Cricket News: ವಿರಾಟ್ ಟೆಸ್ಟ್ ನಲ್ಲಿ ಚೆನ್ನಾಗಿ ಆಡುತ್ತಿಲ್ಲ ಎಂದವರಿಗೆ ರಿಕ್ಕಿ ಪಾಂಟಿಂಗ್ ನೇರವಾಗಿ ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ??

Cricket News: ಕ್ರಿಕೆಟ್ ಲೋಕದ ಕಿಂಗ್ ಎಂದೇ ಹೆಸರುವಾಸಿಯಾಗಿರುವ ವಿರಾಟ್ ಕೊಹ್ಲಿ ಅವರು ವೈಫಲ್ಯದಿಂದ ಹೊರಬಂದು, ಫಾರ್ಮ್ ಕಂಡುಕೊಂಡಿದ್ದರು, ಟಿ20 ಮತ್ತು ಓಡಿಐ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೋಹ್ಲಿ ಅವರು ಈಗ ಟೆಸ್ಟ್ ಪಂದ್ಯದಲ್ಲಿ ಮತ್ತೆ ವೈಫಲ್ಯ ಅನುಭವಿಸುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ, ಈಗಾಗಲೇ ಮೂರು ಪಂದ್ಯಗಳು ಮುಗಿದಿದ್ದು, ವಿರಾಟ್ ಕೋಹ್ಲಿ ಅವರು ಒಂದು ಅರ್ಧಶತಕವನ್ನು ಗಳಿಸಲು ಕೂಡ ಸಾಧ್ಯವಾಗಿಲ್ಲ. ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ 44 ರನ್ ಗಳಿಸಿದರು, ಆದರೆ ಹೆಚ್ಚು ರನ್ಸ್ ಗಳಿಸಲು ಆಗಿಲ್ಲ. ಈ ಕಾರಣಕ್ಕೆ ಕೊಹ್ಲಿ ಅವರ ಬಗ್ಗೆ ಕೆಲವರು ಟೀಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಆದರೆ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ರಿಕ್ಕಿ ಪಾಂಟಿಂಗ್ ಅವರು ವಿರಾಟ್ ಅವರ ಪರವಾಗಿ ಮಾತನಾಡಿದ್ದಾರೆ, “ವಿರಾಟ್ ಕೊಹ್ಲಿ ಅವರು ಒಬ್ಬ ಚಾಂಪಿಯನ್, ಈ ಥರದ ಪಿಚ್ ಗಳಲ್ಲಿ ರನ್ಸ್ ಗಳಿಸುವುದು ಹೇಗೆ ಎಂದು ಅವರು ತಿಳಿದುಕೊಳ್ಳುತ್ತಾರೆ. ವಿರಾಟ್ ಅವರು ಹೆಚ್ಚು ರನ್ಸ್ ಭಾರಿಸಬೇಕು ಎಂದು ನಾವೆಲ್ಲವು ಬಯಸುತ್ತೇವೆ, ಅವರಿಗೆ ಈ ಪರಿಸ್ಥಿತಿ ಅರ್ಥವಾಗಿದೆ. ಒಬ್ಬ ಬ್ಯಾಟ್ಸ್ಮನ್ ರನ್ ಗಳಿಸಲು ಕಷ್ಟಪಡುತ್ತಿದ್ದಾರೆ ಎಂದರೆ, ಅವರ ಬಗ್ಗೆ ಅವರು ಒಂದು ಸಾರಿ ಪರಿಶೀಲನೆ ನಡೆಸಿಕೊಳ್ಳಬೇಕು. ವಿರಾಟ್ ಅವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಅವರು ಒಬ್ಬ ಶ್ರೇಷ್ಠ ಪ್ಲೇಯರ್, ಕಂಬ್ಯಾಕ್ ಮಾಡಿಯೇ ಮಾಡುತ್ತಾರೆ..

ಆ ನಂಬಿಕೆ ನನಗೆ ಇದೆ. ಈ ಟೂರ್ನಿಯಲ್ಲಿ ಫಾರ್ಮ್ ನಲ್ಲಿರುವ ಆಟಗಾರನನ್ನು ನಾನು ನೋಡಿಲ್ಲ, ಅದಕ್ಕೆ ಕಾರಣ ಈ ಪಿಚ್ ಗಳು, ಇವು ಅವರ ಪಾಲಿಗೆ ಕೆಟ್ಟ ಕನಸಿನ ಹಾಗೆ ಕಾಡುತ್ತಿದೆ. ಆಸ್ಟ್ರೇಲಿಯಾ ತಂಡ ಮೊದಲ ಎರಡು ಪಂದ್ಯಗಳನ್ನು ಸೋತು, ಮೂರನೇ ಪಂದ್ಯದ ಮೂಲಕ ಕಂಬ್ಯಾಕ್ ಮಾಡಿದೆ. ಈ ಪಿಚ್ ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟ ಎಂದು ಎಲ್ಲರಿಗೂ ಗೊತ್ತಿದೆ. ಈ ಪಿಚ್ ನಲ್ಲಿ ಟರ್ನ್ ಮಾತ್ರವಲ್ಲ, ಬೌನ್ಸ್ ಸಹ ಇರುವುದರಿಂದ ಇಲ್ಲಿ ಆಡುತ್ತಿರುವ ಬ್ಯಾಟ್ಸ್ಮನ್ ಗಳಿಗೆ ಆತ್ಮವಿಶ್ವಾಸ ಕೂಡ ಕಡಿಮೆ ಆಗುತ್ತಿದೆ. ಈ ಪಿಚ್ ಎಲ್ಲಾ ಬ್ಯಾಟ್ಸ್ಮನ್ ಗಳಿಗೂ ಬಹಳ ಕಷ್ಟ ಅನ್ನಿಸಿದೆ.”ಎಂದು ರಿಕ್ಕಿ ಪಾಂಟಿಂಗ್ ಅವರು ಹೇಳಿದ್ದಾರೆ.

Cricket newsricky pontingVirat Kohli