Aryavardhan Guruji: ಬಿಗ್ ಬಾಸ್ ಮನೆಯಲ್ಲಿ ಸಾವಿರಾರು ಕೋಟಿ ಒಡೆಯ ಎಂದು ಹೇಳಿಕೊಂಡಿದ್ದ ಆರ್ಯವರ್ಧನ್ ಗುರೂಜಿ ಇದೀಗ ಹೆಂಡ್ತಿಗೆ ಆಟೋಗೆ ದುಡ್ಡು ಕೊಡಲು ಕೂಡ ಕಷ್ಟವಾಗುತ್ತಿದೆಯಂತೆ; ಏನಾಗಿದೆ ಗೊತ್ತೇ?

Aryavardhan Guruji: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಈ ಬಾರಿ ಬಿಗ್ ಬಾಸ್ ಸೀಸನ್ 9ರ ಸ್ಪರ್ಧೆಯಾಗಿ ಆರ್ಯವರ್ಧನ್ ಗುರೂಜಿ ಮನೆಯೊಳಗೆ ಪ್ರವೇಶಿಸಿದ್ದರು ಗುರೂಜಿ ಬಿಗ್ ಬಾಸ್ ಮನೆಗೆ ಹೋದಮೇಲೆ ಅವರ ಬಗ್ಗೆ ಸಾಕಷ್ಟು ವಿಚಾರಗಳು ತಿಳಿದವು. ಜನರಿಗೆ ಅವರು ಇನ್ನಷ್ಟು ಹತ್ತಿರವಾದರು.

ಆರ್ಯವರ್ಧನ ಗುರೂಜಿ ಸೀಸನ್ 9ರಲ್ಲಿ ಬಹಳಷ್ಟು ದಿನ ಮನೆಯ ಒಳಗೆ ಇದ್ದರು ತನ್ನ ಲೆಕ್ಕಾಚಾರದ ಪ್ರಕಾರವೇ ಮಧ್ಯರಾತ್ರಿ ಮನೆಯಿಂದ ಹೊರಗೆ ಬಂದಿದ್ದೇನೆ ಎಂದು ಗುರೂಜಿ ತಿಳಿಸಿದ್ದಾರೆ. ಇನ್ನು ಕ್ರಿಕೆಟ್ ಬಗ್ಗೆ ರಾಜಕೀಯದ ಬಗ್ಗೆ ನಂಬರ್ ಮೂಲಕವೇ ಭವಿಷ್ಯ ಹೇಳುವ ಆರ್ಯವರ್ಧನ್ ಬಿಗ್ ಬಾಸ್ ಮನೆಯಲ್ಲಿ ಚಾಣಾಕ್ಷತನದಿಂದ ಟಾಸ್ಕ್ ಕೂಡ ಆಡಿದ್ದಾರೆ. ಮೊದಮೊದಲು ಆರ್ಯವರ್ಧನ್ ಅಂದರೆ ಕಂಟೆಸ್ಟೆಂಟ್ ಗೆ ಅಷ್ಟೊಂದು ಇಷ್ಟವಾಗುತ್ತಿರಲಿಲ್ಲ ನಂತರ ಆರ್ಯವರ್ಧನ್ ಅವರ ತಮಾಷೆ ಅವರ ಮುಗ್ಧತೆ ಎಲ್ಲವೂ ಬಿಗ್ ಬಾಸ್ ಮನೆಯ ಒಳಗೆ ಇರುವವರೆಗೂ ಹೊರಗೆ ಇರುವವರೆಗೂ ಕೂಡ ಇಷ್ಟವಾಗಿತ್ತು. ಇನ್ನು ಅವರು ಎಲ್ಲರಿಗೂ ದಿನವೂ ಅಡುಗೆ ಮಾಡಿ ಬಡಿಸುವ ರೀತಿ ಜನರ ಮನಸ್ಸು ಗೆದ್ದಿತ್ತು.

ಇದೀಗ ಬಿಗ್ ಬಾಸ್ ಮನೆಯಿಂದ ಆಚೆ ಬಂದ ನನಗೆ ಬದುಕಲು ಕಷ್ಟವಾಗುತ್ತಿದೆ ಎಂದು ಆರ್ಯವರ್ಧನ್ ಗುರೂಜಿ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಬಿಗ್ ಬಾಸ್ ಮನೆ ನನಗೆ ಸೆಟ್ ಆಗಿತ್ತು ಅಲ್ಲಿ ಕೆಲವೇ ಜನರ ಜೊತೆಗೆ ಬೆರೆತು ಈಗ ಸಮಾಜದಲ್ಲಿ ಇರುವವರನ್ನು ಎದುರಿಸಲು ನನಗೆ ಕಷ್ಟವಾಗುತ್ತಿದೆ. ಬೇರೆ ಯಾವುದೇ ಕೆಲಸಕ್ಕೂ ನನಗೆ ಧೈರ್ಯ ಬರುತ್ತಿಲ್ಲ ನಾನು ಬದುಕುತ್ತೇನೆ ಇಲ್ಲವಾ ಎನ್ನುವಷ್ಟು ನನ್ನ ಯೋಚನೆಗಳು ಹಾಳಾಗಿವೆ. ಸದ್ಯ ನನ್ನ ಆಫೀಸ್ ತೆರೆಯುವ ಮನಸ್ಸು ಕೂಡ ಇಲ್ಲ ಆದರೂ ನನ್ನ ಕ್ಲೈಂಟ್ ನನ್ನ ಜೊತೆಗೆ ಇರುತ್ತಾರೆ ಎನ್ನುವ ನಂಬಿಕೆ ನನಗಿದೆ.

ಸದ್ಯಕ್ಕೆ ಆರ್ಥಿಕ ಪರಿಸ್ಥಿತಿ ಕೂಡ ಕೆಟ್ಟದಾಗಿದೆ. ಆಫೀಸ್ ನ ಬಾಡಿಗೆ ಕಟ್ಟಲು ಕೂಡ ನನ್ನ ಬಳಿ ಹಣ ಇಲ್ಲ ಕಾರ್ ಲೋನ್ ಕೂಡ ಮಾಡಿ ತೆಗೆದುಕೊಂಡಿರುವುದು. ಅದರ ಇಎಂಐ ಕೂಡ ಪೇ ಮಾಡಲು ಆಗುತ್ತಿಲ್ಲ ಹೆಂಡತಿಗೆ ಆಟೋಗೆ ಹಣ ಕೊಡಲು ಕೂಡ ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಆರ್ಯವರ್ಧನ ಗುರೂಜಿ ಹೇಳಿಕೊಂಡಿದ್ದಾರೆ. ತಾನು ಸಾವಿರ ಕೋಟಿ ರೂಪಾಯಿ ಒಡೆಯ, ಕಷ್ಟವನ್ನೇ ನೋಡಿಲ್ಲ ಎಂದಿಲ್ಲ ಬಿಗ್ ಬಾಸ್ ನಲ್ಲಿ ಹೇಳಿಕೊಂಡಿದ್ದ ಗುರೂಜಿ ಈಗ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರಂತೆ.

Aryavardhan Gurujibigg boss kannada season 9