Chanakya: ಹೆಂಡತಿಯಲ್ಲಿ ಈ ಗುಣಗಳು ಇದ್ದರೆ ಗಂಡ ಶ್ರೀಮಂತ ಆಗೋದನ್ನ ಯಾರೂ ತಪ್ಸೋಕೆ ಆಗಲ್ಲ!

Chanakya: ಭಾರತ ಇತಿಹಾಸದ ಅತ್ಯಂತ ಮೇಧಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುವಂತಹ ಆಚಾರ್ಯ ಚಾಣಕ್ಯರ ಚಾಣಕ್ಯ ಶಾಸ್ತ್ರ ಗ್ರಂಥದ ಪ್ರಕಾರ ಒಬ್ಬ ಗಂಡ ಯಶಸ್ವಿ ಆಗಬೇಕು ಅಂತ ಅಂದ್ರೆ ಆತನ ಆ ಯಶಸ್ಸಿನಲ್ಲಿ ಆತನ ಹೆಂಡತಿಯ ಪಾಲು ಕೂಡ ಇರುತ್ತದೆ ಎಂಬುದಾಗಿ ಹೇಳುತ್ತಾರೆ. ಇನ್ನು ವಿಶೇಷವಾಗಿ ಮಹಿಳೆಯರಲ್ಲಿ ಇರುವಂತಹ ಈ ಗುಣಗಳಿಂದಾಗಿ ಅವರ ಗಂಡಂದಿರು ಶ್ರೀಮಂತರಾಗ್ತಾರೆ ಎಂಬುದಾಗಿ ತಮ್ಮ ಗ್ರಂಥದಲ್ಲಿ ಅವರು ಬರೆದಿಟ್ಟಿದ್ದು ಆ ಮಾಹಿತಿಗಳ ಬಗ್ಗೆ ಸಂಪೂರ್ಣ ಬೆಳಕನ್ನು ಚೆಲ್ಲುವಂತಹ ಕೆಲಸವನ್ನು ಮಾಡೋಣ ಬನ್ನಿ.

  • ಒಂದು ವೇಳೆ ಒಬ್ಬ ಗೃಹಿಣಿ ಉತ್ತಮವಾಗಿದ್ದರೆ ಅವಳು ತನ್ನ ಗಂಡನ ಬಳಿ ಮನೆಯ ಯಾವುದೇ ಖರ್ಚುಗಳಿಗಾಗಿ ಕೂಡ ಹೆಚ್ಚಿನ ಹಣವನ್ನು ಖರ್ಚು ಮಾಡಿಸುವುದಕ್ಕೆ ಹೋಗುವುದಿಲ್ಲ ಬದಲಾಗಿ ಅತ್ಯಂತ ಕಡಿಮೆ ಖರ್ಚಿನ ಮೂಲಕ ಸಂಸಾರವನ್ನು ನಡೆಸುವಂತಹ ಗುಣವನ್ನು ಆಕೆ ಹೊಂದಿದ್ದರೆ ಆಕೆ ಒಬ್ಬ ಉತ್ತಮ ಗೃಹಿಣಿ ಹಾಗೂ ಗಂಡನ ಯಶಸ್ಸಿಗೆ ಕಾರಣವಾಗುತ್ತಾಳೆ ಎಂಬುದಾಗಿ ಕೂಡ ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
  • ಹೆಂಡತಿ ಕೇವಲ ಮನೆಗೆ ಬಂದ ನಂತರ ಗಂಡನಿಗೆ ಸಾಂತ್ವಾನ ನೀಡುವವಳಾಗಿರಬಾರದು, ಆಕೆ ಗಂಡನ ಪ್ರತಿಯೊಂದು ಕೆಲಸದಲ್ಲಿ ಕೂಡ ಆತರ ಬೆನ್ನ ಹಿಂದೆ ನಿಂತು ಆತನಿಗೆ ಪ್ರೋತ್ಸಾಹ ನೀಡುವಂತಹ ಕೆಲಸವನ್ನು ಮಾಡಬೇಕು. ಆತನ ಪ್ರತಿಯೊಂದು ಕಷ್ಟಗಳಲ್ಲಿ ಕೂಡ ಹೆಗಲು ನೀಡುವಂತಹ ಕೆಲಸವನ್ನು ಪತ್ನಿ ಮಾಡಬೇಕು ಹಾಗಿದ್ರೆ ಮಾತ್ರ ಆತ ಆ ಕಷ್ಟಗಳಿಂದ ಹೊರಬಂದು ಗೆಲುವಿನ ಕಡೆಗೆ ಹೋಗುವಂತಹ ಮನಸ್ಸು ಮಾಡುತ್ತಾನೆ.
  • ವಿದ್ಯಾವಂತ ಮಹಿಳೆಯನ್ನು ಹೆಂಡತಿಯನ್ನಾಗಿ ಪಡೆಯುವುದರಿಂದಾಗಿ ಗಂಡ ಪ್ರತಿಯೊಂದು ವಿಚಾರಗಳಲ್ಲಿ ಕೂಡ ಆಕೆಯ ಅಭಿಪ್ರಾಯಗಳ ಜೊತೆಗೆ ಮುನ್ನಡೆಯುತ್ತಾನೆ ಹಾಗೂ ಒಬ್ಬ ವಿದ್ಯಾವಂತ ಮಹಿಳೆ ಗಂಡನನ್ನು ಖಂಡಿತವಾಗಿ ಉತ್ತಮ ಮಾರ್ಗದಲ್ಲಿ ನಡೆಸುತ್ತಾಳೆ. ಕೇವಲ ಗಂಡನನ್ನು ಮಾತ್ರವಲ್ಲದೆ ಮಕ್ಕಳನ್ನು ಕೂಡ ಒಳ್ಳೆಯ ದಾರಿಯಲ್ಲಿ ನಡೆಸುವುದರಲ್ಲಿ ಯಾವುದೇ ಅನುಮಾನವಿಲ್ಲ. ತನ್ನ ಕುಟುಂಬಕ್ಕೆ ಬೇಕಾಗಿರುವಂತಹ ಪ್ರತಿಯೊಂದು ಸರಿಯಾದ ನಿರ್ಧಾರಗಳನ್ನು ಆಕೆ ಆಯ್ಕೆ ಮಾಡುತ್ತಾಳೆ.
  • ಗಂಡನ ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಏರಿಳಿತಗಳು ನಡೆಯುತ್ತಿದ್ದರೂ ಕೂಡ ಅದನ್ನು ತಾಳ್ಮೆಯಿಂದ ನಿಂತು ನೋಡಿ ಆತನ ವಿರುದ್ಧ ಯಾವುದೇ ರೀತಿಯಲ್ಲಿ ಕೋಪವನ್ನು ಹೊರಹಾಕದೆ ಶಾಂತಿಯುತವಾಗಿ ಆತನಿಗೆ ಬೆಂಬಲವನ್ನು ನೀಡಿ ಅದರಿಂದ ಹೊರಬರುವ ಹಾಗೆ ಮಾಡಬೇಕು. ಅದು ಒಬ್ಬ ಮಾದರಿ ಹೆಂಡತಿಯ ಗುಣಲಕ್ಷಣ ಎಂದು ಹೇಳಬಹುದಾಗಿದೆ. ಗಂಡ ಒಂದೊಳ್ಳೆ ಯಶಸ್ವಿ ಜೀವನವನ್ನು ಪ್ರಾರಂಭಿಸುವುದಕ್ಕೆ ಹೆಂಡತಿಯ ಮೊದಲ ಗುರುವಾಗಿ ಆತನಿಗೆ ದಾರಿ ತೋರಿಸಬೇಕು.
  • ಮನೆಯಲ್ಲಿ ವಾತಾವರಣ ಪಾಸಿಟಿವ್ ಹಾಗೂ ಶಾಂತ ರೀತಿಯಲ್ಲಿ ಇದ್ದಾಗ ಮಾತ್ರ ಗಂಡನಿಗೆ ಜೀವನದಲ್ಲಿ ಏನನ್ನಾದರೂ ಮಾಡಬೇಕು ಎನ್ನುವಂತಹ ಉತ್ಸಾಹ ಮೂಡಿಬರುವುದಕ್ಕೆ ಕಾರಣವಾಗೋದು. ಇದೇ ರೀತಿ ಮನೆಯ ವಾತಾವರಣವನ್ನು ಪಾಸಿಟಿವ್ ಆಗಿರಿಸುವಂತಹ ಜವಾಬ್ದಾರಿ ಹೆಂಡತಿಯದಾಗಿರುತ್ತದೆ ಹಾಗೂ ಅದನ್ನು ಆಕೆ ಸರಿಯಾದ ರೀತಿಯಲ್ಲಿ ಪೂರೈಸಬೇಕು.
chanakya neeti