Bhagyalakshmi: ಈ ಧಾರವಾಹಿಯಲ್ಲಿ ಏನೇ ಮಾಡಿದ್ರೂ ಎಲ್ಲಾನೂ ಅತಿಯಾಗೇ ಮಾಡ್ತಾರೆ; ಡೈರೆಕ್ಟರ್ ಗೆ ಕ್ಲಾಸ್ ತೆಗೆದುಕೊಂಡ ವೀಕ್ಷಕರು!

Bhagyalakshmi: ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಕಿರುತೆರೆಯ ಧಾರವಾಹಿಗಳಿಗೆ ಜನಪ್ರಿಯತೆ ಹಾಗೂ ವೀಕ್ಷಕರೆ ಬಳಗ ಎರಡು ಕೂಡ ಹೆಚ್ಚಾಗಿದೆ. ಇನ್ನು ನಮ್ಮ ಕಿರುತೆರೆಯ ಧಾರವಾಹಿಗಳಲ್ಲಿ ಕೆಲವೊಮ್ಮೆ ಧಾರವಾಹಿಗಳಲ್ಲಿನ ಪಾತ್ರಗಳನ್ನು ಹಾಗೂ ಸನ್ನಿವೇಶಗಳನ್ನು ಇನ್ನಷ್ಟು ಸೆಲೆಬ್ರೇಟ್ ಮಾಡುವುದಕ್ಕಾಗಿ ಅತಿ ಎನಿಸುವಂತಹ ದೃಶ್ಯಗಳನ್ನು ಕೂಡ ಅಳವಡಿಸಲಾಗುತ್ತದೆ. ಇದನ್ನು ನೋಡಿ ಪ್ರೇಕ್ಷಕರು ಕೂಡ ಸ್ವಲ್ಪ ಓವರ್ ಆಯ್ತು ಅಂತ ಅನ್ನಿಸ್ತಿಲ್ವಾ ಅನ್ನೋ ರೀತಿಯಲ್ಲಿ ಕೂಡ ಕಾಮೆಂಟ್ ಮಾಡೋ ಹಾಗೆ ಆಗುತ್ತೆ. ಇನ್ನು ಈಗ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯಳನ್ನು ಸುಲಭ ಮಟ್ಟಿಗೆ ಇನ್ನು ಬಿಲ್ಡಪ್ ಕೊಟ್ಟು ತೋರಿಸುವ ಭರದಲ್ಲಿ ಪ್ರೇಕ್ಷಕರು ಟ್ರೋಲ್ ಮಾಡುವ ರೀತಿಯಲ್ಲಿ ಆಗಿದೆ ಎಂದು ಹೇಳಬಹುದು.

ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದ್ರೂ ಕೂಡ ಮಾಡಬಹುದು ಎನ್ನುವುದನ್ನು ತೋರಿಸುವ ನಿಟ್ಟಿನಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಸ್ವಲ್ಪಮಟ್ಟಿಗೆ ಲಾಜಿಕ್ ಮಿಸ್ ಮಾಡಿಕೊಂಡು ದೃಶ್ಯವನ್ನು ತೋರಿಸಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಭಾಗ್ಯಾಳಿಗೆ ಸನ್ಮಾನ ಸಿಕ್ಕಿದ್ದು ಇನ್ನು ಅಲ್ಲಿಯೇ ಆಕೆಯ ಗಂಡ ಆಗಿರುವಂತಹ ತಾಂಡವ್ ಕೂಡ ಇರುತ್ತಾನೆ. ಈ ಸಂದರ್ಭದಲ್ಲಿ ಆತ ಮೇಡಂ ಯಾವ ಕಾರಿನಲ್ಲಿ ಬರ್ತಾರೋ ಎನ್ನುವ ರೀತಿಯಲ್ಲಿ ಆಕೆ ಬಳಿ ಕಾರ್ ಇಲ್ಲ ಎನ್ನುವ ಅರ್ಥದಲ್ಲಿ ಕುಹಕ ಆಡುತ್ತಾನೆ. ಇದೇ ಸಂದರ್ಭದಲ್ಲಿ ಆಕೆಗೆ ಒಂದು ಕಾರನ್ನು ನೀಡಿ ಇನ್ಮುಂದೆ ಈ ಕಾರ್ ನಿಮ್ಮದೇ ಎನ್ನುವ ರೀತಿಯಲ್ಲಿ ಉಡುಗೊರೆ ನೀಡಲಾಗುತ್ತದೆ.

ಆದರೆ ನೆಟ್ಟಿಗರು ಮಾತ್ರ ಈ ದೃಶ್ಯದಲ್ಲಿ ಟ್ರೋಲ್ ಮಾಡ್ತಾ ಇರೋದು ಈಗ ಎಲ್ಲರನ್ನ ಯಾವುದರಲ್ಲಿ ಕರೆದುಕೊಂಡು ಹೋಗ್ತೀರಿ ಅಂತ ಹೇಳಿದಾಗ ಕೇವಲ ಕಾರೇ ಆಗಬೇಕಾ ಬೆಂಗಳೂರಿನಲ್ಲಿ ಆಟೋರಿಕ್ಷಾ ಹಾಗೂ ಕ್ಯಾಬ್ ಇಲ್ವಾ ಅನ್ನೋದಾಗಿ ನೆಟ್ಟಿಗರು ಕಾಮೆಂಟ್ ಮಾಡೋದಿಕ್ಕೆ ಪ್ರಾರಂಭ ಮಾಡಿದ್ದಾರೆ. ಧಾರವಾಹಿಯಲ್ಲಿ ಭಾಗ್ಯ ಪಾತ್ರವನ್ನು ಇನ್ನಷ್ಟು ವೈಭವಿಕರಿಸುವ ಕಾರಣಕ್ಕಾಗಿ ಈ ರೀತಿ ಲಾಜಿಕ್ ಮಿಸ್ ಮಾಡಿ ದೃಶ್ಯಗಳನ್ನು ತೋರಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ರೀತಿಯಲ್ಲಿ ಕೂಡ ಪ್ರೇಕ್ಷಕರು ಮಾತನಾಡಿದ್ದಾರೆ.

ಇನ್ನು ಸೀರಿಯಲ್ ಬಗ್ಗೆ ಮಾತನಾಡುವುದಾದರೆ ಸ್ಟಾರ್ ಹೋಟೆಲ್ನಲ್ಲಿ ಇಂಗ್ಲೀಷ್ ಬಾರದೆ ಇದ್ದರೂ ಕೂಡ ಭಾಗ್ಯ ತನ್ನ ಅಡುಗೆಯ ಸ್ಕೀಲ್ ಮೂಲಕ ಕೆಲಸವನ್ನು ಪಡೆದುಕೊಂಡಿದ್ದಾಳೆ. ಒಂದು ಸಮಯದಲ್ಲಿ ಗಂಡ ತಾಂಡವ್ 5 ಪೈಸೆ ಕೂಡ ದುಡಿಯೋದಕ್ಕೆ ಸಾಧ್ಯ ಇಲ್ಲ ಅನ್ನೋ ರೀತಿಯಲ್ಲಿ ಹಂಗಿಸುತ್ತಿದ್ದ. ಈಗ ಭಾಗ್ಯ ಹೋಟೆಲ್ ನಲ್ಲಿ ಲಕ್ಷ ದುಡಿತಿದ್ದಾಳೆ. ಇದು ಕೇವಲ ಧಾರವಾಹಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಮಹಿಳೆಯರಿಗೆ ಪೂರ್ತಿಯಾಗುವಂತಹ ಒಂದು ಪಾತ್ರ ಅಥವಾ ಸನ್ನಿವೇಶ ಎನ್ನುವ ರೀತಿಯಲ್ಲಿ ಇದನ್ನು ವೈಭವಿಕರಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯಾವ ರೀತಿಯಲ್ಲಿ ಧಾರವಾಹಿಗಳು ಸಿನಿಮಾಗಳಿಗಿಂತ ಹೆಚ್ಚಾಗಿ ಪ್ರಭಾವ ಬೀರುತ್ತವೆ ಅನ್ನೋದನ್ನ ಈ ಧಾರವಾಹಿಯ ಮೂಲಕವೇ ತಿಳಿದುಕೊಳ್ಳಬಹುದಾಗಿದೆ.

bhagyalakshmi