BSNL Offer: ಬಿಎಸ್ಎನ್ಎಲ್ ನ ಹೊಸ ಆಫರ್; ಈ ಆಫರ್ ಬಗ್ಗೆ ತಿಳಿದುಕೊಂಡ್ರೆ ನೀವು ಬಿಎಸ್ಎನ್ಎಲ್ಗೆ ಪೋರ್ಟ್ ಮಾಡೋದು ಗ್ಯಾರೆಂಟಿ; ಯಾವುದು ಆ ಪ್ಲಾನ್? ಏನೇನು ಸಿಗುತ್ತೇ ಗೊತ್ತಾ?

BSNL Offer: ಇದೀಗ ಭಾರತದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಜೋರಾಗಿಯೇ ನಡೆದಿದೆ. ಇದು ಟೆಲಿಕಾಂ ಕ್ಷೇತ್ರವನ್ನು ಬಿಟ್ಟಿಲ್ಲ. ಈ ಪೈಪೋಟಿಯನ್ನು ತಡೆಯಲಾಗದೆ ಹಲವು ಟೆಲಿಕಾಂ ಕಂಪನಿ (Telecom company) ಗಳು ಇನ್ನೊಂದು ದೊಡ್ಡ ಕಂಪನಿಯೊಂದಿಗೆ ಮರ್ಜ್ ಆಗಿಬಿಟ್ಟಿವೆ. ಇದೀಗ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಅತಿ ಕಡಿಮೆ ಬೆಲೆಯ ಆಫರ್ ನೀಡಿದೆ. ಬಿಎಸ್ಎನ್ಎಲ್ ಇದು ಕೇಂದ್ರ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿದೆ.

ಹೆಚ್ಚಿನ ಗ್ರಾಹಕರು ರೀಚಾರ್ಜ್ (Recharge) ಮಾಡಿ ಮಾಡಿ ಸುಸ್ತಾಗಿರುತ್ತಾರೆ. ಪ್ರತಿ 15 ದಿನಕ್ಕೊಮ್ಮೆ ರಿಚಾರ್ಜ್ ಮಾಡಬೇಕು ಎಂದರೆ ಎಂತಹವನಿಗೂ ಬೇಸರ ಹುಟ್ಟದೆ ಇರದು. ಇದನ್ನರಿತ ಬಿಎಸ್ಎನ್ಎಲ್  ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗಾಗಿ ಅಗ್ಗದ ಹಾಗೂ ಧೀರ್ಘ ಕಾಲ ಬರುವಂತಹ ಆಫರ್ ಘೋಷಣೆ ಮಾಡಿದೆ. ಈ ಪ್ಲಾನ್ (Plan) 1999 ರೂ. ಮೌಲ್ಯದ ಯೋಜನೆಯಾಗಿದೆ. ಇದನ್ನೂ ಓದಿ:Loan for Business: ಭರ್ಜರಿ ಯೋಜನೆ, ಬಡವರಿಗೆಂದು ಇರುವ ಯೋಜನೆ ಬಳಸಿ, 50 ಸಾವಿರ ಹಣ ಪಡೆಯುವುದು ಹೇಗೆ ಗೊತ್ತೇ?

ಈ ಯೋಜನೆಯಡಿ ಗ್ರಾಹಕರು ಯಾವುದೇ ನೆಟ್ವರ್ಕ್ (Network) ಹೊಂದಿದವರ ಜೊತೆ ಅನ್ಲಿಮಿಟೆಡ್ (Unlimited)  ಆಗಿ ಮಾತನಾಡಬಹುದು. ಪ್ರತಿದಿನ ಬರೋಬ್ಬರಿ 3 ಜಿಬಿ ಡಾಟಾ ಬಳಕೆ ಮಾಡಬಹುದು. ಅಂದರೆ ವಾರ್ಷಿಕವಾಗಿ 1095 ಜಿಬಿ ಡಾಟಾ ಬಳಕೆ ಮಾಡಬಹುದಾಗಿದೆ. ಇದರ ಜೊತೆ ಪ್ರತಿದಿನ 1೦೦ ಎಸ್ಎಂಎಸ್ ಉಚಿತವಾಗಿ ಮಾಡಬಹುದು. ನಿಮ್ಮ 3 ಜಿಬಿ ಇಂಟರ್ನೆಟ್ (internet) ಖಾಲಿಯಾದ ಬಳಿಕ ಅದರ ವೇಗವು 4೦ ಎಂಬಿಪಿಎಸ್ಗೆ ಇಳಿಕೆಯಾಗಲಿದೆ. ಇದನ್ನೂ ಓದಿ:Actress Varalakshmi: ಹಿರಿಯ ನಟಿಯ ಪಾತ್ರಗಳಲ್ಲಿ ಮಾಡುವ ಈ ನಟಿ ಬ್ಯಾಕ್ ಗ್ರೌಂಡ್ ಕೇಳಿದರೆ, ಗಟ ಗಟ ಅಂತ ನೀರು ಕುಡಿತೀರಾ. ಅದೆಷ್ಟು ಸಾವಿರ ಕೋಟಿ ಒಡತಿ ಗೊತ್ತೇ?

1999 ರೂ.ನ ಯೋಜನೆಯು ವಾರ್ಷಿಕ ಯೋಜನೆಯಾಗಿದ್ದು, ಒಮ್ಮೆ ನೀವು ರೀಚಾರ್ಜ್ ಮಾಡಿಸಿದಲ್ಲಿ ಒಂದು ವರ್ಷದ ವರೆಗೆ ಯಾವುದೇ ರೀಚಾರ್ಜ್ ಮಾಡಿಸಬೇಕು, ಇಂಟರ್ನೆಟ್ ಖಾಲಿಯಾಯಿತು ಎನ್ನುವ ಚಿಂತೆ ಇರುವುದಿಲ್ಲ. ಅಲ್ಲದೆ ಪದೇ ಪದೇ ರಿಚಾರ್ಜ್ ಮಾಡಿಸಬೇಕು ಎನ್ನುವ ತಲೆನೋವು ಕೂಡ ಇರುವುದಿಲ್ಲ. ಹಾಗಾಗಿ ಇದೊಂದು ಅತ್ಯುತ್ತಮ ಹಾಗೂ ಅಗ್ಗದ ಯೋಜನೆ ಎಂದೇ ಹೇಳಬಹುದಾಗಿದೆ.

BSNLBSNL OfferkarnatakaRecharge Planಬಿ ಎಸ್ ಎನ್ ಎಲ್