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಬೆಳೆಯುವ ರೈತರಿಗೆ ಕೂಡ ಇದರಿಂದ ಹೆಚ್ಚು ಲಾಭ ಸಿಗುತ್ತದೆ. ಹಾಗಾಗಿ ರೈತರು ನೋಂದಣಿ ಮಾಡಿಕೊಳ್ಳಲು ಕರೆ ನೀಡಿದ್ದು ಕೂಡಲೇ ರೈತರು ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಜೂನ್ 26ರಂದು ವಿಧಾನಪರಿಷತ್ ಸದಸ್ಯ ಬಿಜೆಪಿ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ತೋಟಗಾರಿಕಾ ಇಲಾಖೆಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ವ್ಯಾಪ್ತಿಯ ಅಡಿಗೆ, ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಕೂಡ ಸೇರಿಸಬೇಕು ಅವರಿಗೂ ಸರಿಯಾದ ವಿಮೆ ಸಿಗಬೇಕು ಎಂದು ಆಗ್ರಹ ಪಡಿಸಿದ್ದರು. ಅದೇ ಪ್ರಕಾರ ಈಗ ಅಡಿಕೆ ಬೆಳೆಗೂ ಕೂಡ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆ ದೊರೆಯುತ್ತಿದೆ.

ಎಷ್ಟು ಸಿಗಲಿದೆ ಬೆಳೆ ವಿಮೆ?

ಹವಾಮಾನಾಧಾರಿತ ಬೆಳೆ ವಿಮೆ ರೈತರ ಅಡಿಕೆಗಳಿಗೆ ಪ್ರತಿ ಹೆಕ್ಟರಿಗೆ 1,28,000 ಸಿಗಲಿದೆ. ಅಂದರೆ ಶೇಕಡ ಐದರಷ್ಟು ಪ್ರತಿ ಕಂತಿಗೆ 6,400 ರೂಪಾಯಿಗಳನ್ನು ಪಾವತಿಸಬೇಕು. ಇನ್ನು ಕಾಳುಮೆಣಸು ಪ್ರತಿ ಎಕರಿಗೆ 47,000 ವಿಮಾ ಮೊತ್ತ ಇದ್ದು, ಪ್ರತಿಕಂತಿಗೆ 2350ರೂ. ಗಳನ್ನು ಪಾವತಿಸಿ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ವಿಮಾ ಕಂತು ಪಾವತಿ ಮಾಡಲು ಜುಲೈ 15 ರವರೆಗೆ ಅವಕಾಶ ನೀಡಲಾಗಿದೆ. ಹತ್ತಿರದ ಬ್ಯಾಂಕ್ ಅಥವಾ ಡಿಜಿಟಲ್ ಈ ಸೇವ ಕೇಂದ್ರಗಳಲ್ಲೂ ರೈತರು ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು.

ವಿಮೆ ಮಾಡಿಸುವುದರಿಂದ ಅತ್ಯಂತ ದೊಡ್ಡ ಪ್ರಯೋಜನ ಎಂದರೆ ವಿಮೆ ರಕ್ಷಣೆ ಅವಧಿ ಮುಗಿದ ನಂತರ 45 ದಿನಗಳ ಒಳಗೆ ವಿಮಾ ಕಂಪನಿ ಹವಾಮಾನದಿಂದ ಆಗಿರುವ ಪರಿಹಾರ ನಷ್ಟವನ್ನು ತುಂಬಿ ಕೊಡುತ್ತದೆ. ಬೆಳೆ ಸಾಲ ತೆಗೆದುಕೊಂಡಿರುವವರು ಹಾಗೂ ಸಾಲ ತೆಗೆದುಕೊಳ್ಳದೆ ಇರುವವರು ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವಾಣಿಜ್ಯ ಗ್ರಾಮೀಣ ಸಹಕಾರಿ ಬ್ಯಾಂಕ್, ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು.

ArecanutBest News in KannadaFarmerhorticultureinsuranceKannada Trending NewsLive News KannadaNews in Kannadapeppar crop