Business Ideas: ನಿಮ್ಮ ಊರಿನಲ್ಲಿಯೇ ಇದ್ದುಕೊಂಡು, ಡೈರಿ ಉದ್ಯಮ ಆರಂಭ ಮಾಡಿ, ಲಕ್ಷ ಗಳಿಸುವುದು ಹೇಗೆ ಗೊತ್ತೇ?? ಸುಲಭ ಉಪಾಯ ಏನು ಗೊತ್ತೇ??

Business Ideas:ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಎಲ್ಲ ವಿಚಾರಗಳಲ್ಲೂ ತಾನು ಸ್ವತಂತ್ರವಾಗಿ ಇರಬೇಕು ಎಂದು ಹಲವರಿಗೆ ಅನಿಸುತ್ತದೆ. ಆದರೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬೇಕಾದ ಮಾರ್ಗವೇ ತಿಳಿದಿರುವುದಿಲ್ಲ. ಆದರೆ ಇಂದಿನ ದಿನದಲ್ಲಿ ಅವಕಾಶಗಳು ಸಾಕಷ್ಟು ಹೆಚ್ಚಾಗಿವೆ. ಮನಸ್ಸು ಮಾಡಿದರೆ ಮಾರ್ಗ ಎಂಬಂತೆ ಯಾವುದೇ ಉದ್ಯೋಗವನ್ನಾದರೂ ಶ್ರದ್ದೆಯಿಂದ ಮಾಡಬೇಕು. ಕರೋನಾ ನಂತರದ ದಿನಗಳಲ್ಲಿ ಯುಜನತೆ ಹಳ್ಳಿಗಳತ್ತ ಮುಖ ಮಾಡುತ್ತಿದ್ದು, ಹಳ್ಳಿಗಳಲ್ಲಿಯೇ ಜೀವನ ಕಟ್ಟಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಕೃಷಿ, ಹೈನುಗಾರಿಕೆಯತ್ತ ಮುಖ ಮಾಡಿದ್ದಾರೆ.

Business Ideas: ನಿಮ್ಮ ಊರಿನಲ್ಲಿಯೇ ಇದ್ದುಕೊಂಡು, ಡೈರಿ ಉದ್ಯಮ ಆರಂಭ ಮಾಡಿ, ಲಕ್ಷ ಗಳಿಸುವುದು ಹೇಗೆ ಗೊತ್ತೇ?? ಸುಲಭ ಉಪಾಯ ಏನು ಗೊತ್ತೇ?? https://sihikahinews.com/amp/business-ideas-you-can-start-dairy-business-from-your-place/

ಹೈನುಗಾರಿಕೆಯಲ್ಲಿ ಉತ್ತಮ ಆದಾಯ ಗಳಿಸುತ್ತಿರುವ ಅದೆಷ್ಟೋ ತರುಣರು ಮಾದರಿಯಾಗಿದ್ದಾರೆ. ಸರಿಯಾದ ಯೋಜನೆ ಹಾಗೂ ಆತ್ಮವಿಶ್ವಾಸ ಇದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು. ಹೈನುಗಾರಿಕೆಯ ವಿಷಯದಲ್ಲಿ ಡೈರಿ ಬ್ಯುಸಿನೆಸ್ ಆರಂಭಿಸುವ ಆಲೋಚನೆ ಇದ್ದರೆ ಆಯ್ಕೆಯಲ್ಲಿ ಆಳವಾದ ಜ್ಞಾನ ಇರಬೇಕು ಎನ್ನುವುದು ನಮ್ಮ ಸಲಹೆಯಾಗಿದೆ. ಜರ್ಸಿ ತಳಿಯು 2೦-25 ವರ್ಷಗಳ ಜೀವಿತಾವಧಿ ಹೊಂದಿದ್ದು, 3೦ ತಿಂಗಳ ನಂತರ ಹಾಲಿನ ಉತ್ಪಾದನೆ ಕಡಿಮೆ ಮಾಡುತ್ತದೆ.

ಪ್ರಪಂಚದಲ್ಲಿ ಪ್ರಸ್ತುತ 98೦ ದಶಲಕ್ಷ ಜಾನುವಾರುಗಳಿವೆ ಎಂದು ಅಂದಾಜಿಸಲಾಗಿದೆ. 3೦೦ ಮಿಲಿಯನ್ ಹೆಚ್ಚು ಜರ್ಸಿ ಹಸು ಹೊಂದಿರುವ ಭಾರತವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಮಾರುಕಟ್ಟೆಯಲ್ಲಿ ಜರ್ಸಿ ಹಸುವಿನ ಹಾಲಿಗೆ ಬೇಡಿಕೆ ಹೆಚ್ಚಿದ್ದು, ಇದು ಶೀಘ್ರದಲ್ಲೇ ಕಡಿಮೆಯಾಗುವುದಿಲ್ಲ ಎನ್ನುವ ವಿಶ್ವಾಸ ಕೃಷಿಕರದ್ದಾಗಿದೆ. ಈ ದೃಷ್ಟಿಯಲ್ಲಿ ಹೆಚ್ಚಿನ ಹಾಲು ಉತ್ಪಾದನೆಯಲ್ಲಿ ಮಾರಾಟದತ್ತ ಒಲವು ತೋರಿಸುವವರು ಜಿರ್ಸಿ ಆಕಳನ್ನು ಸಾಕುವುದು ಒಳಿತು. ಇದನ್ನೂ ಓದಿ:UPI Payment:ನಿಮ್ಮ ಫೋನ್ ಮಿಸ್ ಆಗಿ ಕಳೆದು ಹೋದರೇ, UPI ಅನ್ನು ಕೂಡ ಸೇಫ್ ಮಾಡಿ ಹಣ ಉಳಿಸಿಕೊಳ್ಳುವುದು ಹೇಗೆ ಗೊತ್ತೇ??

ಇತರ ಹಸುಗಳಿಗೆ ಹೋಲಿಸುವಾಗ ಜರ್ಸಿ ಆಕಳು ದಿನವೊಂದಕ್ಕೆ ೨೦-೩೫ ಲೀಟರ್ ಹಾಲು ನೀಡುತ್ತದೆ. ಅಂಕಿ ಅಂಶಗಳನ್ನು ಆಧರಿಸಿ ಜರ್ಸಿ ಆಕಳನ್ನು ಸಾಮಾನ್ಯ ಆಕಳುಗಳಿಗಿಂತ ಪ್ರತಿದಿನ ಎರಡು ಪಟ್ಟು ಅಧಿಕ ಹಾಲನ್ನು ಉತ್ಪಾದಿಸುತ್ತದೆ. ಜರ್ಸಿ ಹಸು ವರ್ಷದ 29೦ ದಿನ ಹಾಲು ಉತ್ಪಾದಿಸಿದರೆ ಹೈನುಗಾರಿಕೆಗೆ ಹೊಂದುವ ಅದ್ಬುತ ತಳಿಯಾಗಿದೆ. ಇದನ್ನೂ ಓದಿ:Solar Stove: ಈ ಸ್ಟವ್ ಉರಿಯೋದಕ್ಕೆ ಇಂಧನವೂ ಬೇಡ, ಗ್ಯಾಸ್ ಬೇಡ ಅಷ್ಟೇ ಯಾಕೆ ವಿದ್ಯುತ್ ಕೂಡ ಬೇಡ; ಯಾವುದು ಗೊತ್ತಾ ಆ ಅಗ್ಗದ ಚಮತ್ಕಾರಿ ಒಲೆ?

ವಿಶ್ವದ ಹಾಲಿನ ಉತ್ಪಾದನೆಯಲ್ಲಿ ಜರ್ಸಿ ಆಕಳುಗಳ ಕೊಡುಗೆ ಶೇ.೨೦. ಈ ಹಾಲು ಇತರ ಸಾಮಾನ್ಯ ಹಸುವಿನ ಹಾಲಿಗಿಂತ ಹೆಚ್ಚಿನ ಪೋಷಕಾಂಶ ಹೊಂದಿರುತ್ತದೆ. ಆರ್ಸಿ ಆಕಳು ಪ್ರತಿದಿನ ಸರಾಸರಿ 3೦ ಲೀಟರ್ ಹಾಲು ಉತ್ಪಾದಿಸಿದಾಗ ಸರಾಸರಿ 7೦ ರೂ.ಗೆ ಮಾರಾಟ ಮಾಡಿದರೆ ಕೃಷಿಕನ ಆದಾಯ ದಿನಕ್ಕೆ 2,1೦೦ರೂ. ಆಗುತ್ತದೆ. ಅದು ಒಂದು ತಿಂಗಳಿಗೆ 63,3೦೦ರೂ. ಆಗುತ್ತದೆ. ಇದನ್ನೂ ಓದಿ:WhatsApp Features: ವಾಟ್ಸಾಪ್ನಲ್ಲಿ ಡಿಲೀಟ್ ಆಗಿರುವ ಸಂದೇಶಗಳನ್ನು ಮತ್ತೆ ನೋಡಬೇಕಾ ಇಷ್ಟು ಮಾಡಿ ಸಾಕು!

ಜರ್ಸಿ ಆಕಳ ಬೆಲೆ ಗಿರ್ ಮತ್ತು ಸಾಹಿವಾಲ್ ನಂತಹ ದೇಸಿ ಹಸುಗಳಿಗಿಂತ ದುಬಾರಿಯಾಗಿದೆ. ಏಕೆಂದರೆ ಇದು ಭಾರತೀಯ ತಳಿ ಅಲ್ಲ. ಸರಾಸರಿ ಗುಣಮಟ್ಟದ ಹೊರತಾಗಿಯೂ ಜರ್ಸಿ ಹಸುಗಳು ಹೆಚ್ಚಿನ ಬೆಲೆಯನ್ನು ಹೊಂದಿದೆ. ಜರ್ಸಿ ಕರುವಿನ ಬೆಲೆ ಸುಮಾರು 5೦,೦೦೦ ರೂ. ಆಗಿದ್ದು, ಹಾಲು ಕೊಡುವ ಹಸುವಿನ ಬೆಲೆಯೂ 75,೦೦೦ರೂ. ನಿಂದ 1೦೦,೦೦೦ ರೂ. ವರೆಗೆ ಇರುತ್ತದೆ.

Business Ideasdairy businessown companyಉದ್ದಿಮೆ