Bajaj -Triumph Scrambler: ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕವಾಯ್ತು; ಬಜಾಜ್-ಟ್ರಯಂಫ್ ಬಿಡುಗಡೆ ಮಾಡಿದೆ ಸ್ಕ್ರಾಂಬ್ಲರ್ ಬೈಕ್! ಹೇಗಿದೆ ಗೊತ್ತಾ!

Bajaj -Triumph Scrambler: ಬಜಾಜ್ ದ್ವಿಚಕ್ರ ವಾಹನಗಳ ಬೈಕ್ ಸೆಗ್ಮೆಂಟ್ ನಲ್ಲಿ ತನ್ನದೇ ಆದ ಹೆಸರನ್ನು ಗಳಿಸಿದೆ. ಬಜಾಜ್ ಚೇತಕ್ ನಂತರ ಅಷ್ಟೇನೂ ಹೆಸರುವಾಸಿಯಾದ ಮಾಡೆಲ್ ಗಳನ್ನು ಹೊರತರದೇ ಇದ್ದ ಬಜಾಜ್ ಒಂದು ಸಕ್ಸಸ್ ಗಾಗಿ ಕಾಯುತ್ತಾ ಇತ್ತು. ಪಲ್ಸರ್ ಬಜಾಜ್ ಗೇ ಆ ಸಕ್ಸಸ್ ಆಗಿತ್ತು. ಪಲ್ಸರ್ ಲಾಂಚ್ ಆದಾಗಿನಿಂದ ಯುವಜನರಲ್ಲಿ ಪಲ್ಸರ್ ಬಗ್ಗೆ ಕ್ರೇಜ್ ತುಂಬಾ ಜಾಸ್ತಿ ಆಗಿತ್ತು. ದಶಕಗಳಿಂದ ಹಲವಾರು ಮಾಡೆಲ್ ಗಳಲ್ಲಿ ಪಲ್ಸರ್ ಬಂದಿದೆ. ಇದೇ ತರಹ ಡಾಮಿನಾರ್ ಕೂಡ ಲಾಂಚ್ ಆದಾಗ ಅದರ 2 ಲಕ್ಷಕ್ಕಿಂತ ಕಡಿಮೆ ಬೆಲೆಯ 400 ಸಿ.ಸಿ. ಬೈಕ್ ಎಂದು ಬಹಳ ಹೆಸರು ಮಾಡಿತ್ತು. ಇದನ್ನೂ ಓದಿ; DBT Status: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದ್ಯಾ ಅಂತ ಈ ರೀತಿ ಚೆಕ್ ಮಾಡಿಕೊಳ್ಳಿ: ವಿಳಂಬ ಮಾಡಿದ್ರೆ ನಿಮಗೆ ನಷ್ಟ ಗ್ಯಾರಂಟಿ!
ಇದಾದ ನಂತರ ಬಜಾಜ್ ಬ್ರಿಟೀಷ್ ಬೈಕು ತಯಾರಕ ಟ್ರೈಂಫ್ ನ ಜೊತೆಗೆ ಪಾಲುದಾರಿಕೆ ಕೂಡ ಮಾಡಿದೆ. ಈಗ ಅದಕ್ಕೆ ಆರು ವರ್ಷಗಳು ತುಂಬಿವೆ. ಸಣ್ಣ ಸೈಜ್ ನಿಂದ ಮಿಡ್ ರೇಂಜ್ ನ ಬೈಕುಗಳನ್ನು ಲಾಂಚ್ ಮಾಡಬೇಕು ಎನ್ನುವುದು ಈ ಪಾಲುದಾರಿಕೆಯ ಉದ್ದೇಶವಾಗಿತ್ತು. ಈಗ ಯೋಜನೆಯ ಮೊದಲ ಬೈಕ್ಸ್ ಲಾಂಚ್ ಆಗಿವೆ. ಸ್ಪೀಡ್ 400 ಮತ್ತು ಸ್ಕ್ರಾಂಬ್ಲರ್ 400 x ಎನ್ನುವ ಎರಡು ಬೈಕುಗಳನ್ನು ಲಾಂಚ್ ಮಾಡಿದೆ.
ಸ್ಪೀಡ್ – 400
ಸ್ಪೀಡ್ – 400 ನೇಕೆಡ್ ಸ್ಟ್ರೀಟ್ ಬೈಕ್ ಮಾದರಿಯ ಬೈಕ್ ಆಗಿದೆ. ಟ್ರೈಂಫ್ ಬೈಕುಗಳ ಬಗ್ಗೆ ತಿಳಿದವರಿಗೆ ಸ್ಟ್ರೀಟ್ ಟ್ವಿನ್ – 900 ಗೊತ್ತಿರಬೇಕು ಇದೇ ಡಿಸೈನ್ ಅನ್ನು ಇಲ್ಲೂ ಬಳಸಲಾಗಿದೆ. ಬೈಕ್ ನ ಲುಕ್ ತುಂಬಾ ಚೆನ್ನಾಗಿದೆ. ಇದರ ಎಕ್ಸ್. ಷೋ ರೂಮ್ ಬೆಲೆ 2.33 ಲಕ್ಷ ಆಗಿದ್ದರೂ ಮೊದಲ 10,000 ಗ್ರಾಹಕರಿಗೆ ಈ ಬೈಕ್ 2.23 ಲಕ್ಷಕ್ಕೆ ಸಿಗಲಿದೆ. ಸ್ಕ್ರಾಂಬ್ಲರ್ 400 x ನ ಬೆಲೆ ಅಕ್ಟೋಬರ್ ಸುಮಾರಿಗೆ ಹೊರ ಬರಲಿದೆ.
ಎಂಜಿನ್ ಮತ್ತು ಪವರ್ :
ಎರಡೂ ಬೈಕುಗಳು 398 ಸಿ.ಸಿ. ಎಂಜಿನ್ ಅನ್ನು ಹೊಂದಲಿವೆ. 8000 ಆರ್.ಪಿ.ಎಮ್ ನಲ್ಲಿ ಈ ಬೈಕು 40 ಬಿ.ಎಚ್.ಪಿ ಪವರ್ ಅನ್ನು ಉತ್ಪಾದಿಸುತ್ತದೆ. 6500 ಆರ್.ಪಿ.ಎಮ್ ನಲ್ಲಿ 37.5 ಟಾರ್ಕ್ ಪವರ್ ಈ ಬೈಕಿಗೆದೆ. ಇದನ್ನೂ ಓದಿ: Kisan Credit Card: ಈ ಒಂದು ಕಾರ್ಡ್ ನಿಮ್ಮ ಬಳಿ ಇದ್ದರೆ ಸರ್ಕಾರ ನೀಡುವ ಸಬ್ಸಿಡಿ, ಸಾಲ ಎಲ್ಲವೂ ಸಿಗುತ್ತದೆ, ಇಲ್ಲದಿದ್ದರೆ ನಷ್ಟ ಆಗುತ್ತದೆ: ಕೂಡಲೇ ಬ್ಯಾಂಕ್ನಿಂದ ಈ ಕಾರ್ಡ್ ಪಡೆಯಿರಿ!
ಫೀಚರ್ಸ್ ಮತ್ತು ಮೈಲೇಜ್:
ಅಪ್ಸೈಡ್ ಡೌನ್ ಫ಼ೊರ್ಕ್ಸ್ ಮುಂಭಾಗದಲ್ಲಿದ್ದರೆ ಹಿಂದೆ ಅಡ್ಜಸ್ಟೇಬಲ್ ಮೋನೋಶಾಕ್ ಸಸ್ಪೆನ್ಶನ್ ಇದೆ. ಟ್ರಾಕ್ಶನ್ ಕಂಟ್ರೋಲ್, ಅಲಾಯ್ ವೀಲ್ಸ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮತ್ತು ಡ್ಯುಯಲ್ ಚಾನಲ್ ಎ.ಬಿ.ಎಸ್. ಇರಲಿದೆ. ಕಂಪನಿಯ ಕ್ಲೈಮ್ ಪ್ರಕಾರ ಈ ಬೈಕು 34 ಕಿಮಿ./ಲೀಟರ್ ಮೈಲೇಜ್ ನೀಡಲಿದೆ.
ಕಾಂಪಿಟೇಶನ್:
ಈ ಬೈಕು ಈಗಾಗಲೇ ಮಾರುಕಟ್ಟೆಯಲ್ಲಿರುವ ರಾಯಲ್ ಎನ್ ಫೀಲ್ಡ್ 350 ಸಿ.ಸಿ. ಬೈಕುಗಳು, ಕೆ.ಟಿ.ಎಮ್ 390, ಹೋಂಡಾ ಸಿ.ಬಿ. 300 R, ಬಿ.ಎಮ್.ಡಬ್ಲ್ಯೂ G310R ನಂತಹ ಬೈಕ್ ಗಳೊಂದಿಗೆ ಕಾಂಪೀಟ್ ಮಾಡಲಿದೆ.

Bajaj -Triumph Scramblerbajaj bikebajaj companyBest News in Kannadabike riderLive News Kannadaretro style bikeriderscrambler