Relationship: ಗಂಡ ಹೆಂಡತಿ ಬೇರೆ ಬೇರೆ ಮಲಗಿದರೆ ಆಗುವ ಲಾಭ ತಿಳಿದರೆ, ಇಂದಿನಿಂದಲೇ ಬೇರೆ ಮಲಗಲು ಆರಂಭಿಸುತ್ತೀರಿ. ಏನಾಗುತ್ತದೆ ಗೊತ್ತೇ??

Relationship: ಪ್ರಪಂಚದಲ್ಲಿ ಈಗ ಎಲ್ಲ ವಿಷಯಗಳನ್ನು ಸಹ ಅಧ್ಯಯನ ಮಾಡಲಾಗುತ್ತದೆ. ಪ್ರತಿಯೊಂದು ವಿಚಾರದಲ್ಲಿಯೂ ಲಾಭ ಎಷ್ಟಿದೆ? ನಷ್ಟ ಎಷ್ಟಿದೆ ಎಂದು ನೋಡಲಾಗುತ್ತದೆ. ಹಾಗೆಯೇ ಗಂಡ-ಹೆಂಡತಿ ಒಟ್ಟಿಗೆ ಮಲಗುವುದರಿಂದ ಹಾಗೂ ಬೇರೆ ಬೇರೆ ಮಲಗುವುದರಿಂದ ಸಹ ಎಷ್ಟು ಲಾಭವಿದೆ ಎನ್ನುವ ಬಗ್ಗೆ ವಿದೇಶಿ ಸಂಸ್ಥೆಯೊಂದು ಅಧ್ಯಯನ ನಡೆಸಿದೆ.  ಬೆಟರ್ ಸ್ಲೀಪ್ ವೆಲ್ ಎನ್ನುವ ಸಂಸ್ಥೆಯು ಈ ಕುರಿತು ಅಧ್ಯಯನ ನಡೆಸಿ ವರದಿ ನೀಡಿದೆ.  ಅದರ ಪ್ರಕಾರ ಪತಿ-ಪತ್ನಿ ಬೇರೆ ಬೇರೆ ಮಲಗುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಸಲಾಗಿದೆ.

ಮದುವೆಯ ನಂತರ ಗಂಡ-ಹೆಂಡತಿ ಒಟ್ಟಿಗೆ ಮಲಗುವುದು ಸಾಮಾನ್ಯ. ಮುಂದಿನ ಜೀವನ ಹಾಗೂ ತಮ್ಮ ಸಾಧನೆಗಳ ಕುರಿತು ಈ ವೇಳೆಯಲ್ಲಿ ಮನಃ ಬಿಚ್ಚಿ ಮಾತನಾಡಿಕೊಳ್ಳುತ್ತಾರೆ. ಅಲ್ಲದೆ ಸಾಮಾನ್ಯವಾಗಿ ಸಮಾಜದಲ್ಲಿ ನಡೆಯುವ ವಿದ್ಯಮಾನವಾಗಿದೆ.  ಕೆಲವೊಂದು ಹೊಸ ದಂಪತಿಗಳು ತಮ್ಮದೇ ಆದ ನಿಯಮಗಳನ್ನು ಹೊಂದಿರುತ್ತಾರೆ. ಆದರೆ ಸಮಾಜದ ಕಟ್ಟುಪಾಡುಗಳನ್ನು ಅನುಸರಿಸದ ಕಾರಣ ಕೆಲವರು ನಾಚಿಕೆ ಪಟ್ಟುಕೊಳ್ಳುತ್ತಾರೆ. ೨೦೧೭ರ ನ್ಯಾಶನಲ್ ಸ್ಲೀಪ್ ಫೌಂಡೇಶನ್ ಸಮೀಕ್ಷೆಯ ಪ್ರಕಾರ ನಾಲ್ಕು ಜನ ದಂಪತಿಗಳಲ್ಲಿ ಒಬ್ಬರು ಪ್ರತ್ಯೇಕವಾಗಿ ಮಲಗುತ್ತಾರೆ ಎಂದು ತಿಳಿಸಿದೆ.

2012ರ ಬೆಟರ್ ಸ್ಲೀಪ್ ಕೌನ್ಸಿಲ್ ಸಹ ಈ ಕುರಿತು ಅಧ್ಯಯನ ನಡೆಸಿದೆ. ಹೀಗೆ ದಂಪತಿಗಳು ಬೇರೆ ಬೇರೆ ಮಲಗುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ಆ ಕೌನ್ಸಿಲ್ ತಿಳಿಸಿದೆ. ಈ ವಿಷಯದ ಕುರಿತು ಮಾಡಿದ ಎಲ್ಲ ಸಂಶೋಧನೆಗಳು ದಂಪತಿಗಳು ಪ್ರತ್ಯೇಕವಾಗಿ ಮಲಗುವುದು ತಪ್ಪಲ್ಲ ಎಂದು ತಿಳಿಸುತ್ತದೆ. ಪ್ರತಿ ದಂಪತಿಯೂ ತಮ್ಮದೇ ಆದ ನಿಯಮ ಮಾಡಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ಹೀಗೆ ಪ್ರತ್ಯೇಕವಾಗಿ ಮಲಗುವುದರಿಂದ ಇಬ್ಬರಲಲ್ಲಿಯೂ ಬೇರೆ ಬೇರೆ ರೀತಿಯಾದ ಆಲೋಚನೆಗಳು ಬರುತ್ತವೆ. ಇದರಿಂದ ಸಾಮಾನ್ಯವಾಗಿ ದಂಪತಿಗಳಲ್ಲಿ ವಿರಸ ಶುರುವಾಗಬಹುದು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಅದು ತಪ್ಪು. ವಾಸ್ತವವಾಗಿ ಪ್ರತ್ಯೇಕವಾಗಿ ಮಲಗುವುದರಿಂದ ಹಲವಾರು ಅನುಕೂಲವಿದೆ. ಇದನ್ನೂ ಓದಿ:Darshan-Kranti: ಬಾರಿ ನಿರೀಕ್ಷೆಯಿಟ್ಟಿದ್ದ ಕ್ರಾಂತಿ ಸಿನಿಮಾ ಟಿಕೆಟ್ ಬುಕಿಂಗ್ ಆರಂಭವಾದ ಮೇಲೆ ಏನಾಗಿದೆ ಗೊತ್ತೇ?? ದರ್ಶನ್ ಕಥೆ ಏನಾಗಿದೆ ಗೊತ್ತೇ??

ಮೊದಲನೆಯದಾಗಿ ಪ್ರತ್ಯೇಕವಾಗಿ ಮಲಗುವುದರಿಂದ ಇಬ್ಬರಿಗೂ ನಿದ್ರೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ರಾತ್ರಿಯಲ್ಲಿ ಕೆಲವೊಬ್ಬರು ಗೊರಕೆ ಹೊಡೆಯುತ್ತಾರೆ, ಇನ್ನು ಕೆಲವರು ಪಕ್ಕದಲ್ಲಿ ಮಲಗಿದವರಿಗೆ ಒದೆಯುವ ರೂಢಿಯು ಇರುತ್ತದೆ. ಇವೆಲ್ಲವುಗಳಿಂದ ಬಚಾವಾಗಬಹುದು.

Relationship: ಗಂಡ ಹೆಂಡತಿ ಬೇರೆ ಬೇರೆ ಮಲಗಿದರೆ ಆಗುವ ಲಾಭ ತಿಳಿದರೆ, ಇಂದಿನಿಂದಲೇ ಬೇರೆ ಮಲಗಲು ಆರಂಭಿಸುತ್ತೀರಿ. ಏನಾಗುತ್ತದೆ ಗೊತ್ತೇ?? https://sihikahinews.com/amp/benefits-of-separate-sleeping-for-husband-and-wife/

ಸ್ವಲ್ಪ ಸಮಯದ ಅಂತರವು ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ. ನಿಮಗೆ ವಿಶ್ರಾಂತಿ ಪಡೆಯಲು ಹೆಚ್ಚಿನ ಸಮಯ ಸಿಗುತ್ತದೆ. ಇದರಿಂದ ಪರಸ್ಪರ ಇರುವ ಕೋಪವೂ ಕಮ್ಮಿಯಾಗುತ್ತದೆ. ದಂಪತಿಗಳಲ್ಲಿ ದೈಹಿಕ ಹಾಗೂ ಭಾವನಾತ್ಮಕ ಅನ್ಯೋನ್ಯತೆ ತೀರಾ ಅವಶ್ಯಕ. ಆದ್ದರಿಂದ ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗುವುದೇ ಬಹಳ ಉತ್ತಮ ಎಂದು ಹೇಳಬಹುದು. ಇದನ್ನೂ ಓದಿ: Real Story: ಸೌಂದರ್ಯವೇ ಬಂಡವಾಳ, ಆದರೆ ಹೂಡಿಕೆ ಇಲ್ಲದೆ, ಖರ್ಚು ಇಲ್ಲದೆ ಆಂಟಿ ಹಣಕ್ಕೆ ಏನು ಮಾಡಿದ್ದಾರೆ ಗೊತ್ತೇ?? ಹಿಂಗೂ ಇರ್ತಾರ??

ದಂಪತಿಗಳು ಅಂತರ ಕಾಯ್ದುಕೊಳ್ಳುವುದು ಅವರ ಲೈಂಗಿಕ ಜೀವನಕ್ಕೂ ಸಹಕಾರಿಯಾಗುತ್ತದೆ. ಅವರಲ್ಲಿ ಬೇಸರ, ದಣಿವು ಇಲ್ಲದಿರುವುದರಿಂದ ಹೆಚ್ಚಿನ ಸಮಯ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡು ಆನಂದ ಆನುಭವಿಸಬಹುದು. ಪ್ರತ್ಯೇಕವಾದ ರೂಂ ಅಥವಾ ಪ್ರತ್ಯೇಕವಾದ ಹಾಸಿಗೆಯಲ್ಲಿ ಮಲಗುವುದರಿಂದ ದೈಹಿಕವಾದ ಹಲವು ರೀತಿಯ ಸಮಸ್ಯೆಯಿಂದ ಪಾರಾಗಬಹುದು ಎಂದು ಸಂಶೋಧನೆಗಳು ಹೇಳುತ್ತವೆ.

Benefitshusband and wifemarriageseparate sleepingಗಂಡ ಹೆಂಡತಿ