Kannada Bigg Boss: ಬಿಗ್ ಬಾಸ್ ಈ ಸ್ಪರ್ಧಿಯ ಪರ ನಿಂತ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್; ಯಾವ ಸ್ಪರ್ಧಿಗೆ ಸಿಕ್ಕಿದೆ ಗೊತ್ತಾ ದಿವ್ಯಾ ಅವರ ಸಪೋರ್ಟ್?

Kannada Bigg Boss: ಬಿಗ್ ಬಾಸ್ ರಿಯಾಲಿಟಿ ಶೋ (reality show) ಸೀಸನ್ -9 ಶುರುವಾಗಿ ಆಗಲೇ 60 ದಿನಗಳು ಕಳೆದು ಹೋಗಿದೆ. ಇನ್ನೊಂದು 40 ದಿನ (40Days) ಕಳೆದರೆ ಈ ಸೀಸನ್ ಮುಗಿದು ಹೋಗುತ್ತದೆ. ಈ ಬಾರಿ ಬಿಗ್ ಬಾಸ್ ನವೀನರು ಹಾಗೂ ಪ್ರವೀಣರು ಎನ್ನುವ ಕಾನ್ಸೆಪ್ಟ್ ಇಟ್ಟುಕೊಂಡು ಗೇಮ್ ಪ್ಲಾನ್ ಮಾಡಿದೆ. ಸ್ಪರ್ಧಿಗಳು ಸಹ ಚೆನ್ನಾಗಿಯೇ ಆಟವಾಡುತ್ತಿದ್ದಾರೆ. ತಾವು ಹೇಗಾದರೂ ಮಾಡಿ ಫೈನಲ್  ತಲುಪಲೇ ಬೇಕು ಎನ್ನುವ ಹಠಕ್ಕೆ ಬಿದ್ದವರಂತೆ ಕಾಣುತ್ತಿದ್ದಾರೆ. ಸ್ಪರ್ಧಿಗಳ ಈ ಆಟ ನೋಡಿ ಹಲವು ಜನರು ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯಲ್ಲಿ ಹಂಚಿಕೊಂಡಿದ್ದಾರೆ. ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಪ್ರಾಯ ಹಂಚಿಕೊಂಡವರಲ್ಲಿ  ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ, ನಟಿ ದಿವ್ಯ ಸುರೇಶ್ (Divya Suresh) ಕೂಡ ಒಬ್ಬರು.

Kannada Bigg Boss: ಬಿಗ್ ಬಾಸ್ ಈ ಸ್ಪರ್ಧಿಯ ಪರ ನಿಂತ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್; ಯಾವ ಸ್ಪರ್ಧಿಗೆ ಸಿಕ್ಕಿದೆ ಗೊತ್ತಾ ದಿವ್ಯಾ ಅವರ ಸಪೋರ್ಟ್? https://sihikahinews.com/amp/bigg-boss-kannada-contestant-divya-suresh-support-to-roopesh-rajanna/

ದಿವ್ಯ ಸುರೇಶ್ ಅವರು ಬಿಗ್ ಬಾಸ್ ಸೀಸನ್ -9ನ್ನು ಪ್ರತಿನಿತ್ಯ ನೋಡುತ್ತಿದ್ದಾರೆ. ತಮಗೆ ಅನಿಸಿದ್ದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತ ಇರುತ್ತಾರೆ. ದಿವ್ಯ ಸುರೇಶ್ ಅವರು ಬಿಗ್ ಬಾಸ್ ನ ಮಾಜಿ ಸ್ಪರ್ಧಿಯೂ ಆಗಿರುವುದರಿಂದ ಆ ಮನೆಯಲ್ಲಿ ವಾತಾವರಣ ಹೇಗೆ ಇರುತ್ತದೆ ಎನ್ನುವುದು ಚೆನ್ನಾಗಿ ಗೊತ್ತಿದೆ. ಈ ಬಾರಿ ಸೀಸನ್ ನಲ್ಲಿ ದಿವ್ಯ ಸುರೇಶ್ ಅವರು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ (Roopesh Rajanna)) ಅವರ ಆಟವನ್ನು ತುಂಬಾನೇ ಇಷ್ಟಪಟ್ಟಂತೆ ಕಾಣುತ್ತಿದೆ. ಇದಕ್ಕೆ ಕಾರಣ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಚಾರ. ಇದನ್ನೂ ಓದಿ:Kannada Serial: ಲಕ್ಷಣಾ ಧಾರಾವಾಹಿಯ ಸಿಂಪಲ್ ನಕ್ಷತ್ರಾ ನಿಜ ಜೀನವಲ್ಲಿ ಹೇಗಿದ್ದಾರೆ? ಅವರ ನಿಜವಾದ ಹೆಸರೇನು ಗೊತ್ತಾ? ನೀವೇ ನೋಡಿ

ಈ ವಾರದ ಟಾಸ್ಕ್ ತುಂಬಾನೇ ಸವಾಲಿನದಾಗಿತ್ತು. ಪ್ರತಿಯೊಬ್ಬರೂ ಸಿಕ್ಕಾಪಟ್ಟೆ ಎಗ್ರೆಸ್ಸಿವ್ ಆಗಿ ಆಡುತ್ತಿದ್ದರು. ಒಬ್ಬರಿಗೊಬ್ಬರು ಫಿಸಿಕಲ್ ಆಗಿ ಕಿತ್ತಾಡಲೇ ಬೇಕಾದ ಗೊಂಬೆಗಳ ಫ್ಯಾಕ್ಟರಿ ಟಾಸ್ಕ್ (Task) ನಲ್ಲಿ ಎಲ್ಲರಂತೆ ರೂಪೇಶ್ ರಾಜಣ್ಣ ಅವರು ಕೂಡ ತೊಡಗಿಸಿಕೊಂಡಿದ್ದರು. ಟಾಸ್ಕ್ ಆಡೋ ಬರದಲ್ಲಿ ರಾಜಣ್ಣ ಅವರು ಸ್ಪರ್ಧಿಗಳ ಜೊತೆ ಏಕವಚನದಲ್ಲಿ ಮಾತನಾಡಿದ್ದಾರೆ. ಮುಂದೆ ನಿಂತ ಸ್ಪರ್ಧಿಗಳಿಗೆ ಏಕವಚನದಲ್ಲಿ ಮಾತನಾಡಬೇಡಿ ಎಂದು ವಾರ್ನಿಂಗ್ ಮಾಡಿದ್ದಾರೆ. ಇದನ್ನು ನೋಡಿದ ದಿವ್ಯ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಿವ್ಯಾ ಸುರೇಶ್

ರೂಪೇಶ್ ರಾಜಣ್ಣ ಅವರ ಬಗ್ಗೆ ತುಂಬಾನೇ ಬೇಸರವಾಗುತ್ತಿದೆ. ಅವರು ಮನೆಯೊಳಗೆ ಸುಖಾಸುಮ್ಮನೆ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಆಟದ ಬರದಲ್ಲಿ ಏಕವಚನದಲ್ಲಿ ಮಾತನಾಡಿಸುವುದು ದೊಡ್ಡ ಅಪರಾಧವಲ್ಲ. ಆಟದದ ಮಧ್ಯೆ ರಾಜಣ್ಣ ಅವರನ್ನು ಟಿಗರ್ ಮಾಡಲಾಗುತ್ತದೆ.ನಂತರ ಇವರೇ ಈ ರೀತಿ ಮಾತನಾಡಿದರೆ ಸರಿ ಇರಲ್ಲ ಎಂದು ಹೇಳುತ್ತಾರೆ. ಆಟದಲ್ಲಿ ಎಲ್ಲರೂ ಉತ್ತಮವಾಗಿ ಆಡುವುದು ಸಹಜ. ಅಲ್ಲದೆ ತಪ್ಪುಗಳಾಗುವುದು ಸಹಜ. ಆದರೆ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಆಟ (game) ವನ್ನು ಆಟದ ರೀತಿ ನೋಡಬೇಕು. ಕಾರಣವೇ ಇಲ್ಲದೆ ರಾಜಣ್ಣ ಅವರ ವಿರುದ್ಧ ಮಾತನಾಡುವುದು ಎಷ್ಟು ಸರಿ ಎಂದು ದಿವ್ಯಾ ಸುರೇಶ್ ರಾಜಣ್ಣ ಅವರ ಆಟವನ್ನು ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ: Comedy Gang: ಸೋಮಶೇಖರ್ ಹಾಗೂ ನಯನಾ ವಿರುದ್ದ ಶುರುವಾದ ವಾಗ್ವಾದ; ಕಾಮೆಡಿ ಮಾಡೋ ಕಲಾವಿದರು ಹೀಗೆ ಸಿರಿಯಸ್ ಆಗಿದ್ಯಾಕೆ ಗೊತ್ತಾ? ಇಲ್ಲಿದೆ  ನೋಡಿ ಅಸಲಿ ಕಾರಣ!

ದಿವ್ಯ ಸುರೇಶ್ ಅವರು ಇದೊಂದೆ ಅಲ್ಲದೆ ಹಲವು ಎಪಿಸೋಡ್ (Episode) ಗಳ ಬಗ್ಗೆಯೂ ಸಾಮಾಜಿಕ ಜಾಲತಾಣ (Social Media) ದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

bigg boss kannada season 9contestantಕನ್ನಡ ಬಿಗ್ ಬಾಸ್ ಸೀಸನ್ 9ಸ್ಪರ್ಧಿಗಳು