Car Loan: ಟೂರಿಸ್ಟ್ ಬಾಡಿಗೆಗಾಗಿ ಕಾರನ್ನು ಖರೀದಿಸಿ ಹಣ ಗಳಿಸುವ ಯೋಚನೆಯಲ್ಲಿ ಇದ್ದೀರಾ? ನಿಮಗಾಗಿ ಕಾದಿದೆ ನೋಡಿ ಈ ಸಾಲ ಸೌಲಭ್ಯ.

Car Loan: ಪ್ರತಿಯೊಬ್ಬರು ಕೂಡ ತಮ್ಮದೇ ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡುವಂತಹ ಕನಸನ್ನು ಹೊಂದಿರುತ್ತಾರೆ ಹಾಗೂ ಅದರಲ್ಲೂ ವಿಶೇಷವಾಗಿ ನಾವು ಮಾತನಾಡಲು ಹೊರಟಿರೋದು ಟೂರಿಸ್ಟ್ ವಾಹನಗಳನ್ನು ಖರೀದಿಸಿ ಅವುಗಳನ್ನ ಬಾಡಿಗೆಗೆ ಓಡಿಸುವಂತಹ ವಿಧಾನ ಕೂಡ ಒಂದಾಗಿದೆ. ಹೀಗಾಗಿ ಇಂತಹ ವಾಹನಗಳನ್ನು ಖರೀದಿಸುವುದಕ್ಕೆ ಸಾಲ ಸೌಲಭ್ಯ ಸಿಗುತ್ತಾ ಇದ್ದು ಅವುಗಳನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಎನ್ನುವಂತಹ ವಿಚಾರದ ಬಗ್ಗೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ಹೀಗಾಗಿ ಲೇಖನವನ್ನು ತಪ್ಪದೆ ಕೊನೆವರೆಗೂ ಓದಿ.

ಸ್ವಾವಲಂಬಿ ಸಾರಥಿ ಯೋಜನೆ!

ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಟೂರಿಸ್ಟ್ ವಾಹನ ಅಥವಾ ಗೂಡ್ಸ್ ಗಾಡಿಗಳನ್ನು ಖರೀದಿ ಮಾಡುವುದಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಬ್ಸಿಡಿಯನ್ನು ಪಡೆದುಕೊಳ್ಳಬಹುದಾಗಿದೆ.

ಈ ನಿಗಮಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ!

  • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
  • ಮರಾಠ ಅಭಿವೃದ್ಧಿ ನಿಗಮ
  • ಉಪ್ಪಾರ ಅಭಿವೃದ್ಧಿ ನಿಗಮ
  • ವಿಶ್ವಕರ್ಮ ಅಭಿವೃದ್ಧಿ ನಿಗಮ
  • ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
  • ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
  • ಸವಿತ ಸಮಾಜ ಅಭಿವೃದ್ಧಿ ನಿಗಮ
  • ಒಕ್ಕಲಿಗ ಅಭಿವೃದ್ಧಿ ನಿಗಮ
  • ಅಲೆಮಾರಿ ಅಭಿವೃದ್ಧಿ ನಿಗಮ

ಅರ್ಜಿ ಸಲ್ಲಿಸುವುದು ಎಲ್ಲಿ?

ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ತಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬೇಕಾಗುವ ಡಾಕ್ಯುಮೆಂಟ್ಸ್ ಗಳು!

  • ಅರ್ಜಿ ಸಲ್ಲಿಸುವಂತಹ ವ್ಯಕ್ತಿಗಳ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ರೇಷನ್ ಕಾರ್ಡ್ ಜೆರಾಕ್ಸ್
  • ಮೊಬೈಲ್ ನಂಬರ್
  • ಡ್ರೈವಿಂಗ್ ಲೈಸೆನ್ಸ್
  • ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್

ಯಾವೆಲ್ಲ ವರ್ಗದ ಜನರು ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು?

ಹಿಂದುಳಿದ ವರ್ಗಗಳ 1, 2ಎ, 3ಎ, 3ಬಿ ಅಭ್ಯರ್ಥಿಗಳು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅರ್ಹರಾಗಿರುತ್ತಾರೆ.

ಸಿಗುವಂತಹ ಸಬ್ಸಿಡಿ ಎಷ್ಟು?

ಟೂರಿಸ್ಟ್ ವಾಹನ ಅಥವಾ ಗೂಡ್ಸ್ ಗಾಡಿಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಇರುವಂತಹ ಲೋನ್ ನ 50 ಪ್ರತಿಶತ ಅಥವಾ 3 ಲಕ್ಷ ರೂಪಾಯಿಗಳ ವರ್ಗ ಸಬ್ಸಿಡಿಯನ್ನು ನೀಡಲಾಗುತ್ತದೆ. ಇನ್ನು ಅರ್ಜಿ ಸಲ್ಲಿಸುವವರು ಲೈಟ್ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು.

car loan