Cricket: ಕನ್ನಡಿಗ ಕೆ ಎಲ್ ರಾಹುಲ್ ರವರ ಬೆಂಬಲಕ್ಕೆ ನಿಂತು ಗೌತಮ್ ಗಂಭೀರ್; ಗೋಯೆಂಕಾ ವಿರುದ್ಧ ಹೇಳಿದ್ದೇನು ಗೊತ್ತಾ ?

Cricket: ಐಪಿಎಲ್ ನಲ್ಲಿ ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಘಟನೆ. ಈಗ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಅಸಮಾಧಾನವನ್ನು ಉಂಟುಮಾಡುವ ಹಾಗೆ ಮಾಡಿದೆ. ಹೌದು ಮಾತಾಡ್ತಿರೋದು ಹೈದ್ರಾಬಾದ್ ತಂಡದ ವಿರುದ್ಧ ಲಕ್ನೋ ತಂಡ ಸೋತ ಸಂದರ್ಭದಲ್ಲಿ ಆಗಿರುವಂತಹ ಘಟನೆಯ ಬಗ್ಗೆ. ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡದ ಗುರಿಯನ್ನು 10 ಓವರ್‌ಗಳ ಒಳಗೆ ಹೈದರಾಬಾದ್ ತಂಡ ಪೂರೈಸುವ ಮೂಲಕ ಹೀನಾಯ ಸೋಲನ್ನ ಅನುಭವಿಸುವಂತೆ ಮಾಡಿತ್ತು. ಇದರಿಂದಾಗಿ ಲಕ್ನೋ ತಂಡದ ಮಾಲೀಕ ಆಗಿರುವಂತಹ ಸಂಜೀವ್ ಗೋಯಂಕ ತಂಡದ ನಾಯಕ ಆಗಿರುವಂತಹ ಕೆ ಎಲ್ ರಾಹುಲ್ ರವರನ್ನು ತರಾಟೆಗೆ ತೆಗೆದುಕೊಳ್ಳುವಂತೆ ಮಾಡಿತು. ಆದರೆ ಸಂಜೀವ್ ಗೋಯಂಕ ಇಲ್ಲಿ ಮಾಡಿರುವಂತಹ ದೊಡ್ಡ ತಪ್ಪು ಅಂದ್ರೆ ಕ್ಯಾಮೆರಾ ಮುಂದೇನೆ ಎಲ್ಲರೂ ಎದುರುಗಡೆ ಕೆ ಎಲ್ ರಾಹುಲ್ ರವರಿಗೆ ಬೈದಿದ್ದು ಪ್ರತಿಯೊಬ್ಬರ ಅಸಮಾಧಾನಕ್ಕೆ ಕಾರಣವಾಗಿತ್ತು.

ರಾಹುಲ್ ಅವರನ್ನು ಸಮರ್ಥಿಸಿ ಗಂಭೀರ್ ಹೇಳಿದ್ದೇನು ಗೊತ್ತಾ?

ಕೆ ಎಲ್ ರಾಹುಲ್ ಅವರಿಗೆ ಲಕ್ನೋ ತಂಡದ ಮಾಲೀಕ ಈ ರೀತಿ ಮಾಡಿರುವಂತಹ ವಿಡಿಯೋ ವೈರಲ್ ಆದಮೇಲೆ ಸಾಕಷ್ಟು ಮಾಜಿ ಕ್ರಿಕೆಟಿಗರು ಕೂಡ ಕೆ ಎಲ್ ರಾಹುಲ್ ರವರ ಪರವಾಗಿ ಈ ಸಂದರ್ಭದಲ್ಲಿ ನಿಂತು ಕೊಂಡಿದ್ದಾರೆ.

ಸದ್ಯಕ್ಕೆ ಗೌತಮ್ ಗಂಭೀರ್ ಅವರು ಕೊಲ್ಕತ್ತಾ ನೈಟ್ ರೈಡರ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಲ್ಕತ್ತಾ ಎರಡು ಬಾರಿ ಚಾಂಪಿಯನ್ ತಂಡ ಆಗಿರಬಹುದು ಹಾಗೂ ಈ ಬಾರಿಯ ಸೀಸನ್ ನಲ್ಲಿ ಕೂಡ ಸಾಕಷ್ಟು ಉತ್ತಮ ಪ್ರದರ್ಶನದ ಮೂಲಕ ಕಪ್ ಗೆಲ್ಲುವಂತಹ ಸಾಧ್ಯತೆ ಇದೆ ಆದರೆ ಈ ವರ್ಷಗಳ ನಡುವೆ ಸಾಕಷ್ಟು ವರ್ಷಗಳ ಕಾಲ ಕಲ್ಕತ್ತಾ ಕಳಪೆ ಪ್ರದರ್ಶನವನ್ನು ತೋರಿಸಿತ್ತು. ಆದರೆ ತಂಡದ ಮಾಲೀಕನಾಗಿ ಶಾರುಖ್ ಖಾನ್ ಯಾವತ್ತು ಕೂಡ ಯಾರೊಂದಿಗೂ ಜಗಳ ಅಥವಾ ಮನಸ್ತಾಪವನ್ನು ಮಾಡಿಕೊಳ್ಳುವಂತಹ ಕೆಲಸಕ್ಕೆ ಹೋಗಲಿಲ್ಲ. ಈ ರೀತಿ ಆಟಗಾರರ ಜೊತೆಗೆ ಜಗಳ ಆಡೋದಕ್ಕೆ ಹೋಗಲಿಲ್ಲ ನಿಜಕ್ಕೂ ಕೂಡ ಅವರು ಬೇರೆ ತಂಡಗಳ ಮಾಲೀಕರ ರೀತಿಯಲ್ಲ ಆಟಗಾರರ ಬಗ್ಗೆ ಹಾಗೂ ಆಟದ ಬಗ್ಗೆ ಸಂಪೂರ್ಣ ಧ್ಯಾನವನ್ನು ಹೊಂದಿರುತ್ತಾರೆ ಹಾಗೂ ಆಟಗಾರರು ಯಾವ ರೀತಿಯಲ್ಲಿ ಫೈಟ್ ಮಾಡ್ತಾರೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದಾರೆ ಅದಕ್ಕಾಗಿ ಅವರು ಎಲ್ಲರಿಗೆ ಇಷ್ಟ ಆಗೋದು ಎಂಬುದಾಗಿ ಶಾರುಖ್ ಖಾನ್ ರವರ ಗುಣಗಾನವನ್ನು ಮಾಡಿದ್ದಾರೆ.

ಇಲ್ಲಿ ಕೇವಲ ಶಾರುಖ್ ಖಾನ್ ರವರ ಗುಣಗಾನ ಮಾತ್ರ ಅಲ್ಲ ಪರೋಕ್ಷವಾಗಿಯೇ ಒಬ್ಬ ಆಟಗಾರ ಅಥವಾ ಕ್ಯಾಪ್ಟನ್ ಜೊತೆಗೆ ತಂಡದಲ್ಲಿ ಒಬ್ಬ ಮಾಲೀಕ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಪಾಠ ರೂಪದಲ್ಲಿ ಹೇಳಿದ್ದಾರೆ ಎಂದು ಹೇಳಬಹುದು. ಈ ಸಂದರ್ಭದಲ್ಲಿ ಕೇವಲ ಒಂದು ನಿಮಿಷ ಆಟವನ್ನು ನೋಡಿ ಕ್ರೀಡೆ ಬಗ್ಗೆ ಅರ್ಥ ಮಾಡಿಕೊಳ್ಳುವಂತಹ ಮಾಲೀಕರಲ್ಲ ಅನ್ನೋದಾಗಿ ಹೇಳುವ ಮೂಲಕ ಗೌತಮ್ ಗಂಭೀರ್ ಗೋಯಂಕ ರವರ ಹೆಸರು ಹೇಳಿದ್ದೇನೆ ಅವರಿಗೆ ಬುದ್ಧಿ ಹೇಳುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಬಹುದಾಗಿದೆ.

Cricket