Puneeth Rajkumar Road: ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power star Puneeth Rajkumar) ಇಂದು ನಮ್ಮೊಂದಿಗೆ ಇಲ್ಲದೆ ಇರಬಹುದು ಆದರೆ ಅವರು ಸಿನಿಮಾ (Film) ಮಾತ್ರಬಲ್ಲದೆ ಇನ್ನೂ ಹಲವಾರು ವಿಚಾರಗಳಿಗೆ ಕನ್ನಡಿಗರ ಮನದಲ್ಲಿ ಸದಾ ಕಾಲಕ್ಕೆ ನೆಲೆಸಿರುತ್ತಾರೆ. ಬೆಂಗಳೂರಿನಲ್ಲಿ 12 ಕಿಲೋಮೀಟರ್ ಉದ್ದದ ರಸ್ತೆಗೆ ಅಪ್ಪುವಿನ ಹೆಸರನ್ನ ಇಡಲಾಗಿದೆ. ಈ ಬಗ್ಗೆ ಅಪ್ಪು ಅವರ ಪತ್ನಿ ಅಶ್ವಿನಿ (Aswini) ಪುನೀತ್ ರಾಜಕುಮಾರ್ ಮಾತನಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.
ಬೆಂಗಳೂರಿನ ಮೈಸೂರು ರಸ್ತೆಯಿಂದ ವೆಗಾ ಸಿಟಿ ಮಾಲ್ ಜಂಕ್ಷನ್ ವರೆಗೆ ಹನ್ನೆರಡು ಕಿಲೋಮೀಟರ್ ಉದ್ದದ ರಸ್ತೆಗೆ ಪುನೀತ್ ರಾಜಕುಮಾರ್ ಎಂದು ಹೆಸರು ಇಡಲಾಗಿದೆ ಫೆಬ್ರುವರಿ 7ರಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಂದ ಈ ರಸ್ತೆಯ ಹೆಸರು ಉದ್ಘಾಟನೆಯಾಗಿದೆ. ಪುನೀತ್ ರಾಜಕುಮಾರ್ ಅವರ ಹೆಸರನ್ನು ರಸ್ತೆಗೆ ಇಟ್ಟಿದ್ದು ಅವರ ಅಭಿಮಾನಿಗಳಂತೂ ದಿಲ್ ಖುಷ್ ಆಗಿದ್ದಾರೆ. ಅದೇ ರೀತಿ ಪುನೀತ್ ರಾಜಕುಮಾರ್ ಅವರ ಕುಟುಂಬದವರು ಕೂಡ ಖುಷಿಯನ್ನು ವ್ಯಕ್ತಪಡಿಸಿದ್ದಾರೆ ಜೊತೆಗೆ ಸರ್ಕಾರಕ್ಕೆ ಧನ್ಯವಾದವನ್ನೂ ತಿಳಿಸಿದ್ದಾರೆ. ಇದನ್ನೂ ಓದಿ: Political News: ಭರ್ಜರಿ ಬೇಟೆ: ಜೆಡಿಎಸ್ ಗೆ ಬಿಗ್ ಶಾಕ್: ರಾಜ್ಯ ರಾಜಕಾರಣಕ್ಕೆ ಸುಮಲತಾ ಎಂಟ್ರಿ. ಯಾವ ಪಕ್ಷ ಗೊತ್ತೇ??
ಅಶ್ವಿನಿ ಪುನೀತ್ ರಾಜಕುಮಾರ್ ಹೇಳಿದ್ದೇನು?!
ರಾಜಕುಮಾರ್ ಅವರು ಬಿಟ್ಟುಹೋದ ಅದೆಷ್ಟೋ ಕೆಲಸಗಳನ್ನು ಇದೀಗ ಅಶ್ವಿನಿ ಪುನೀತ್ ಅವರು ನೋಡಿಕೊಳ್ಳುತ್ತಿದ್ದಾರೆ ಪತಿ ಜೊತೆಗಿಲ್ಲ ಎನ್ನುವ ಸಂಕಟದ ನಡುವೆಯೂ ಅವರು ಮಾಡುತ್ತಿದ್ದ ಎಲ್ಲಾ ಸಮಾಸಮುಕಿ ಕೆಲಸಗಳನ್ನು ಅಶ್ವಿನಿ ಅವರೇ ನಿಭಾಯಿಸುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಹೆಸರನ್ನು ಬೆಂಗಳೂರಿನ ರಸ್ತೆಗೆ ಇಟ್ಟಿರುವುದಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಕೃತಜ್ಞತೆ ತಿಳಿಸಿದ್ದಾರೆ ಗ್ರಾಫಿಕ್ ಫೋಟೋ ಒಂದನ್ನ ಶೇರ್ ಮಾಡಿಕೊಂಡು ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ರಸ್ತೆಯ ಪಕ್ಕದಲ್ಲಿ ಅಪ್ಪು ಫೋಟೋ ಹಾಕಿ “ಡಾಕ್ಟರ್ ಪುನೀತ್ ರಾಜಕುಮಾರ್ ರಸ್ತೆ” ಎಂದು ಬರೆದಿರುವ ಗ್ರಾಫಿಕ್ಸ್ ಫೋಟೋವನ್ನು ಅಶ್ವಿನಿತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: Kannada Astrology: ಇಂದಿನಿಂದ ನೀವು ಮುಟ್ಟಿದೆಲ್ಲಾ ಚಿನ್ನ: ಈ ಐದು ರಾಶಿಗಳ ಅದೃಷ್ಟವೇ ಬದಲು. ಯಾವ್ಯಾವ ರಾಶಿಗಳಿಗೆ ಗೊತ್ತೇ??
#DrPuneethRajkumarRoad pic.twitter.com/Wi9Ynv0Sib
— Ashwini Puneeth Rajkumar (@Ashwini_PRK) February 7, 2023
ಅದರಲ್ಲಿ ನಾಯಂಡಹಳ್ಳಿ ಜಂಕ್ಷನ್ ನಿಂದ ಮೆಗಾ ಸಿಟಿ ಮಾಲ್ ಜಂಕ್ಷನ್ ವರೆಗೆ ಎಂದು ಬರೆಯಲಾಗಿದೆ. “ಕರ್ನಾಟಕ ಸರ್ಕಾರಕ್ಕೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು” ಅಶ್ವಿನಿ ಪುನೀತ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ ಜೊತೆಗೆ ಒಂದು ಪತ್ರವನ್ನು ಬರೆದು ಶೇರ್ ಮಾಡಿಕೊಂಡಿದ್ದಾರೆ. ಈ ಪತ್ರದಲ್ಲಿ ಅಪ್ಪು ಗೌರವಾರ್ಥ ಡಾಕ್ಟರ್ ಪುನೀತ್ ರಾಜಕುಮಾರ್ ರಸ್ತೆಯನ್ನು ಲೋಕಾರ್ಪಣೆ ಮಾಡಿದ್ದಕ್ಕಾಗಿ ಮುಖ್ಯಮಂತ್ರಿಯವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ತಿಳಿಸಿದ್ದಾರೆ ಜೊತೆಗೆ ಅಸಂಖ್ಯಾತ ಅಭಿಮಾನಿಗಳಿಗೆ ಎಂದೆಂದಿಗೂ ಚಿರಋಣಿ ಎಂಬುದಾಗಿಯೂ ಅಶ್ವಿನಿ ಭಾವುಕವಾಗಿ ಬರೆದುಕೊಂಡಿದ್ದಾರೆ.