Arecanut price: ಅಡಿಕೆ ಬೆಳೆಗಾರರಿಗೆ ಸ್ವಲ್ಪ ಕಾಯಿರಿ; ಅಡಿಕೆ ಬೆಲೆಯಲ್ಲಿ ಏರಿಕೆ ಯಾಗುವ ಸಾಧ್ಯತೆ ಇದೆ: ಗರಿಷ್ಠ ಎಷ್ಟರವರಿಗೆ ಏರಿಕೆ ಆಗಬಹುದು ಗೊತ್ತಾ ಬೆಲೆ?

Arecanut price: ಬೆಳೆ ಯಾವುದೇ ಇರಲಿ ಮಾರುಕಟ್ಟೆಯಲ್ಲಿ ಪ್ರತಿದಿನ ಅದರ ಬೆಲೆಯಲ್ಲಿ ಏರಿಳಿತ ಕಾಣುತ್ತೀರಿ. ಒಂದೊಂದು ಕಡೆ ಒಂದೊಂದು ರೀತಿಯ ದರ ಇರುತ್ತದೆ. ಒಮ್ಮೊಮ್ಮೆ ಆಗಸದ ಎತ್ತರಕ್ಕೆ ಏರಿದರೆ ಇನ್ನು ಕೆಲವೊಮ್ಮೆ ನೆಲಕಚ್ಚುತ್ತದೆ. ಈಗಂತೂ ಬಿಸಿಲು ಹೆಚ್ಚಾಗಿದ್ದು ರೈತರ ಕೃಷಿ ಭೂಮಿ ನೀರಿನ ಕೊರತೆಯಿಂದ ಒಣಗುವಂತೆ ಆಗಿದೆ ಹಾಗಾಗಿ ಮುಂದಿನ ಬೆಳೆಯ ಕಥೆ ಏನು ಎಂದು ರೈತರು ಕಂಗಲಾಗಿದ್ದಾರೆ ಈ ನಡುವೆ ಅಡಿಕೆ ಮಾರುಕಟ್ಟೆಯಲ್ಲಿ ಕೂಡ ದರದಲ್ಲಿ ಸಾಕಷ್ಟು ಏರಿಳಿತಗಳು ಆಗಿವೆ. ಇದನ್ನೂ ಓದಿ: RCB: ಸತತ ಪಂದ್ಯಗಳನ್ನು ಗೆಲ್ಲುತ್ತಿರುವ ಆರ್ಸಿಬಿ ಮತ್ತೊಂದು ಸಿಹಿ ಸುದ್ದಿ: ಖಡಕ್ ಆಟಗಾರ ತಂಡಕ್ಕೆ ಸೇರ್ಪಡೆ. ಇನ್ನು ಆರ್ಸಿಬಿಯನ್ನು ತಡೆಯಲು ಆಗಲ್ಲ. ಯಾರು ಗೊತ್ತೇ??

ಆದರೆ ಅಡಿಕೆ ಬೆಳೆಗಾರರಿಗೆ ಶುಭ ಸುದ್ದಿ ಇದೆ. ಸದ್ಯದಲ್ಲೇ ಅಡಿಕೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವಾರ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಸಾಕಷ್ಟು ಎಳಿತ ಕಂಡಿತ್ತು ರಾಶಿ ಅಡಿಕೆ ದರ 49,600 ರೂಪಾಯಿಗಳಿಗೆ ತಲುಪಿದೆ. ಅದೇ ರೀತಿ ಚಾಲಿ ಅಡಿಕೆ ಕೂಡ ಏರಿಕೆ ಕಾಣುತ್ತಿದೆ.

ಕಳೆದ ವರ್ಷ ಅಕಾಲಿಕ ಮಳೆಯ ಕಾರಣದಿಂದಾಗಿ ಅಡಿಕೆ ಕ್ವಾಲಿಟಿ ಕೂಡ ಚೆನ್ನಾಗಿರಲಿಲ್ಲ. ಹಾಗಾಗಿ ಅದರ ಸಹಜವಾಗಿಯೇ ಕಡಿಮೆ ಆಗಿತ್ತು ಈ ವರ್ಷ ಮಳೆ ಸುರಿದಿಲ್ಲ ಬಿಸಿಲಿನಿಂದ ಅಡಿಕೆ ತೋಟ ಕೂಡ ಬಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಅಡಿಕೆ ಬೆಳೆ ಹೆಚ್ಚಾದರೆ ಹಳೆ ಅಡಿಕೆಯ ಬೆಲೆಯೂ ಏರಿಕೆಯಾಗುತ್ತದೆ ನೀವೇನಾದರೂ ಹಳೆಯ ಅಡಿಕೆಯನ್ನು ಹಾಗೆ ಇಟ್ಟುಕೊಂಡಿದ್ದರೆ ಮೂರು ಹಾಗೂ ಕೊನೆಯ ವಾರದ ತನಕ ಕಾಯಬಹುದು ಏಕೆಂದರೆ ಮೇ ತಿಂಗಳಿನಲ್ಲಿ ಅಡಿಕೆ ದರ ಇನ್ನಷ್ಟು ಏರಿಕೆಯಾಗಲಿದೆ ಆ ಬಳಿಕ ಅಡಿಕೆ ದರದಲ್ಲಿ ಮತ್ತೆ ಕುಸಿತ ಕಾಣಬಹುದು. ಇದನ್ನೂ ಓದಿ: Dhana Rekha: ಕೈಯಲ್ಲಿ ಸೊಗಸಾದ ಧನ ರೇಖೆ ಒಂದು ಇದ್ದು ಬಿಟ್ಟರೆ ಯೋಚನೆ ಇಲ್ಲದೆ ಆರಾಮವಾಗಿ ಇದ್ದು ಬಿಡಿ. ಹಾಗಾದರೆ ಏನಿದು ಧನರೇಖೆ ?

ಇಂದು ಎಲ್ಲೆಲ್ಲಿ ಅಡಿಕೆ ದರ ಎಷ್ಟು ಇದೆ ನೋಡೋಣ. (24 ಏಪ್ರಿಲ್ 2023ರಿಂದ 26 ಏಪ್ರಿಲ್ 2023ರವರೆಗೆ)

ಕೊಪ್ಪ -ರಾಶಿ ಅಡಿಕೆ  44,399  ರೂ.  

ಚನ್ನಗಿರಿ  -ರಾಶಿ ಅಡಿಕೆ – 49,699 ರೂ.  

ದಾವಣಗೆರೆ – ರಾಶಿ ಅಡಿಕೆ  – 44,169 ರೂ.  

ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ)-ರಾಶಿ ಅಡಿಕೆ  44,299 ರೂ.  

ಶಿರಸಿ- ರಾಶಿ ಅಡಿಕೆ- 46,899 ರೂ.  

ಯಲ್ಲಾಪುರ – ರಾಶಿ ಅಡಿಕೆ – 48,899 ರೂ.  

ಬಂಟ್ವಾಳ ಹಳೆದು- 48,000 – 54,500 ರೂ.

ಬಂಟ್ವಾಳ- ಕೋಕ-12,500 – 25,000 ರೂ.

ಮಂಗಳೂರು -ಹೊಸದು- 25,876 -31,000 ರೂ.

ಪುತ್ತೂರು – ಕೋಕ-11,000 – 26,000 ರೂ.

ಪುತ್ತೂರು -ಹೊಸದು-32,000 – 38,000 ರೂ.

ಭದ್ರಾವತಿ- ರಾಶಿ ಅಡಿಕೆ – 45,099 ರೂ.  

ಹೊಸನಗರ-ರಾಶಿ ಅಡಿಕೆ – 45,770 ರೂ.  

ಸಾಗರ  -ರಾಶಿ ಅಡಿಕೆ – 48,199 ರೂ.  

ಶಿಕಾರಿಪುರ -ರಾಶಿ ಅಡಿಕೆ – 45,900 ರೂ.  

ತೀರ್ಥಹಳ್ಳಿ – ರಾಶಿ ಅಡಿಕೆ – 46,899 ರೂ.  

ತುಮಕೂರು-ರಾಶಿ ಅಡಿಕೆ-47,200 ರೂ. 

Arecanut priceBest News in Kannadakannada liveKannada NewsKannada Trending Newslive newsLive News Kannadalive trending newsNews in Kannadatop news kannada