Rudraksha mala Benefits: ಮಹಿಳೆಯರು ರುದ್ರಾಕ್ಷಿ ಧರಿಸಿದರೆ ಏನಾಗುತ್ತೆ ಗೊತ್ತಾ!? ಧರಿಸುವ ಮೊದಲು ಈ ಲೇಖನವನ್ನು ತಪ್ಪದೇ ಓದಿ!

Rudraksha mala Benefits: ಶಿವನಿಗೆ ಪ್ರಿಯವಾದ, ಶಿವನ (Shiva) ದ್ಯೋತಕವಾದ ರುದ್ರಾಕ್ಷಿ ತನ್ನದೇ ಆದ ಪ್ರಭಾವವನ್ನು ಹೊಂದಿದೆ ರುದ್ರಾಕ್ಷಿ ದೇವರ ಪೂಜೆಗೆ ಮಾತ್ರವಲ್ಲದೆ ಮನುಷ್ಯರು ತಮ್ಮ ದೇಹದಲ್ಲಿ ಧರಿಸಿದರು ಕೂಡ ಅದರಿಂದ ಉಂಟಾಗುವ ಪ್ರಯೋಜನಗಳು ಹೇಳಲು ಅಸಾಧ್ಯವಾದಂತದ್ದು. ಆದರೆ ರುದ್ರಾಕ್ಷಿಗೆ ಪಾವಿತ್ರ್ಯತೆ ಬೇಕು. ಶುದ್ದಿ ಬೇಕು. ಮುಖ್ಯವಾಗಿ ಮಹಿಳೆಯರು (Women) ರುದ್ರಾಕ್ಷಿಯನ್ನು ತರಿಸುತ್ತಾರೆ ಅಂದ್ರೆ ಅದಕ್ಕೆ ಕೆಲವು ನಿಯಮಾವಳಿಗಳು ಇವೆ ಅದನ್ನ ಸರಿಯಾಗಿ ಪಾಲಿಸಿದರೆ ರುದ್ರಾಕ್ಷಿಯ ಮಹಿಮೆ ನಿಮಗೆ ಅರ್ಥವಾಗುತ್ತೆ.

Rudraksha mala Benefits: ಮಹಿಳೆಯರು ರುದ್ರಾಕ್ಷಿ ಧರಿಸಿದರೆ ಏನಾಗುತ್ತೆ ಗೊತ್ತಾ!? ಧರಿಸುವ ಮೊದಲು ಈ ಲೇಖನವನ್ನು ತಪ್ಪದೇ ಓದಿ! https://sihikahinews.com/amp/can-women-wear-rudraksha-here-is-the-answer/

ಮಹಿಳೆಯರು ರುದ್ರಾಕ್ಷಿಯನ್ನು ಧರಿಸಬಹುದೇ ಬೇಡವೇ ಎನ್ನುವ ಗೊಂದಲಗಳಲ್ಲಿ ಇರುತ್ತದೆ ಸೃಷ್ಟಿಕರ್ತ ಭೂಮಿಯ ಮೇಲೆ ಯಾರಿಗೂ ಬೇಧ ಮಾಡುವುದಿಲ್ಲ ಹಾಗಾಗಿ ರುದ್ರಾಕ್ಷಿ ಧರಿಸುವುದಕ್ಕೆ ಪುರುಷ, ಮಹಿಳೆ ಎನ್ನುವ ಬೇಧ ಇಲ್ಲ ಯಾರು ಬೇಕಾದರೂ ಅದನ್ನು ಧರಿಸಬಹುದು (Wearing) ಆದರೆ ಹೇಗೆ ಎದುರಿಸಬೇಕು ಯಾವ ಸಮಯದಲ್ಲಿ ಧರಿಸಬೇಕು ಎನ್ನುವುದು ಬಹಳ ಮುಖ್ಯ. ಇದನ್ನೂ ಓದಿ: Kannada Recipe; ರಾತ್ರಿ ಚೆನ್ನಾ(ಕಾಬೂಲ್ ಕಡ್ಲೆ) ಕಾಳನ್ನು ನೆನೆಸಿಡಲು ನೆನಪಿದ್ರೆ ಸಾಕು, ಕೇವಲ ಐದು ನಿಮಿಷಗಳಲ್ಲಿ ಬೆಳಗಿನ ಈ ತಿಂಡಿ ಸಿದ್ದವಾಗಿರುತ್ತೆ!

ರುದ್ರಾಕ್ಷಿಯನ್ನು ಮಹಿಳೆಯರಲ್ಲಿ ಪ್ರಥಮ ಬಾರಿಗೆ ಧರಿಸಿದ್ದೆ ಪಾರ್ವತಿ (Parvati) ಆಕೆ ಒಮ್ಮೆ ಶಿವನ ಎರಡು ಕಣ್ಣುಗಳನ್ನು ತನ್ನ ಕೈಗಳಿಂದ ಮುಚ್ಚುತ್ತಾಳೆ ಆಗ ಪ್ರಪಂಚವೇ ಕತ್ತಲಾಗುತ್ತದೆ. ಈ ತಪ್ಪಿಗೆ ಪಶ್ಚಾತಾಪಗೊಂಡ ಪಾರ್ವತಿ ರುದ್ರಾಕ್ಷಿ ಮನೆಗಳನ್ನು ಧರಿಸಿ ಕಂಚಿಗೆ ಹೋಗುತ್ತಾಳೆ. ಹಾಗಾಗಿ ಮಹಿಳೆಯರು ರುದ್ರಾಕ್ಷಿ ಧರಿಸಬಾರದು ಎನ್ನುವ ಕಲ್ಪನೆ ತಪ್ಪು.

ಇನ್ನು ರುದ್ರಾಕ್ಷಿಯನ್ನು ಮಹಿಳೆಯರು ಧರಿಸುವಾಗ ಈ ಕೆಲವು ಅಂಶಗಳನ್ನು ನೆನಪಿನಲ್ಲಿಡಿ. ಒರಿಜಿನಲ್ ಆಗಿರುವಂತಹ ಅಂದರೆ ನೈಜ ರುದ್ರಾಕ್ಷಿಯನ್ನೇ ಧರಿಸಿ. ಜಪಮಾಲೆ ಧರಿಸುವುದಾದರೆ ಅದರಲ್ಲಿ 108 ಮಣಿಗಳು ಇರಬೇಕು. ಇನ್ನು ಜಪಮಾಲೆಯಲ್ಲಿ ಸುಮಾರು ಮಣಿ ಸೇರಿ 109 ಮಣಿಗಳು ಇದ್ದರೆ ಒಳ್ಳೆಯದು. ಜಪಮಾಲೆಯನ್ನ ಕುತ್ತಿಗೆಗೆ ಬಹಳ ಬಿಗಿಯಾಗಿ ಧರಿಸಬೇಡಿ. ಅಥವಾ ನೈಜವಾದ ಒಂದೇ ರುದ್ರಾಕ್ಷಿಯನ್ನು ಕೂಡ ಕುತ್ತಿಗೆ ಅಥವಾ ಕೈ ತೋಳಿಗೆ ದಾರದ ಸಹಾಯದಿಂದ ಕಟ್ಟಿಕೊಳ್ಳಬಹುದು. ರುದ್ರಾಕ್ಷಿಯಲ್ಲಿ ಸಾಕಷ್ಟು ವಿಧಗಳಿವೆ. ಏಕಮುಖ, ಪಂಚಮುಖ ಹೀಗೆ. ನೈಜವಾದ ರುದ್ರಾಕ್ಷಿಯನ್ನೇ ಖರೀದಿಸಿ ಧರಿಸಿಕೊಳ್ಳಿ. ಇನ್ನು ನೀವು ಧರಿಸುವ ರುದ್ರಾಕ್ಷಿಮಣಿ ಒಡೆದಿರಬಾರದು ಅದು ಪೂರ್ಣವಾಗಿರಬೇಕು. ಇದನ್ನೂ ಓದಿ: <a>Elon Musk: </a>ಮಾನವನ ಮೆದುಳಿಗೆ ಚಿಪ್ ಅಳವಡಿಕೆ; ಮನುಷ್ಯನ ಮೆದುಳಿಗೆ ಕೈಹಾಕಲು ಮುಂದಾದ್ರಾ ಎಲಾನ್ ಮಸ್ಕ್

ಮಹಿಳೆಯರು ರುದ್ರಾಕ್ಷಿಯನ್ನು ಧರಿಸಿದರೆ ಶಿವನು ಶಾಂತಿ ನೆಮ್ಮದಿಯನ್ನು ಕರುಣಿಸುತ್ತಾನೆ ಎಂದು ಶಾಸ್ತ್ರಗಳು ಕೂಡ ಹೇಳುತ್ತವೆ. ಮನಸ್ಸಿಗೆ ಆನಂದವನ್ನು ಉಂಟುಮಾಡುವ ರುದ್ರಾಕ್ಷಿ ಮಣಿ ಧರಿಸುವುದು ಒಳ್ಳೆಯದು. ರುದ್ರಾಕ್ಷಿ ಧರಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮತೋಲನ ಕಾಯ್ದುಕೊಳ್ಳಬಹುದು. ರುದ್ರಾಕ್ಷಿ ಧರಿಸುವುದರಿಂದ ಇದರಿಂದ ದೈನಂದಿನ ಕೆಲಸಗಳೂ ಕೂಡ ಸುಗಮವಾಗಿ ಆಗುತ್ತವೆ. ಬೆಳಗ್ಗೆ ಎದ್ದ ತಕ್ಷಣ ಕುತ್ತಿಗೆಯಲ್ಲಿ ರುದ್ರಾಕ್ಷಿ ಮಣಿ ಇದ್ರೆ ಅದನ್ನು ಒಮ್ಮೆ ಮುಟ್ಟಿಕೊಂಡು ಮನಸ್ಸಿನಲ್ಲಿಯೇ ದೇವರನ್ನು ನೆನೆಯಿರಿ ಆ ದಿನವಿಡೀ ನೀವು ಬಹಳ ಸಂತೋಷದಿಂದ ಕಳೆಯುತ್ತೀರಿ.

AstrologyRudrakshiWomen Wearing Rudraksha malaರುದ್ರಾಕ್ಷಿ ಉಪಯೋಗ