Car for low Price:ಬೈಕ್ ಗಿಂತ ಹೆಚ್ಚಾಗಿ ಲಾಭ ಕೊಡುತ್ತೆ ಈ ಕಾರು; ಇದರ ಮೈಲೇಜ್ ಕೇಳಿದ್ರೆ ಇವತ್ತೇ ಖರೀದಿ ಮಾಡ್ತೀರಾ!

Car for low Price: ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ ಹಾಗೂ ನವೀನ ವಾಗಿರುವಂತಹ ಫೀಚರ್ ಗಳನ್ನು ಹೊಂದಿರುವ ಕಾರುಗಳನ್ನು ಕೂಡ ನಾವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಭಾರತದ ಮಾರುಕಟ್ಟೆಯಲ್ಲಿ ಕಾಣಬಹುದಾಗಿದ್ದು ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಬೈಕ್ ಗಿಂತ ಕೂಡ ಬೆಸ್ಟ್ ಆಗಿರುವಂತಹ ಉತ್ತಮ ಮೈಲೇಜ್ ನೀಡುವ ಕಾರಿನ ಬಗ್ಗೆ. ಮಾರುತಿ ಸುಜುಕಿ ಡಿಜೈರ್‌ ಕಾರಿನ ಬಗ್ಗೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು.

ಮಾರುತಿ ಸುಜುಕಿ ಡಿಜೈರ್‌ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ!

ಈ ವರ್ಷದ ಮೊದಲ ಆರು ತಿಂಗಳಿನಲ್ಲಿ ಮಾರುತಿ ಸುಜುಕಿ ಡಿಜೈರ್‌ ಕಾರಿನ 93,811 ಯೂನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಮಾರಾಟದಲ್ಲಿ 30% ಹೆಚ್ಚಿನ ಬೆಳವಣಿಗೆ ಕಂಡುಬಂದಿದೆ. ಮಾರುತಿ ಸುಜುಕಿ ಡಿಜೈರ್‌ ಕಾರಿನ ಮೈಲೇಜ್ ವಿಶೇಷವಾಗಿ ಬೈಕ್ ಅನ್ನು ಕೂಡ ಮೀರಿಸುವ ರೀತಿಯಲ್ಲಿದೆ ಅನ್ನೋದೆ ಪ್ರೇಕ್ಷಕರಿಗೆ ಇದರ ಬಗ್ಗೆ ಹೆಚ್ಚಾಗಿ ಆಕರ್ಷಿಸುತ್ತಿರುವಂತಹ ವಿಚಾರವಾಗಿದೆ. ಇದರ ಬೆಲೆ 6.57 ರಿಂದ ಪ್ರಾರಂಭವಾಗಿ ಟಾಪ್ ವೇರಿಯಂಟ್ 9.34 ಲಕ್ಷ ರುಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕೂಡ ಸಿಗುತ್ತದೆ. ಹೀಗಾಗಿ ಕೈಗೆಟಕುವ ಬೆಲೆಯ ಕಾರುಗಳಲ್ಲಿ ಇದನ್ನು ಕೂಡ ನಾವು ಸೇರಿಸಿಕೊಳ್ಳಬಹುದಾಗಿದೆ.

ಏಳು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಅಡ್ಜಸ್ಟೇಬಲ್ ಡ್ರೈವರ್ ಸೀಟ್, ಎಸಿ ವೆಂಟ್ಸ್ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಫೀಚರ್ ಗಳನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. 1.2 ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ನೀವು ಇದರಲ್ಲಿ ಕಾಣಬಹುದಾಗಿದೆ. ಐದು ಸ್ಪೀಡ್ ಮಾನ್ಯುಯಲ್ ಅಥವಾ 5 ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಇದರಲ್ಲಿ ನಿಮಗೆ ಆಪ್ಷನ್ ರೂಪದಲ್ಲಿ ದೊರಕಲಿದೆ.

ಮಾರುತಿ ಸುಜುಕಿ ಡಿಜೈರ್‌ ಕಾರಿನ ಮೈಲಿ ಎಷ್ಟು ಗೊತ್ತಾ?

1.2 ಲೀಟರ್ ಮಾನ್ಯುಯಲ್ ನಲ್ಲಿ 22.41 ಕಿಲೋಮೀಟರ್ ಮೈಲೇಜ್ ನೀಡುತ್ತದೆ. 1.2 ಲೀಟರ್ ಆಟೋಮೆಟಿಕ್ ನಲ್ಲಿ 22.61 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಹಾಗೂ ಸಿಎನ್‌ಜಿ ಮ್ಯಾನುವಲ್ ನಲ್ಲಿ 31.12 ಕಿಲೋಮೀಟರ್ಗಳ ಮೈಲೇಜ್ ಅನ್ನು ನೀಡುತ್ತದೆ ಹಾಗೂ ಇದು ಕೆಲವೊಂದು ಬೈಕಿನ ಮೈಲೇಜ್ ಗಿಂತಲೂ ಕೂಡ ಅಧಿಕವಾಗಿದೆ ಅನ್ನೋದನ್ನ ನೀವು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಯಾವುದೇ ಅನುಮಾನವಿಲ್ಲದೆ ಇದು ಅತ್ಯಂತ ಕಡಿಮೆ ಖರ್ಚಿನಲ್ಲಿ ನಿಮಗೆ ಉತ್ತಮ ಮೈಲೇಜ್ ನೀಡುವಂತಹ ಕಾರುಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಬಜೆಟ್ ಕೂಡ ನಿಮ್ಮ ಕೈಗೆಟಕುವ ದರದಲ್ಲಿ ಇರುವುದರಿಂದಾಗಿ ಅದು ಕೂಡ ಮತ್ತೊಂದು ಬೋನಸ್ ಎಂದು ಹೇಳಬಹುದಾಗಿದೆ.

Car for low Price