Numerology: ನಿಮ್ಮ ಮೊಬೈಲ್ ನಂ ನಲ್ಲಿ 7 ಅಂಕೆ ಇದ್ಯಾ? ಹಾಗಾದ್ರೆ ಇದು ಸಾಡೇಸಾತ್ ಅಲ್ಲ, ನಿಮಗೆ ಲಕ್ ಕಣ್ರೀ, ಹೇಗೆ ಗೊತ್ತಾ?

Numerology : ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಭವಿಷ್ಯವನ್ನು ಬದಲಾಯಿಸಬಹುದು ಹೇಗೆ ಗೊತ್ತಾ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಏಳು ಎನ್ನುವ ಒಂದು ಅಂಕೆ ಇದ್ರೆ ಸಾಕು ನಿಮಗೆ ಲಾಟರಿ ಹೊಡಿತು ಅಂತಾನೇ ಲೆಕ್ಕ.

ಸಂಖ್ಯೆ 7 ಒಮ್ಮೆ ಇದ್ರೆ: ಏಳು ಎನ್ನುವ ಸಂಖ್ಯೆ ಆಧ್ಯಾತ್ಮಿಕತೆಯ ಕಡೆಗೆ ನಮ್ಮನ್ನ ಚಲಿಸುವಂತೆ ಮಾಡುತ್ತದೆ 7 ಒಂದು ಪರಿಪೂರ್ಣ ಸಂಖ್ಯೆಯಾಗಿದೆ. ಮುಖ್ಯ ವಿಚಾರಗಳಲ್ಲಿ ಏಳು ಎನ್ನುವುದನ್ನು ನೀವು ಕಾಣಬಹುದು ಉದಾಹರಣೆಗೆ ವಾರದಲ್ಲಿ ಏಳು ದಿನಗಳು, ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳು, ಸಪ್ತ ಋಷಿ ನಕ್ಷತ್ರಪುಂಜಗಳಲ್ಲಿ ಏಳು ನಕ್ಷತ್ರಗಳು, ಹೀಗೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಏಳು ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ನಿಮ್ಮ ಮೊಬೈಲ್ ನಲ್ಲಿ ಹೇಳು ಎನ್ನುವ ಸಂಖ್ಯೆ ಇದ್ದರೆ ಅಂಥವರು ಜೀವನದಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಾರೆ. ಹೆಚ್ಚು ಧಾರ್ಮಿಕ ಕೆಲಸಗಳನ್ನು ಮಾಡುತ್ತಾರೆ. ಆಕರ್ಷಣೀಯ ವ್ಯಕ್ತಿತ್ವವನ್ನು ಹೊಂದಿರುವ ಇವರು ಯಾವಾಗಲೂ ಸುತ್ತಲಿರುವವರ ಮೇಲೆ ಪ್ರಭಾವ ಬೀರುತ್ತಾರೆ. ತಾಳ್ಮೆ ತ್ಯಾಗ ಸಹಾಯ ಮಾಡುವ ಮನೋಭಾವ ಅವರಲ್ಲಿ ಇರುತ್ತದೆ.

Numerology: ನಿಮ್ಮ ಮೊಬೈಲ್ ನಂ ನಲ್ಲಿ 7 ಅಂಕೆ ಇದ್ಯಾ? ಹಾಗಾದ್ರೆ ಇದು ಸಾಡೇಸಾತ್ ಅಲ್ಲ, ನಿಮಗೆ ಲಕ್ ಕಣ್ರೀ, ಹೇಗೆ ಗೊತ್ತಾ? https://sihikahinews.com/amp/astrology/

ಏಳು ಸಂಖ್ಯೆ ಎರಡು ಬಾರಿ ಇದ್ರೆ: ನಿಮ್ಮ ಮೊಬೈಲ್ ನಂಬರ್ ನಲ್ಲಿ 7 ಎನ್ನುವ ಸಂಖ್ಯೆ ಎರಡು ಬಾರಿ ಇದ್ದರೆ ಪ್ರೀತಿ ಆರೋಗ್ಯ ಮತ್ತು ಹಣ ಇವೆಲ್ಲವೂ ತಕ್ಕಡಿಯಂತೆ ಇರುತ್ತದೆ ಆದರೆ ಜ್ಞಾನ ಮತ್ತು ಬುದ್ಧಿವಂತಿಕೆ ಅತಿಯಾಗಿ ಇರುತ್ತದೆ. ದೇವರ ಬಗ್ಗೆ ಹೆಚ್ಚು ಭಯ ಭಕ್ತಿ ಇರುತ್ತದೆ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳುತ್ತಾರೆ.

7 ಎನ್ನುವ ಸಂಖ್ಯೆ ಮೂರು ಬಾರಿ ಇದ್ದಾಗ; ಇಂಥವರು ಪ್ರತಿ ಕ್ಷೇತ್ರದಲ್ಲಿಯೂ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಸ್ವಂತ ಜನರೇ ಅವರಿಗೆ ದ್ರೋಹ ಮಾಡುತ್ತಾರೆ ಹಣ ಮತ್ತು ಆರೋಗ್ಯದ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗುತ್ತದೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ ನಂತರ ಅವರಲ್ಲಿ ಇರುವ ಶಕ್ತಿ ಅವರನ್ನು ಬೆಳೆಸುತ್ತದೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಡಬಹುದು ವಯಕ್ತಿಕ ಜೀವನದಲ್ಲಿ ಹೆಚ್ಚು ನೋವನ್ನು ಅನುಭವಿಸುತ್ತಾರೆ.

ನಾಲ್ಕು ಬಾರಿ 7 ಸಂಖ್ಯೆ ಕಾಣಿಸಿಕೊಂಡರೆ; ಇವರ ಪರಿಸ್ಥಿತಿ ಕೂಡ ಕಷ್ಟಕರವಾಗಿರುತ್ತದೆ ಆರೋಗ್ಯ ಸಮಸ್ಯೆಗಳು ಕಾಡಬಹುದು ಪ್ರತಿ ಜೀವದ ಮೇಲೆ ಆರೋಗ್ಯ ಸಮಸ್ಯೆ ಹೆಚ್ಚು ಪರಿಣಾಮ ಬೀರುತ್ತದೆ ಸಾಕಷ್ಟು ಬಿಕ್ಕಟ್ಟನ್ನು ಎದುರಿಸಿದ ನಂತರ ಸಾಕಷ್ಟು ತ್ಯಾಗ ಮಾಡಿದ ನಂತರ ಸಮತೋಲನ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಸಾಮಾನ್ಯ ಜ್ಞಾನ ಮತ್ತು ಅನುಭವ ಇವರಲ್ಲಿ ಇರುತ್ತದೆ ಇವರು ಉತ್ತಮ ಮಾತುಗಾರರು ಹೌದು.

12 zodiac signsAstrologyHoroscopeNumerologyಜ್ಯೋತಿಷ್ಯಾಸ್ತ್ರ