Bajaj: ಎಪ್ಪತ್ತು ಸಾವಿರ ರೂಪಾಯಿಗಳ ರೇಂಜ್ ನಲ್ಲಿ ಸಿಗುವಂತಹ ಬೆಸ್ಟ್ ಬೈಕುಗಳ ಲಿಸ್ಟ್ ಇಲ್ಲಿದೆ ನೋಡಿ!

Bajaj: ಒಂದು ಕಡೆಯಿಂದ ಇನ್ನೊಂದು ಕಡೆಗೆ ವೇಗವಾಗಿ ಹೋಗುವುದಕ್ಕೆ ಕಾರು ಅಥವಾ ಬೇರೆ ಟ್ರಾನ್ಸ್ಪೋರ್ಟ್ ಮಾಧ್ಯಮಗಳಿಗಿಂತ ಬೈಕುಗಳು ಸಾಕಷ್ಟು ಉತ್ತಮವಾಗಿರುತ್ತದೆ ಹಾಗೂ ಸುಲಭವಾಗಿರುತ್ತದೆ ಅನ್ನೋದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಇನ್ನು ಅತ್ಯಂತ ಕಡಿಮೆ ಬೆಲೆಯಿಂದ ಕಾರಿಗಿಂತಲೂ ಕೂಡ ಹೆಚ್ಚಿನ ಬೆಲೆಯಲ್ಲಿ ನೀವು ಬೈಕನ್ನು ಖರೀದಿ ಮಾಡುವಂತಹ ಅವಕಾಶಗಳು ಕೂಡ ಮಾರುಕಟ್ಟೆಯಲ್ಲಿ ಇವೆ. ಆದರೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಮಧ್ಯಮ ಹಾಗೂ ಬಡವರ್ಗದ ಯುವಕರಿಗೆ ಯಾವ ರೀತಿಯಲ್ಲಿ 70 ಸಾವಿರ ರೂಪಾಯಿಗಳ ಕಡಿಮೆ ಬಜೆಟ್ ರೇಂಜ್ನಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿ ಮಾಡಬಹುದು ಎನ್ನುವುದರ ಬಗ್ಗೆ ತಿಳಿಸಲು ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆಯವರೆಗೂ ಓದಿ.

  • ಬಜಾಜ್ ಪ್ಲಾಟಿನ 110

ಭಾರತ ದೇಶದ ಕಂಪನಿ ಆಗಿರುವಂತಹ ಬಜಾಜ್ ಸಂಸ್ಥೆಯ ಈ ಬೈಕು ಟಾಪ್ ಮೈಲೇಜ್ ನೀಡುವಂತಹ ಬೈಕುಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ನೀವು ಡಿಸ್ಕ್ ಬ್ರೇಕ್, ಎಲ್ಇಡಿ ಡಿ ಆರ್ ಎಲ್, ಡಿಜಿಟಲ್ ಸ್ಪೀಡೋಮೀಟರ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದ್ದು ಇದು ನಿಮಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 60 ಕಿಲೋಮೀಟರ್ ಮೈಲೇಜ್ ನೀಡುತ್ತದೆ. 115 ಸಿಸಿ ಹೊಂದಿರುವಂತಹ ಈ ಬೈಕಿನ ಬೆಲೆ 69 ಸಾವಿರ ರೂಪಾಯಿ ಎಕ್ಸ್ ಶೋರೂಮ್ ಬೆಲೆ ಆಗಿದೆ.

  • TVS ಸ್ಪೋರ್ಟ್

ಟಿವಿಎಸ್ ಕಂಪನಿಯ ಅತ್ಯಂತ ಉತ್ತಮ ಮೈಲೇಜ್ ಹಾಗೂ ಕಡಿಮೆ ಬೆಲೆಯಲ್ಲಿ ಸಿಗುವಂತಹ ಬೈಕುಗಳಲ್ಲಿ ಈ ಬೈಕ್ ಕೂಡ ಒಂದಾಗಿದೆ. ನೆಮ್ಮದಿ ಹಾಗೂ ಹಿಂಬದಿಯ ಸವಾರರು ಇಬ್ರೂ ಕೂಡ ಉತ್ತಮ ರೀತಿಯಲ್ಲಿ ಕುಳಿತುಕೊಳ್ಳುವ ಸೀಟಿಂಗ್ ವ್ಯವಸ್ಥೆಯಿದೆ. ಮೈಲೇಜ್ ಪರಿಶೀಲಿಸುವಂತಹ ಈಕೋ ಮೀಟರ್ ಅನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ. ಇದು ಬರೋಬ್ಬರಿ ನಿಮಗೆ 70 ಕಿಲೋ ಮೀಟರ್ ಗಳ ಮೈಲೇಜ್ ನೀಡುತ್ತದೆ. ಇನ್ನು ಇದರ ಬೆಲೆ 64,000 ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ.

  • Hero HF ಡೀಲಕ್ಸ್

ಇದು ನೂರು ಸಿಸಿ ಎಂಜಿನ್ ಹೊಂದಿರುವಂತಹ ಬೈಕ್ ಆಗಿದ್ದು ಇದರ ಮೈಲೇಜ್ ಎಪ್ಪತ್ತು ಕಿಲೋಮೀಟರ್ ಪ್ರತಿ ಲೀಟರ್ ಆಗಿದೆ. ಇನ್ನು ಇದರ ಬೆಲೆ ಅರುವತ್ತು ಸಾವಿರ ರೂಪಾಯಿ ಎಕ್ಸ್ ಶೋರೂಮ್ ನಿಂದ ಪ್ರಾರಂಭವಾಗುತ್ತದೆ.

  • ಬಜಾಜ್ ಪ್ಲಾಟಿನ 100

63 ಸಾವಿರ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುವಂತಹ ಈ ಬೈಕು 100 ಸಿಸಿ ಇಂಜಿನ್ ಜೊತೆಗೆ 65km ಪ್ರತಿ ಲೀಟರ್ ಮೈಲೇಜ್ ನೀಡುತ್ತದೆ.

  • Bajaj CT110X

115 ಸಿಸಿ ಇಂಜಿನ್ ಹೊಂದಿರುವಂತಹ ಈ ಬೈಕು ನಿಮಗೆ 60 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ. ಇದರ ಬೆಲೆ ರೂ.66,000 ಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ.

  • Honda CD110 Dream DLX

ಎಪ್ಪತ್ತು ಸಾವಿರ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುವಂತಹ ಈ ಬೈಕು 110 ಸಿಸಿ ಇಂಜಿನ್ ಹೊಂದಿದ್ದು ಇದರ ಮೈಲೇಜ್ 60 ಕಿಲೋಮೀಟರ್ ಪ್ರತಿ ಲೀಟರ್ ಆಗಿದೆ.

  • ಹೀರೋ ಸ್ಪ್ಲೆಂಡರ್ ಪ್ಲಸ್: ಡ್ರಮ್

ಈ ಬೈಕಿನ ಬೆಲೆ ಕೂಡ 70000ಗಳ ಬೆಲೆಯಿಂದ ಪ್ರಾರಂಭವಾಗುತ್ತದೆ ಹಾಗೂ ಇದರಲ್ಲಿ ಅಳವಡಿಸಲಾಗಿರುವಂತಹ ಇಂಜಿನ್ 100 ಸಿಸಿ ಸಾಮರ್ಥ್ಯ ದ್ದಾಗಿದೆ. 65km ಮೈಲೇಜ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ.

  • Hero HF 100

ಅತ್ಯಂತ ಕಡಿಮೆ 55 ಸಾವಿರ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುವಂತಹ ಈ ಬೈಕು ೬೫ ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ ಹಾಗೂ ಇದರಲ್ಲಿ 100 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ.

  • TVS ಸ್ಟಾರ್ ಸಿಟಿ ಪ್ಲಸ್

110 ಸಿಸಿ ಸಾಮರ್ಥ್ಯವನ್ನು ಹೊಂದಿರುವಂತಹ ಟಿವಿಎಸ್ ಸಂಸ್ಥೆಯ ಈ ಸ್ಟೈಲಿಶ್ ಬೈಕು ಸ್ವಲ್ಪಮಟ್ಟಿಗೆ ಬೆಲೆಯನ್ನು ಹೆಚ್ಚಾಗಿ ಹೊಂದಿದೆ ಅಂದ್ರೆ 73,000ಗಳ ಬೆಲೆಯಿಂದ ಇದು ಪ್ರಾರಂಭವಾಗುತ್ತೆ. 60 ಕಿಲೋಮೀಟರ್ ಮೈಲೇಜ್ ಹೊಂದಿರುವಂತಹ ಈ ಬೈಕು ಕೂಡ ನಿಮಗೆ ಕಡಿಮೆ ಖರ್ಚಿನಲ್ಲಿ ಬಳಕೆಗೆ ಬರಲಿದೆ.

bajaj