Kannada Recipe: ಕಡಲೆ ಬೇಳೆ ಹಿಟ್ಟಿನಿಂದ ಈ ರೀತಿ ರೊಟ್ಟಿ ಮಾಡಿ ತಿನ್ನಿ, ಗೋಧಿ ಹಿಟ್ಟಿನ ರೊಟ್ಟಿಗೆ ಬಾಯ್ ಬಾಯ್ ಹೇಳುತ್ತೀರಿ!?

Kannada Recipe: ಸಾಮಾನ್ಯವಾಗಿ ಮಧುಮೇಹ ಇರುವವರು ಅಥವಾ ಇತರ ಕಾಯಿಲೆ ಇರುವವರು ಜೊತೆಗೆ ದೇಹದ ತೂಕ ಕಡಿಮೆ ಮಾಡಲು ಇಷ್ಟಪಡುವವರು ಗೋಧಿ ಹಿಟ್ಟಿನ ರೊಟ್ಟಿ ಮಾಡಿಕೊಂಡು ತಿನ್ನುತ್ತಾರೆ. ಇದರಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ. ಅದೇ ರೀತಿ ಜೋಳದ ರೊಟ್ಟಿ ರಾಗಿ ರೊಟ್ಟಿ ಮೊದಲಾದವು ನಮ್ಮಲ್ಲಿ ಚಾಲ್ತಿಯಲ್ಲಿವೆ. ಇದೇ ರೀತಿ ನೀವು ಹೆಚ್ಚು ಪೋಷಕಾಂಶ ಇರುವಂತಹ ಕಡಲೆ ಬೇಳೆ ಹಿಟ್ಟಿನ ರೊಟ್ಟಿಯನ್ನು ಕೂಡ ತಟ್ಟಿಕೊಂಡು ತಿನ್ನಬಹುದು.

Kannada Recipe: ಕಡಲೆ ಬೇಳೆ ಹಿಟ್ಟಿನಿಂದ ಈ ರೀತಿ ರೊಟ್ಟಿ ಮಾಡಿ ತಿನ್ನಿ, ಗೋಧಿ ಹಿಟ್ಟಿನ ರೊಟ್ಟಿಗೆ ಬಾಯ್ ಬಾಯ್ ಹೇಳುತ್ತೀರಿ!? https://sihikahinews.com/amp/breakfast-recipes-chana-dal-rotti-easy-recipe/

 ಅದರಲ್ಲೂ ಬೆಳಗಿನ ಬ್ರೇಕ್ ಫಾಸ್ಟ್ ಗೆ ಇಂಥ ಒಂದು ರುಚಿಕರವಾದ ರೊಟ್ಟಿಯನ್ನು ಮಾಡಿ ನೋಡಿ ಮನೆಯವರು ಚಪ್ಪರಿಸಿಕೊಂಡು ತಿನ್ನುತ್ತಾರೆ. ಹಾಗಾದರೆ ಈ ರೆಸಿಪಿ ಮಾಡೋದು ಹೇಗೆ ನೋಡೋಣ ಬನ್ನಿ.

ಕಡಲೆಬೇಳೆ ಹಿಟ್ಟಿನ ರೊಟ್ಟಿ ತಯಾರಿಸಲು ಬೇಕಾಗುವ ಸಾಮಗ್ರಿಗಳು;

1 ಕಪ್ ಕಡಲೆಬೇಳೆ ಹಿಟ್ಟು

1 ಕಪ್ ಗೋಧಿ ಹಿಟ್ಟು,

ಚಿಟಿಕೆ ಇಂಗು

ಒಂದು ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಒಂದು ಸಣ್ಣದಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ

ಹೆಚ್ಚಿದ ಕೊತ್ತಂಬರಿ ಸೊಪ್ಪು

ರುಚಿಗೆ ತಕ್ಕಷ್ಟು ಉಪ್ಪು

ಹಿಟ್ಟು ಕಲಸಲು ನೀರು ಬೇಕು

ಕಡಲೆಬೇಳೆ ಹಿಟ್ಟಿನ ರೊಟ್ಟಿ ಮಾಡುವ ವಿಧಾನ;

ಮೊದಲಿಗೆ ಒಂದು ಪಾತ್ರೆಗೆ ಗೋಧಿ ಹಿಟ್ಟನ್ನು ಹಾಕಿ ಅದಕ್ಕೆ ಕಡಲೆ ಬೇಳೆ ಹಿಟ್ಟಿನ್ನೂ ಹಾಕಿ ಮಿಶ್ರಣ ಮಾಡಿ. ನಂತರ ಇದಕ್ಕೆ ಉಪ್ಪು, ಜೀರಿಗೆ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಈರುಳ್ಳಿ ಮತ್ತು ಇಂಗು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮೊದಲು ನೀರು ಹಾಕದೆ ಕಲಸಿ. ಎಲ್ಲಾ ಪದಾರ್ಥಗಳೂ ಚೆನ್ನಾಗಿ ಮಿಕ್ಸ್ ಆದಮೇಲೆ ನೀರು ಹಾಕಿ ಹಿಟ್ಟನ್ನು  ಕಲಸಿರಿ. ಸಿದ್ಧವಾದ ಹಿಟ್ಟನ್ನು ಐದು ನಿಮಿಷಗಳ ಕಾಲ ಪ್ರಿಡ್ಜ್ ನಲ್ಲಿ ಮುಚ್ಚಿಡಿ. ಆಗ ಹಿಟ್ಟು ಸರಿಯಾದ ಹದಕ್ಕೆ ಬರುತ್ತದೆ. ಇದನ್ನೂ ಓದಿ: Kitchen Hacks: ತಂದಿರುವ ಸೊಪ್ಪುಗಳೆಲ್ಲಾ ಒಂದೇ ದಿನಕ್ಕೆ ಹಾಳಾಗ್ತಾ ಇದ್ಯಾ? ಹಾಗಾದ್ರೆ ಒಮ್ಮೆ ಈ ಟ್ರಿಕ್ಸ್ ಟ್ರೈ ಮಾಡಿ; ಸೊಪ್ಪು ಹಾಳಾಯ್ತು ಎನ್ನುವ ಮಾತೇ ಇಲ್ಲ!  

ಐದು ನಿಮಿಷದ ನಂತರ ಹಿಟ್ಟನ್ನು ಫ್ರಿಡ್ಜ್ ನಿಂದ ತೆಗೆದು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಅದನ್ನು ಲಟ್ಟಿಸಿ. ಬೇಕಿದ್ದರೆ ಸ್ಪಲ್ಪ ಹಿಟ್ಟಿನಲ್ಲಿ ಉಂಡೆಯನ್ನು ಅದ್ದಿಸಿಕೊಂಡು ಲಟ್ಟಿಸಿಕೊಳ್ಳಬಹುದು. ಈಗ ಒಲೆಯ ಮೇಲೆ ಕಾವಲಿಯನ್ನು ಇತ್ತು ಬಿಸಿ ಮಾಡಿ. ಕಾವಲಿ ಬಿಸಿ ಅದ ನಂತರ ಲಟ್ಟಿಸಿದ ರೊಟ್ಟಿಯನ್ನು ಕಾವಲಿ ಮೇಲೆ ಹಾಕಿ. ಎರಡೂ ಬದಿಗೂ ಚೆನ್ನಾಗಿ ಬೇಯಿಸಿ ತೆಗೆಯಿರಿ. ರುಚಿಯಾದ ರೊಟ್ಟಿ ಸವಿಯಲು ಸಿದ್ಧ. ಇದನ್ನ  ತುಪ್ಪ, ಬೆಳ್ಳುಳ್ಳಿ ಚಟ್ನಿ ಜೊತೆ ಬಿಸಿಯಾಗಿ ತಿನ್ನುವುದಕ್ಕೆ ಸೂಪರ್ ಆಗಿರುತ್ತದೆ. ಕಡಲೆ ಬೇಳೆಯಲ್ಲಿ ಹೆಚ್ಚು ಫೈಬರ್ ಇದೆ. ಇದು ತೂಕ ಇಳಿಸುವುದಕ್ಕೂ ಕೂಡ ಸಹಾಯವಾಗುತ್ತದೆ.

Healthy foodKannada RecipeLifestyleಅಡುಗೆ ಮನೆರೆಸಿಪಿ