Cocktail Film: ಜೋಕೆರ್ ನ ಒಳಗೊಬ್ಬ ವಿಲನ್!? ಬಿಡುಗಡೆಯಾಯಿತು ’ಕಾಕ್ಟೇಲ್’ ಥ್ರಿಲಿಂಗ್  ಟೀಸರ್; ರಿಲೀಸ್ ಮಾಡಿದ ಡಾಲಿ ಹೇಳಿದ್ದೇನು ಗೊತ್ತಾ?

Cocktail Film: ಕನ್ನಡ ಸಿನಿಮಾ ಇಂಡಸ್ಟ್ರಿ (Sandalwood) ಹೊಸಬರ ಸಿನಿಮಾಗಳಿಗೆ ಯಾವತ್ತಿಗೂ ಅವಕಾಶ ಮಾಡಿಕೊಟ್ಟಿದೆ. ಹೀಗೆ ಹೊಸದಾಗಿ ಸಿನಿಮಾ ಸ್ಟಾರ್ಟ್ ಮಾಡಿರುವರಲ್ಲಿ ಕೆಲವರು ಗೆಲುವಿನ ಹಾದಿಯಲ್ಲಿ ಸಾಗಿದರೆ, ಇನ್ನೂ ಕೆಲವರು ಸೋಲನ್ನ ಅನುಭವಿಸಿರಲುಬಹುದು ಆದರೆ ಇತ್ತೀಚಿಗೆ ಭರವಸೆಯ ನಟ ಎನಿಸಿರುವ ವೀರೇನ್ ಕೇಶವ (Viren Keshav) ಅವರ ಮೊದಲ ಸಿನಿಮಾದ ಬಗ್ಗೆ ಸಿನಿ ಪ್ರಿಯರು ಅತ್ಯುತ್ತಮ ಮಾತುಗಳನ್ನು ಆಡುತ್ತಿದ್ದಾರೆ.

ಹೌದು ಕನ್ನಡದ ಉದಯೋನ್ಮುಖ ನಟ ವೀರೇನ್ ಕೇಶವ್ ಹಾಗೂ ಚರಿಷ್ಮ (Charishma) ಜೋಡಿಯಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ ಇದು ಅದುವೇ ಕಾಕ್ಟೇಲ್ (Cocktail). ಕನ್ನಡದಲ್ಲೊಂದು ಕಾಕ್ಟೇಲ್ ಮೂಲಕ ಹೊಸ ಪ್ರಯೋಗ ಮಾಡಲು ಹೊರಟಿದೆ ಹೊಸಬರ ಟೀಮ್ (New Team). ಕಪಿಲ್ ಸಿನಿಮಾದ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಆರಂಭಿಸಿರುವ ವೀರೇನ್ ಕೇಶವನ್ ಅವರಿಗೆ ಕರ್ನಾಟಕ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಚೊಚ್ಚಲ ನಟ ಪ್ರಶಸ್ತಿಯೂ ಕೂಡ ಈಗಾಗಲೇ ಲಭಿಸಿದೆ. ಕನ್ನಡದಲ್ಲಿ ಹೊಸ ಭಾಷೆ ಬರೆಯಲು ಮುಂದಾಗಿರುವ ನಿರ್ದೇಶಕ ಶ್ರೀರಾಮ್ (Shreeram) ಅವರು ಹೊಸಬರನ ಇಟ್ಟುಕೊಂಡು ಅದ್ಭುತವಾದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ ಇದೊಂದು ಮರ್ಡರ್ ಮಿಸ್ಟರಿ ಕಥೆಯನ್ನು ಹೊಂದಿದೆ.

ಕಾಕ್ಟೇಲ್ ಸಿನಿಮಾದ ಕಥೆಯಲ್ಲಿ ಏನಿದೆ? (Story of the film)

ಕಾಕ್ಟೇಲ್ ಸಿನಿಮಾ ಮರ್ಡರ್ ಮಿಸ್ಟರಿ (Murder Mystery) ಕಥೆ ಹೊಂದಿರುವ ಸಿನಿಮಾ ಒಂದೇ ಹೆಸರಿನ ಒಂದೇ ವಯಸ್ಸಿನ ಹಲವು ಹುಡುಗಿಯರ ಸರಣಿ ಕೊಲೆಯ ಸುತ್ತ ಈ ಚಿತ್ರಕಥೆಯನ್ನು ಹೆಣೆಯಲಾಗಿದೆ. ಆರಂಭದಿಂದ ಕೊನೆಯವರೆಗೂ ಸಿನಿಪ್ರಿಯರನ್ನು ಹಿಡಿದಿಟ್ಟುಕೊಳ್ಳುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೆಣೆದಿದ್ದಾರೆ ನಿರ್ದೇಶಕ ಶ್ರೀ ರಾಮ್. ಇದಕ್ಕೆ ಚಿತ್ರಕಥೆ ಸಂಭಾಷಣೆಯ ಜವಾಬ್ದಾರಿ ಕೂಡ ಅವರದ್ದೆ.

ಕಾಕ್ಟೇಲ್ ಸಿನಿಮಾದ ಎರಡು ಹಂತದ ಶೂಟಿಂಗ್ ಮುಗಿದು ಡಬ್ಬಿಂಗ್ ಕೆಲಸಗಳು ಸಾಗುತ್ತಿವೆ. ಇನ್ನು ಇದೀಗ ಸ್ಯಾಂಡಲ್ ವುಡ್ ನ ನಟ ರಾಕ್ಷಸ ಡಾಲಿ ಧನಂಜಯ್ ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದಾರೆ. ಹೊಸ ಟೀಮ್ ನ ಹೊಸ ಪ್ರಯತ್ನಕ್ಕೆ ಶಹಬ್ಬಾಷ್ ಹೇಳಿದ್ದಾರೆ.

ವಿರೇನ್ ಕೇಶವ್

ಕಾಕ್ಟೇಲ್ ತಂಡ (Cocktail Team) ;

ಎ2 ಮ್ಯೂಸಿಕ್ (A2 Music) ಪಾರಿಪಥ್ಯದಲ್ಲಿ ಈ ಸಿನಿಮಾದ ಹಾಡು ಈಗಾಗಲೇ ರಿಲೀಸ್ (Release)  ಆಗಿತ್ತು. ಬಾಲಿವುಡ್ ಖ್ಯಾತ ಹಾಡುಗಾರ ಅರ್ಮಾನ್ ಮಲ್ಲಿಕ್ ಅವರಕಂಠ ಸಿರಿಯಲ್ಲಿ, ರಿಲೀಸ್ ಆದ ಹಾಡಿನ ಸಾಹಿತ್ಯವನ್ನು ಹೃದಯಶಿವ ಹಾಗೂ ಸಿರಾಜ್ ಮಿಜಾರ್ ಬರೆದಿದ್ದಾರೆ. ಲೋಕಿತವಸ್ಯ ಸಂಗೀತ, ಮೋಹನ್ ಬಿ ರಂಗ ಕಹಳೆ ಅವರ ಸಂಕಲನ ಈ ಸಿನಿಮಾದಲ್ಲಿ ಇದೆ. ಇನ್ನು ವಿಜಯಲಕ್ಷ್ಮಿ ಕಂಬೈನ್ಡ್ಸ್ ಬ್ಯಾನರ್ ನಲ್ಲಿ ಡಾಕ್ಟರ್ ಶಿವಣ್ಣ ಅವರು ಕಾಕ್ಟೇಲ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಮಿಸ್ಟರಿ ಕಥೆಯನ್ನು ಬೆಂಗಳೂರಿನ ಸುತ್ತಮುತ್ತಲು ಚಿತ್ರೀಕರಣ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಮೊದಲ ಸಿನಿಮಾದಲ್ಲಿಯೇ ಉತ್ತಮ ಅಭಿನಯ ಪ್ರದರ್ಶಿಸಿರುವ ವೀರೇನ್ ಕೇಶವ್, ನಟಿ ಚರಿಷ್ಮಾ ಜೊತೆಗೆ ಶೋಭರಾಜ್, ಮಹಂತೇಶ್, ಚಂದ್ರಕಲಾ ಮೋಹನ್, ಕರಿ ಸುಬ್ಬು, ರಮೇಶ್ ಪಂಡಿತ್, ಶಿವಮಣಿ ಮೊದಲಾದ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಇದನ್ನೂ ಓದಿ: Kannada Film: <strong>ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿರಸಿಕರಿಗೆ ‘ಕಾಕ್ಟೇಲ್’(Cocktail) ನೀಡಿದ ವೀರೇನ್ ಕೇಶವ್</strong>

ಸಂಕ್ರಾಂತಿಗೆ ಕಾಕ್ಟೇಲ್ ಸಂಭ್ರಮ? (Cocktail release Date)

ಕಾಕ್ಟೇಲ್ ಸಿನಿಮಾ ಇನ್ನೇನು ಬಹುತೇಕ ರೆಡಿ ಆಗಿದೆ ಜನ ಈಗಾಗಲೇ ಒಂದು ನಿಮಿಷ ನೋಡಿ ಮೆಚ್ಚಿಕೊಂಡಿದ್ದಾರೆ. ಫೆಬ್ರುವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಥಿಯೇಟರ್ ನ ಲಭ್ಯತೆ ನೋಡಿಕೊಂಡು ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ. ನಿಜ ಹೇಳಬೇಕು ಅಂದ್ರೆ ಕಾಕ್ಟೇಲ್ ಸಿನಿಮಾ ರಿಲೀಸ್ ಬಗ್ಗೆ ಪುನೀತ್ ರಾಜಕುಮಾರ್ ಅವರ ಜೊತೆ ಚಿತ್ರತಂಡ ಮಾತನಾಡಿತ್ತು. ಓ ಟಿ ಟಿ ಯಲ್ಲಿ ಪ್ರಸಾರ ಮಾಡುವ ಬಗ್ಗೆಯೂ ಚರ್ಚೆ ನಡೆದಿತ್ತು. ಆದರೆ ಈ ಎಲ್ಲಾ ಕನಸು ನನಸಾಗುವುದಕ್ಕೂ ಮುನ್ನವೇ ಅಪ್ಪು ನಮ್ಮನ್ನ ಅಗಲಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ನಿರ್ದೇಶಕ ಶ್ರೀರಾಮ್ ಸಂದರ್ಶನದ ಒಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ: Karnataka international film festival 2022: ಮೊದಲ ಚಿತ್ರಕ್ಕೇ ’ಅತ್ಯುತ್ತಮ ನಾಯಕ ನಟ’ ಪ್ರಶಸ್ತಿ ಮುಡಿಗೇರಿಸಿಕೊಂಡ ವಿರೇನ್ ಕೇಶವ್!

ಸದ್ಯ, ಕಾಕ್ಟೇಲ್ ಸಿನಿಮಾದ ಫಸ್ಟ್ ಪೋಸ್ಟರ್ ಹಾಗೂ ಟೀಸರ್ ಅನ್ನು ಜನ ಮೆಚ್ಚಿಕೊಂಡಿದ್ದಾರೆ. ರಿಲೀಸ್ ಆಗಿ ಕೆಲವೇ ಕ್ಷಣಗಳಲ್ಲಿ ಸಾವಿರಾರು ವೀಕ್ಷಣೆ ಪಡೆದುಕೊಂಡಿದೆ ಸಿನಿಮಾದ ಟೀಸರ್. ಟೀಸರ್ ಅನು ನೋಡಿ ಕಾಕ್ಟೇಲ್ ಸಿನಿಮಾದ ಬಗ್ಗೆ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿವೆ.

CockTail FilmKannada Filmviren keshavnಕನ್ನಡ ಸಿನಿಮಾ