Cricket News: ಟಿ ಟ್ವೆಂಟಿ ವಿಶ್ವ ಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಘೋಷಿಸಿರುವ 125 ಕೋಟಿ ಬಹುಮಾನದಲ್ಲಿ ಯಾರಿಗೆ ಎಷ್ಟು?

Cricket News: ಟೀಮ್ ಇಂಡಿಯಾ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2007ರ ನಂತರ 17 ವರ್ಷಗಳು ಆದ್ಮೇಲೆ ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ಅಂಗಳದಲ್ಲಿ ಎತ್ತಿ ಹಿಡಿದಿದೆ. ಇನ್ನು ಗೆದ್ದಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ಬಿಸಿಸಿಐ ಒಟ್ಟಾರೆ 125 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿದೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಗೆದ್ದ ತಂಡಕ್ಕೆ ಸಿಕ್ಕಿರೋದೇ 20 ರಿಂದ 25 ಕೋಟಿಗಳ ನಡುವಿನ ಬಹುಮಾನ ಅದರಲ್ಲೂ ವಿಶೇಷವಾಗಿ ಕೇವಲ ಕ್ರಿಕೆಟ್ ಸಂಸ್ಥೆಯೇ ಇಷ್ಟೊಂದು ದೊಡ್ಡ ಮಟ್ಟದ ನಗದು ಬಹುಮಾನ ನೀಡುತ್ತಾ ಇರೋದು ನಿಜಕ್ಕೂ ಕೂಡ ವಿಶೇಷವಾಗಿದೆ ಹಾಗೂ ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡ ಇದಕ್ಕೆ ಅರ್ಹ ಆಗಿರುವಂತಹ ತಂಡವಾಗಿದೆ ಎಂದು ಹೇಳಬಹುದಾಗಿದೆ.

ಬಿಸಿಸಿಐನ ಕಾರ್ಯದರ್ಶಿ ಆಗಿರುವಂತಹ ಜೈ ಶಾ ಭಾರತೀಯ ಕ್ರಿಕೆಟ್ ತಂಡಕ್ಕೆ ಒಟ್ಟಾರೆ 125 ಕೋಟಿ ರೂಪಾಯಿಗಳ ನಗುವುದು ಬಹುಮಾನವನ್ನು ಅಧಿಕೃತವಾಗಿ ವಿಶ್ವಕಪ್ ಗೆದ್ದ ನಂತರವಷ್ಟೇ ಕೂಡಲೇ ಘೋಷಣೆ ಮಾಡಿದ್ದಾರೆ. ಕೇವಲ ಆಟಗಾರರಿಗೆ ಮಾತ್ರವಲ್ಲದೆ ಕೋಚ್ ಹಾಗೂ ಸ್ಟಾಫ್ ಹಾಗೂ ಸಿಬ್ಬಂದಿಗಳಿಗೂ ಕೂಡ ಈ ಬಹುಮಾನದಲ್ಲಿ ಹಣವನ್ನು ನೀಡಲಾಗುತ್ತದೆ. 15 ಮಂದಿ ಆಡುವ ಬಳಗದಲ್ಲಿ ಇರುವಂತಹ ಆಟಗಾರರು ಹಾಗೂ ನಾಲ್ಕು ಮಂದಿ ಮೀಸಲು ಆಟಗಾರರಾಗಿದ್ದಾರೆ. ಸಹಾಯಕ ಸಿಬ್ಬಂದಿ ಎಂಟು ಜನ ಸೇರಿದಂತೆ ಐದು ಜನ ಆಯ್ಕೆಗಾರರು ಕೂಡ ಇದರಲ್ಲಿ ಸೇರಿಕೊಳ್ಳುತ್ತಾರೆ.

ಮಾಹಿತಿ ಪ್ರಕಾರ ಇರುವಂತಹ 32 ಜನರಿಗೆ 125 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದರೆ ಪ್ರತಿಯೊಬ್ಬರಿಗೂ 3.90 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣ ದೊರಕುತ್ತದೆ. ಇನ್ನು ಆ ಮೀಸಲು ಆಟಗಾರರನ್ನು ಹೊರಗೆ ಇಟ್ಟರೆ ಎಲ್ಲರಿಗೂ ನಾಲ್ಕು ಕೋಟಿ ರೂಪಾಯಿಗಿಂತ ಹೆಚ್ಚು ಸಿಗುತ್ತದೆ. ಇದರ ಜೊತೆಗೆ ವಿಶ್ವಕಪ್ ಗೆದ್ದಿರುವದಕ್ಕಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಐಸಿಸಿ ಕಡೆಯಿಂದ 20.42 ಕೋಟಿ ರೂಪಾಯಿ ಹೆಚ್ಚುವರಿ ಆಗಿ ಸಿಕ್ಕಿದೆ. ನಿಜಕ್ಕೂ ಕೂಡ ಇಷ್ಟೊಂದು ಬಹುಮಾನವನ್ನು ಈ ಚಾಂಪಿಯನ್ ತಂಡ ಡಿಸರ್ವ್ ಮಾಡುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಸದ್ಯಕ್ಕೆ ಈ ಬಾರಿಯ ವಿಶ್ವಕಪ್ ನಂತರ ಭಾರತೀಯ ಕ್ರಿಕೆಟ್ ತಂಡ ಮುಂದಿನ ಐಸಿಸಿ ಇವೆಂಟ್ ಗೆ ಯಾವ ರೀತಿಯಲ್ಲಿ ತಯಾರಾಗುತ್ತದೆ ಹಾಗೂ ಯಾರೆಲ್ಲ ತಂಡದಲ್ಲಿ ಇರಲಿದ್ದಾರೆ ಹಾಗೂ ಯಾರು ತಂಡದಿಂದ ಹೊರಗೆ ಹೋಗಲಿದ್ದಾರೆ ಅನ್ನುವಂತಹ ಕುತೂಹಲ ಕೂಡ ಹೆಚ್ಚಾಗಿದ್ದು ಇದರ ಜೊತೆಗೆ ಮುಂದಿನ ಕೋಚ್ ಯಾರು ಅನ್ನೋ ಮಾಹಿತಿ ಕೂಡ ಅಧಿಕೃತವಾಗಿ ಹೊರಗೆ ಬಂದಿಲ್ಲ. ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Cricket news