BSNL: ಮುಕೇಶ್ ಅಂಬಾನಿಗೂ ಟೆನ್ಶನ್ ಕೊಟ್ಟ BSNL ಆಫರ್; ಗ್ರಾಹಕರು ಫುಲ್ ಖುಷ್!

BSNL: BSNL ಸಂಸ್ಥೆ ತನ್ನ ಗ್ರಾಹಕರು ಅಥವಾ ತಮ್ಮ ಸಿಮ್ ಕಾರ್ಡ್ ಬಳಕೆ ಮಾಡುವಂತಹ ಜನರಿಗೆ ನಿಜಕ್ಕೂ ಕೂಡ ಉಚಿತ ಎನಿಸುವಂತಹ ಯೋಜನೆಯನ್ನು ಜಾರಿಗೆ ತಂದಿದ್ದು ಇದನ್ನು ನೋಡಿ ಜಿಯೋ ಸಂಸ್ಥೆಯ ಮುಕೇಶ್ ಅಂಬಾನಿ ಕೂಡ ಬೆಚ್ಚಿ ಬೀಳಬಹುದಾಗಿದೆ. ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಬಹುತೇಕ ಹೆಚ್ಚಿನ ಗ್ರಾಹಕರನ್ನು ಹೊಂದಿರುವಂತಹ ಪಾಲನ್ನು ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳು ಹೊಂದಿವೆ. ಆದರೆ ಈಗ BSNL ಸಂಸ್ಥೆ ಹೆಚ್ಚಿನ ಗ್ರಾಹಕರನ್ನು ತಲೆ ಕೆಡಿಸಿಕೊಳ್ಳುವುದಕ್ಕೆ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವಂತ ಕೆಲಸವನ್ನು ಮಾಡುತ್ತಿದೆ.

BSNL ಕಡೆಯಿಂದ ಜಾರಿಗೆ ಬಂತು ನೋಡಿ ಉಚಿತ ಯೋಜನೆ

ಈಗಾಗಲೇ ಮಾರುಕಟ್ಟೆಯಲ್ಲಿ ಪ್ರತಿಯೊಂದು ವಿಚಾರಗಳಲ್ಲಿ ಕೂಡ BSNL ಸಂಸ್ಥೆಗೆ ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳು ಅತ್ಯಂತ ಕಾಂಪಿಟೇಶನ್ ನೀಡುವಂತಹ ಕಂಪನಿಗಳಾಗಿವೆ.

BSNL ಸಂಸ್ಥೆ ಇನ್ಮುಂದೆ ಬ್ರಾಡ್ ಬ್ಯಾಂಡ್ ಕನೆಕ್ಷನ್ ಮಾಡುವುದಾದರೆ 2025 ರ ತನಕ ಯಾವುದೇ ರೀತಿಯ ಚಾರ್ಜಿಂಗ್ ಪಡೆದುಕೊಳ್ಳುವುದಿಲ್ಲ ಎನ್ನುವುದಾಗಿ ಹೇಳಿದೆ. ಇದುವರೆಗೂ BSNL ಸಂಸ್ಥೆ ಇನ್ಸ್ಟಾಲೇಶನ ಮಾಡುವುದಕ್ಕಾಗಿ ಐನೂರು ರೂಪಾಯಿಗಳವರೆಗೆ ಪಡೆದುಕೊಳ್ಳುತ್ತಿತ್ತು ಎಂಬುದಾಗಿ ತಿಳಿದು ಬಂದಿತು ಇನ್ನು ಮುಂದೆ ಯಾವುದೇ ರೀತಿಯ ಹಣವನ್ನು ಪಡೆದುಕೊಳ್ಳುವುದಿಲ್ಲ. ಬ್ರಾಡ್ ಬ್ಯಾಂಡ್ ಯೋಜನೆ ಅಡಿಯಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಅನ್ನು ಪಡೆದುಕೊಳ್ಳಬಹುದಾಗಿತ್ತು ಹಾಗೂ ಇನ್ಸ್ಟಾಲೇಶನ್ ಮಾಡುವಾಗ 500 ರೂಪಾಯಿಗಳ ಚಾರ್ಜ್ ಮಾತ್ರವಲ್ಲದೆ ಹೆಚ್ಚುವರಿಯಾಗಿ 250 ರೂಪಾಯಿಗಳನ್ನು ಕೂಡ ನೀಡಬೇಕಾಗಿತ್ತು ಆದರೆ ಇನ್ಮುಂದೆ 2025 ರ ವರೆಗೂ ಕೂಡ ಆ ರೀತಿಯಾಗಿ ಯಾವುದೇ ಚಾರ್ಜಸ್ ಗಳನ್ನು ನೀಡಬೇಕಾದ ಅಗತ್ಯವಿಲ್ಲ ಎಂಬುದಾಗಿ ಹೇಳಿದೆ.

ಬಿಎಸ್ಎನ್ಎಲ್ ಸಂಸ್ಥೆ ಈಗಾಗಲೇ ತನ್ನ ಗ್ರಾಹಕರನ್ನ ಮತ್ತೆ ಮರಳಿ ಪಡೆಯುವಂತಹ ಪ್ರಯತ್ನಕ್ಕಾಗಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಈಗ ಈ ಯೋಜನೆಯ ಕೂಡ ಜಾರಿಗೆ ತಂದಿರೋದು ಮತ್ತಷ್ಟು ಗ್ರಾಹಕರ ಸೆಳೆಯುವುದಕ್ಕೆ ಯಶಸ್ವಿ ಆಗಿದೆ ಎಂದು ಹೇಳಬಹುದಾಗಿದೆ. ಬೇರೆ ಕಂಪನಿಗಳು ಬ್ರಾಡ್ ಬ್ಯಾಂಡ್ ಕನೆಕ್ಷನ್ ಮಾಡಿಸುವುದಕ್ಕೆ ಕಡಿಮೆ ಹಣವನ್ನು ಪಡೆದುಕೊಂಡರೆ ಬಿಎಸ್ಎನ್ಎಲ್ ಸಂಸ್ಥೆ ಉಚಿತವಾಗಿ ಮಾಡಿಸುವಂತಹ ಈ ಹೊಸ ಯೋಜನೆ ಖಂಡಿತವಾಗಿ ಇನ್ನಷ್ಟು ಗ್ರಾಹಕರನ್ನ ಬಿಎಸ್ಎನ್ಎಲ್ ಸಂಸ್ಥೆಗೆ ತಂದು ಕೊಡಲಿದೆ ಎಂದು ಹೇಳಬಹುದು. ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಕಾಲಿಂಗ್ ವ್ಯವಸ್ಥೆಯನ್ನು ಕೂಡ ಇದು ನಿಮಗೆ ನೀಡಲಿದೆ.

BSNL