Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ರಾಶಿ ಚಕ್ರ ಬದಲಾಯಿಸಿದಾಗ, ವ್ಯಕ್ತಿಯ ಜೀವನದಲ್ಲಿ ಹಲವಾರು ವ್ಯತ್ಯಾಸಗಳು ಆಗುತ್ತವೆ. ಕೆಲವರಿಗೆ ಸಕಾರಾತ್ಮಕವಾದ ಹಾಗೂ ಕೆಲವರಿಗೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ನವಗ್ರಹಗಳಲ್ಲಿ ಯಾವುದೇ ಒಂದು ಗ್ರಹದ ಚಲನೆಯಲ್ಲಿ ಬದಲಾವಣೆ ಆದರೂ ಅದು ಎಲ್ಲ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದಾಗಿ ಹೇಳಲಾಗುತ್ತೆ.
ಅದರಲ್ಲೂ ಕರ್ಮಫಲದಾತ, ನ್ಯಾಯದೇವರು ಎಂದೆ ಖ್ಯಾತವಾದ ಶನಿ ಗ್ರಹದ ಸ್ಥಳ ಬದಲಾವಣೆ ಬಹಳ ಮುಖ್ಯವಾಗುತ್ತದೆ. ಜ.17 ರಂದು ಶನಿದೇವನು (Shani deva-Taurus) ಮಕರ ರಾಶಿ ತೊರೆದು ಕುಂಭ ರಾಶಿ ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ಕೆಲ ರಾಶಿಚಕ್ರ ಚಿಹ್ನೆಗಳು ಸಾಡೇಸಾತಿ ಶನಿ ಹಾಗೂ ಶನಿ ದೇವರ ಪ್ರಭಾವದಿಂದ ಮುಕ್ತಿ ಹೊಂದಲಿದ್ದಾರೆ. ಇನ್ನು ಕೆಲ ರಾಶಿಯವರಿಗೆ ಸಾಡೇಸಾತಿ ಶನಿ ಹಾಗೂ ದೈಯಾ ಪ್ರಭಾವ ಆರಂಭವಾಗಲಿದೆ. ಜ.16 ವರೆಗಿನ ಸಮಯವನ್ನು ಕೆಲವು ರಾಶಿಯವರಿಗೆ ಗೋಲ್ಡನ್ ಟೈಮ್ ಎಂದು ಬಣ್ಣಿಸಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ ಜ. 16 ರ ನಂತರ ಶನಿ ದೇವರು ಸುಮಾರು ಮೂರು ದಶಕಗಳ ನಂತರ ಕುಂಭ ರಾಶಿ ಪ್ರವೇಶ ಮಾಡಲಿದ್ದಾನೆ. ಅಲ್ಲಿಯಯವರೆಗೆ ದ್ವಾದಶ ರಾಶಿಗಳಲ್ಲಿ ಮೂರು ರಾಶಿಯವರಿಗೆ ಶನಿ ಮಹಾತ್ಮನ ಕೃಪಾಕಟಾಕ್ಷ ಇರಲಿದೆ. ಆ ರಾಶಿಗಳು ಯಾವುದು ಎಂದು ಈಗ ತಿಳಿದುಕೊಳ್ಳೋಣ.
ವೃಷಭ ರಾಶಿ:
ವೃಷಭ ರಾಶಿಯವರಿಗೆ ಜ. 16 ರವರೆಗಿನ ಸಮಯ ಬಹಳ ಚೆನ್ನಾಗಿದೆ. ಈ ಸಮಯದಲ್ಲಿ ಶನಿ ಮಹಾತ್ಮನ ಕೃಪೆಯಿಂದಾಗಿ ಅದೃಷ್ಟದ ಸಂಪೂರ್ಣ ಬೆಂಬಲ ಈ ರಾಶಿಯವರಿಗೆ ಸಿಗಲಿದೆ. ಇದರಿಂದಾಗಿ ಇವರು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳಲಿದೆ. ಅಂಪತ್ತು ನಿಮ್ಮನ್ನು ಅರಸಿ ಬರುತ್ತದೆ ಎಂದರೆ ತಪ್ಪಾಗುವುದಿಲ್ಲ. ವಿದ್ಯಾರ್ಥಿಗಳಿಗೂ ಇದು ಬಹಳ ಒಳ್ಳೆಯ ಸಮಯವಾಗಿದೆ. ಮನೆ, ವಾಹನ, ನಿವೇಶನ ಖರೀದಿಯ ಯೋಗವೂ ಇದೆ.
ವೃಶ್ಚಿಕ ರಾಶಿ:
ಈ ರಾಶಿಯವರಿಗೆ ಜ. 16ವರೆಗೆ ಶನಿದೇವರ ವಿಶೇಷ ಆಶೀರ್ವಾದ ಇರುತ್ತದೆ. ಈ ರಾಶಿಯವರು ಕೈಗೊಳ್ಳುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಇದಕ್ಕೆ ಅದೃಷ್ಟದ ಬೆಂಬಲವೂ ಇದೆ.
ಮೀನ ರಾಶಿ:
ಮಕರ ರಾಶಿಯಲ್ಲಿರುವ ಶನಿ ದೇವನು ಮೀನ ರಾಶಿಯವರಿಗೆ ಶತ್ರುಗಳ ವಿರುದ್ಧ ಜಯ ನೀಡಲಿದ್ದಾನೆ. ಹಣಕಾಸಿನ ದೃಷ್ಟಿಯಿಂದಲೂ ಈ ಸಮಯ ಬಹಳ ಉತ್ತಮವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಈ ಸಮಯ ಬಹಳ ಉತ್ತಮವಾಗಿದೆ.