Bike: 70,000 ರೇಂಜ್ ನ ಟಾಪ್ 5 ಬೆಸ್ಟ್ ಬೈಕ್ ಗಳು ಇವುಗಳ ನೋಡಿ!

Bike:ಈ ಲೇಖನದ ಮೂಲಕ ನಿಮಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುವಂತಹ ಅಂದರೆ 70000 ರೂಪಾಯಿಗಳ ರೇಂಜ್ ನಲ್ಲಿ ಸಿಗುವಂತಹ ಟಾಪ್ 5 ಬೈಕುಗಳ ಬಗ್ಗೆ ತಿಳಿಸಲು ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆಯವರೆಗೂ ಓದಿ.

  • HERO Hf Deluxe ಬೈಕ್ ಈ ಸಾಲಿನಲ್ಲಿ ಕಾಣಿಸಿಕೊಳ್ಳುವಂತಹ ಮೊದಲ ಬೈಕ್ ಆಗಿದೆ. ಇದರ ಬೆಲೆ 59,998 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆ ಆಗಿದೆ. ಈ ಬೈಕ್ ನಿಮಗೆ 5 ಕಲರ್ಗಳಲ್ಲಿ ದೊರಕುತ್ತದೆ ಹಾಗೂ ಇದರ ಇಂಜಿನ್ 97.2 ಸಿಸಿಯಾಗಿದೆ.
  • Hero Hf h100 ಕೂಡ ಈ ಸಾಲಿನಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಇದರ ಬೆಲೆ 56318 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಪ್ರಾರಂಭವಾಗುತ್ತದೆ. ಇದು ಕೂಡ 97.2 ಸಿಸಿ ಇಂಜಿನ್ ಹೊಂದಿದೆ. ನಾಲ್ಕು ಸ್ಪೀಡ್ ಟ್ರಾನ್ಸ್ಮಿಷನ್ ಅನ್ನು ನೀವು ಈ ಬೈಕ್ ನಲ್ಲಿ ಕಾಣಬಹುದಾಗಿದೆ.
  • ಸಿಸಿ ಇಂಜಿನ್ ಹೊಂದಿರುವಂತಹ ಟಿವಿಎಸ್ ಸ್ಪೋರ್ಟ್ ಕೂಡ ಈ ಸಾಲಿನಲ್ಲಿ ಕಾಣಿಸಿಕೊಳ್ಳುವಂತಹ ಮತ್ತೊಂದು ಬೈಕ್ ಆಗಿದೆ. ಇದರ ಬೆಲೆ 59881 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ. ಉತ್ತಮವಾದ ಮೈಲೇಜ್ ವಿಚಾರದಲ್ಲಿ ಕೂಡ ಇದು ಬೆಸ್ಟ್ ಆಯ್ಕೆ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
  • ಹೋಂಡಾ ಶೈನ್ 100 98.98 ಸಿಸಿ ಎಂಜಿನ್ ಹೊಂದಿರುವಂತಹ ಬೈಕ್ ಆಗಿದ್ದು ಪ್ರತಿದಿನದ ಓಡಾಟಕ್ಕೆ ಹೇಳಿ ಮಾಡಿಸಿದ ಬೈಕ್ ಆಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದರ ಬೆಲೆ 64,900 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತೆ. ಪ್ರತಿದಿನದ ಕೆಲಸದ ಓಡಾಟಕ್ಕೆ ಬೆಸ್ಟ್ ಬೈಕ್ ಆಗಿದೆ.
  • ಬಜಾಜ್ ಪ್ಲಾಟಿನ 100 ಬೈಕ್ ಕೂಡ ಅತ್ಯಂತ ಕಡಿಮೆ ದರದಲ್ಲಿ ಹಾಗೂ ಉತ್ತಮ ಮೈಲೇಜ್ ನೀಡುವಂತಹ ಬೈಕುಗಳಲ್ಲಿ ಕೂಡ ಒಂದಾಗಿ ಕಾಣಿಸಿಕೊಳ್ಳುವಂತಹ ಬೈಕ್. ಇದರ ಬೆಲೆ 68685 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ. ಸುರಕ್ಷತೆ ದೃಷ್ಟಿಯಲ್ಲಿ ಕೂಡ ಸಾಕಷ್ಟು ಟೀಚರ್ ಗಳನ್ನು ಹೊಂದಿರುವಂತಹ ಈ ಬೈಕ್ ಮೈಲೇಜ್ ವಿಚಾರದಲ್ಲಿ ಖಂಡಿತವಾಗಿ ಸವಾರಿ ಮಾಡುವವರ ಬೆಸ್ಟ್ ಫ್ರೆಂಡ್ ಆಗಿರುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಈ ಮೇಲೆ ಹೇಳಿರುವಂತಹ ಪ್ರತಿಯೊಂದು ಬೈಕುಗಳು ಕೂಡ ಕೇವಲ ಬಜೆಟ್ ವಿಚಾರದಲ್ಲಿ ಮಾತ್ರವಲ್ಲದೆ ಮೈಲೇಜ್ ವಿಚಾರದಲ್ಲಿ ಕೂಡ ಖರೀದಿ ಮಾಡುವವರಿಗೆ ಸಾಕಷ್ಟು ರೀತಿಯಲ್ಲಿ ಸಹಾಯಮಾಡುತ್ತದೆ ಎಂದು ಹೇಳಬಹುದು.