Cricket: ಈ ಕ್ರಿಕೆಟಿಗರು ಜೀವನದಲ್ಲಿ ಒಮ್ಮೆ ಕೂಡ ಆಲ್ಕೋಹಾಲ್ ಎಡಗೈಯಲ್ಲಿ ಕೂಡ ಮುಟ್ಟಿಲ್ಲ!

Cricket: ಈ ಸಮಯದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಹುತೇಕ ಪ್ರತಿಯೊಬ್ಬರೂ ಕೂಡ ಆಲ್ಕೋಹಾಲ್ ಸೇವನೆಯನ್ನು ಮಾಡುತ್ತಾರೆ. ಅದರಲ್ಲೂ ವಿಶೇಷವಾಗಿ ಕ್ರಿಕೆಟಿಗರು ಪಂದ್ಯಗಳನ್ನು ಗೆದ್ದಾಗ ಪಾರ್ಟಿಯ ಸಂದರ್ಭದಲ್ಲಿ ಆಲ್ಕೋಹಾಲ್ ಸೇವನೆ ಮಾಡುವುದು ಸರ್ವೇಸಾಮಾನ್ಯ ಆಗಿರುತ್ತದೆ. ಸಾಕಷ್ಟು ಕ್ರಿಕೆಟಿಗರು ಮದ್ಯಪಾನವನ್ನು ಮಾಡುತ್ತಾರೆ ಆದರೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಇವತ್ತಿನವರೆಗೂ ಕೂಡ ಮಧ್ಯಪಾನವನ್ನು ಮುಟ್ಟದೇ ಇರುವಂತಹ ಕ್ರಿಕೆಟಿಗರ ಬಗ್ಗೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಇದುವರೆಗೂ ಕೂಡ ಮಧ್ಯಪಾನವನ್ನು ಸೇವಿಸದೆ ಇರುವಂತಹ 3 ಕ್ರಿಕೆಟಿಗರ ಬಗ್ಗೆ. ಹಾಗಿದ್ರೆ ಆ ಕ್ರಿಕೆಟಿಗರು ಯಾರು ಅನ್ನೋದನ್ನ ತಿಳಿಯೋಣ ಬನ್ನಿ.

  • ಮೊದಲಿಗೆ ಈ ಸಾಲಿನಲ್ಲಿ ಕಾಣಿಸಿಕೊಳ್ಳೋದು ಭುವನೇಶ್ವರ್ ಕುಮಾರ್. ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಇದುವರೆಗೂ 119 ಏಕದಿನ, 21 ಟೆಸ್ಟ್ ಹಾಗೂ 55 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಇವರು ತಮ್ಮ ಜೀವನದಲ್ಲಿ ಯಾವತ್ತೂ ಕೂಡ ಮಧ್ಯಪಾನವನ್ನು ಸೇವಿಸಿಲ್ಲ ಮಾತ್ರವಲ್ಲದೆ ಧೂಮಪಾನವನ್ನು ಕೂಡ ಮಾಡಿಲ್ಲ ಎಂಬುದಾಗಿ ಕೂಡ ತಿಳಿದು ಬಂದಿದೆ.
  • ನಮ್ಮ ಕರ್ನಾಟಕದ ಹೆಮ್ಮೆ ಆಟಗಾರ ಆಗಿರುವಂತಹ ಮಾಜಿ ಕ್ರಿಕೆಟಿಗೆ ಹಾಗೂ ಭಾರತಕ್ಕೆ ವಿಶ್ವ ಕಪ್ ಗೆದ್ದು ಕೊಟ್ಟಿರುವಂತಹ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಕೂಡ ಈ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಟೀಮ್ ಇಂಡಿಯಾದ ಪರವಾಗಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹಾಗೂ ನಾಯಕ ಕೂಡ ಆಗಿದ್ದಂತಹ ರಾಹುಲ್ ದ್ರಾವಿಡ್ ರವರು ಭಾರತದ ಕ್ರಿಕೆಟ್ ತಂಡದ ಪರವಾಗಿ 164 ಟೆಸ್ಟ್, 344 ಏಕದಿನ ಪಂದ್ಯಗಳನ್ನು ಆಡಿದ್ದು ಅದರಲ್ಲೂ ವಿಶೇಷವಾಗಿ ಟೆಸ್ಟ್ ಪಂದ್ಯದಲ್ಲಿ ಭಾರತದ ಗೋಡೆ ಎನ್ನುವ ರೀತಿಯಲ್ಲಿ ಬ್ಯಾಟಿಂಗ್ ಪ್ರದರ್ಶನವನ್ನು ತೋರ್ಪಡಿಸಿದ್ದಾರೆ. ಇವರು ಕೂಡ ತಮ್ಮ ಜೀವಮಾನದಲ್ಲಿ ಯಾವತ್ತೂ ಕೂಡ ಮಧ್ಯಪಾನ ಅಥವಾ ಧೂಮಪಾನ ಮಾಡಿಲ್ಲ ಎಂಬುದಾಗಿ ತಿಳಿದು ಬಂದಿದೆ.
  • ಗೌತಮ್ ಗಂಭೀರ್ ರವರು ಕೂಡ ಈ ಸಾಲಿನಲ್ಲಿ ಕಾಣಿಸಿಕೊಳ್ಳುವಂತಹ ಮತ್ತೊಬ್ಬ ಶಿಸ್ತಿನ ಸಿಪಾಯಿ. ಧೂಮಪಾನವನ್ನು ಎಡಗೈನಲ್ಲಿ ಕೂಡ ಗೌತಮ ಗಂಭೀರ್ ಇದುವರೆಗೂ ಮುಟ್ಟಿಲ್ಲ ಎಂಬುದಾಗಿ ತಿಳಿದು ಬಂದಿದ್ದು ಒಮ್ಮೆ ತಮಾಷೆಗೆ ಮದ್ಯಪಾನವನ್ನು ಮಾಡಿದ್ರಂತೆ ಆದರೆ ಅದಾದ ಮೇಲೆ ಒಮ್ಮೆಯೂ ಕೂಡ ಅವರು ಮಧ್ಯಪಾನವನ್ನು ಮುಟ್ಟಿಲ್ಲ ಎಂಬುದಾಗಿ ತಿಳಿದು ಬಂದಿದೆ.

ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾವತ್ತೂ ಕೂಡ ಮದ್ಯಪಾನವನ್ನು ಮುಟ್ಟದೆ ಇರುವಂತಹ ಆಟಗಾರರಲ್ಲಿ ಇವರುಗಳು ಕಂಡುಬರುತ್ತಾರೆ.

Cricket