Technology: ಈವಿ ಬೈಕ್ ಖರೀದಿ ಮಾಡ್ಬೇಕಾ? ಇಲ್ಲಿದೆ ಬೆಸ್ಟ್ ಮೈಲೇಜ್ ಕೊಡುವ ಬೈಕ್ ಸರ್ಕಾರದಿಂದಲೂ ಸಿಗತ್ತೆ ಸಿಕ್ಕಾಪಟ್ಟೆ ಸಬ್ಸಿಡಿ ಬೆನಿಫಿಟ್!

Technology: ಭಾರತವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಭಾರತದಲ್ಲಿ ಪೆಟ್ರೋಲ್, ಡಿಸೈಲ್ ಸೇರಿದಂತೆ ತೈಲೋತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಹಾಗಾಗಿ ಈ ಆಮದನ್ನು ತಗ್ಗಿಸುವ ಸಲುವಾಗಿ ಇಲೆಕ್ಟ್ರಿಕಲ್ ವಾಹನ ಬಳಕೆಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಇಲೆಕ್ಟ್ರಿಕಲ್ ವಾಹನಗಳು ಪರಿಸರ ಸ್ನೇಹಿಯೂ ಆಗಿದೆ. ಆದ್ದರಿಂದ ಭಾರತದಲ್ಲಿ ಇಲೆಕ್ಟ್ರಿಕಲ್ ವಾಹನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಬ್ಯಾಟ್-ರಿ ಎನ್ನುವ ಕಂಪನಿಯು ಹೊಸ ಇಲೆಕ್ಟ್ರಿಕಲ್ ಬೈಕನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಒಂದು ಸಲ ಚಾರ್ಜ್ ಮಾಡಿದರೆ 132  ಕಿಮೀ ಮೈಲೇಜ್ ನೀಡುತ್ತದೆ ಎಂದು ತಿಳಿದು ಬಂದಿದೆ.

Technology: ಈವಿ ಬೈಕ್ ಖರೀದಿ ಮಾಡ್ಬೇಕಾ? ಇಲ್ಲಿದೆ ಬೆಸ್ಟ್ ಮೈಲೇಜ್ ಕೊಡುವ ಬೈಕ್ ಸರ್ಕಾರದಿಂದಲೂ ಸಿಗತ್ತೆ ಸಿಕ್ಕಾಪಟ್ಟೆ ಸಬ್ಸಿಡಿ ಬೆನಿಫಿಟ್! https://sihikahinews.com/amp/battre-ev-bike-gives-you-best-benefits/

ರಾಜಸ್ತಾನ (Rajasthan) ಮೂಲದ ಇವಿ (EV Bike) ತಯಾರಕ ಸಂಸ್ಥೆ ಬ್ಯಾಟರಿ ಭಾರತದಲ್ಲಿ ತನ್ನ ಹೊಸ ಹೈ ರೇಂಜ್ ಹೈ ಸ್ಪೀಡ್ ಸ್ಟೋರಿ ಇಲೆಕ್ಟ್ರಿಕಲ್ ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ ರೆಟ್ರೋ ವಿನ್ಯಾಸವನ್ನು ಹೊಂದಿದೆ. ಆಧುನಿಕ ಟೆಕ್ನಾಲಜಿ ಹಾಗೂ ಹಲವು ಹೊಸ ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹಾಗಾಗಿ ನಾವು ಈ ಬ್ಯಾಟರಿ ಸಂಸ್ಥೆ ಬಿಡುಗಡೆ ಮಾಡಿದ ಹೊಸ ಬೈಕ್ನ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.

ಈ ಬ್ಯಾಟ್-ರಿ ಸ್ಟೋರಿ ಇ-ಸ್ಕೂಟರ್ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದು ಆಧುನಿಕ ಬೈಕ್ ಆಗಿದೆ. ಇದರ ಸ್ಮಾರ್ಟ್ ವೈಶಿಷ್ಟ್ಯಗಳಲ್ಲಿ ಸ್ಮಾರ್ಟ್ ಇನ್ಸ್ಟೂಮೆಂಟರ್, ಬ್ಲೂಟೂತ್ ಕನೆಕ್ಟಿವಿಟಿ, ಕಾಲ್ ಅಲರ್ಟ್, ಟರ್ನ ಬೈ ಟರ್ನ್ ಕರೆ ಅಧಿ ಸೂಚನೆ, ಇಂಟಿಗ್ರೇಟೆಡ್ ಸ್ಮಾರ್ಟ್ ಸ್ಪೀಡೋಮೀಟರ್ಗಳನ್ನು ಒಳಗೊಂಡಿದೆ. ಇದರಲ್ಲಿ ಕನೆಕ್ಟಿವ್ ಡ್ರೈವ್ ಮೀಟರ್ ನೀಡಲಾಗಿದೆ. ಈ ಇಲೆಕ್ಟ್ರಿಕಲ್ ಬೈಕ್ನ ಸೀಟ್ ತುಂಬಾ ಉದ್ದವಾಗಿದೆ. ಪಾದಗಳನ್ನು ಇಡುವ ಜಾಗದಲ್ಲೂ ಬಹಳ ವಿಶಾಲವಾಗಿದೆ. ಇದರಿಂದ ನೀವು ಆರಾಮದಾಯಕವಾಗಿ ಸವಾರಿ ಮಾಡಬಹುದು. ಹೆಚ್ಚುವರಿ ರಕ್ಷಣೆ, ಶಕ್ತಿ, ಬಾಳಿಕೆಯನ್ನು ಹೊಂದಿದೆ. ಈ ಬೈಕ್ ಹಲವು ಬಣ್ಣಗಳಲ್ಲಿ ನಿಮಗೆ ಲಭ್ಯವಿದೆ.

ಬ್ಯಾಟ್-ರಿ ಸ್ಟೋರಿ ಇಲೆಕ್ಟ್ರಿಕಲ್ ಬೈಕ್ ಟಿಎಫ್ಟಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ. ಬ್ಲೂಟೂತ್ ಸಂಪಕ್ ಸಹ ನೀಡಲಾಗಿದೆ. ಬ್ಲೂಟೂತ್ ನೇರವಾಗಿ ಸ್ಪೀಡೋ ಮೀಟರ್ಗೆ ಸಂಪರ್ಕಿಸುತ್ತದೆ. ಡ್ಯಾಶ್ ಬೋರ್ಡ್ನಲ್ಲಿಯೇ ಕರೆ ಎಚ್ಚರಿಕೆಗಳನ್ನು ಸ್ವೀಕರಿಸಲಾಗುತ್ತದೆ. ಅಪ್ಲಿಕೇಶನ್ಗಳೊಂದಿಗೆ ಸಂಪರ್ಕಿಸುತ್ತದೆ. ಇದರಲ್ಲಿ ನ್ಯಾವಿಗೇಶನ್, ಕರೆ ನೋಟಿಫಿಕೇಶನ್, ಎಸ್ಎಂಎಸ್ ನೋಟಿಫಿಕೇಶನ್, ಚಾರ್ಜಿಂಗ್ ಸ್ಟೇಶನ್ಗಳ ಮಾಹಿತಿಯನ್ನು ನೀಡುತ್ತದೆ.

ಈ ಸ್ಕೂಟರ್ ತಯಾರಿಸುವ ವೇಳೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಸ್ಕೂಟರ್ನಲ್ಲಿ ಬಲವಾದ ಲೋಹದ ಫಲಕವು ಸ್ಕ್ರಾಪ್ ಪ್ರತಿರೋಧಕವಾಗಿದೆ. ಇದು ಸ್ಕೂಟರ್ಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ.  ಬೆಂಕಿಯ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಒಂದು ಲಕ್ಷ ಕಿಮಿ ಥರ್ಮಲ್ ರನ್ವೇ ಪರೀಕ್ಷೆ ಸಹ ನಡೆಸಿದೆ. ಇದರಿಂದ ಈ ಸ್ಕೂಟರ್ನಲ್ಲಿ ಬೆಂಕಿ ಅವಘಡಗಳು ಕಾಣಿಸಿಕೊಳ್ಳುವುದು ಕಡಿಮೆ. ಇದು ಸಹ ಜನರನ್ನು ಆಕರ್ಷಿಸುವ ಒಂದು ಅಂಶವಾಗಿದೆ ಎಂದು ಕಂಪನಿ ತಿಳಿಸಿದೆ.

EV BikeTechnology