ಈ ಹಣ್ಣನ್ನೇನಾದರೂ ನೀವು ನಿಮ್ಮ ತೋಟದಲ್ಲಿ ನೆಟ್ಟರೆ ದುಡ್ಡಿನ ಮರ ನೆಟ್ಟಂತೆ!

ಇತ್ತೀಚಿಗಿನ ಯುವ ಜನತೆ ಯಾವುದಾದರೂ ಕಂಪನಿಯಲ್ಲಿ ಉದ್ಯೋಗ ಮಾಡುವುದಕ್ಕಿಂತಲೂ ಸ್ವಂತ ಉದ್ಯೋಗ ಮಾಡಲು, ಹೊಸದೇನನ್ನಾದರೂ ಆರಂಭಿಸಲು ಉತ್ಸುಕರಾಗಿರುತ್ತಾರೆ. ಅದರಲ್ಲೂ ಈಗ ಹಳ್ಳಿಕಡೆ ಹೋಗಿ ಉದ್ಯಮ ಮಾಡುತ್ತಿರುವವರೇ ಜಾಸ್ತಿ! ಆದರೂ ಹಲವರಿಗೆ ಉದ್ಯಮಕ್ಕೆ ಧುಮುಕಬೇಕು ಎನ್ನುವ ಆಸೆ ಇರುತ್ತೆ ಆದರೆ ಯಾವ ಉದ್ಯಮವನ್ನು ಮಾಡಬೇಕು, ಯಾವುದು ಹೆಚ್ಚು ಲಾಭದಾಯಕ ಎನ್ನುವ ಬಗ್ಗೆ ಅರಿವು ಇರುವುದಿಲ್ಲ. ಹಾಗಾಗಿ ಹೆಚ್ಚು ಆದಾಯವನ್ನು ತರುವ ಒಂದು ಬ್ಯುಸನೆಸ್ ಬಗ್ಗೆ ನಾವಿಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ.

ಡ್ರಾಗನ್ ಫ್ರುಟ್ಸ್. ಸಾಕಷ್ಟು ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸುವುದಕ್ಕಿಂತ ಡ್ರಾಗನ್ ಫ್ರುಟ್ ನಂತರ ಲಾಭದಾಯಕ ಬೆಳೆಯನ್ನು ಬೆಳೆಯುವುದು ಸೂಕ್ತ!  ಸರಿಯಾದ ರೀತಿಯಲ್ಲಿ ಡ್ರಾಗನ್ ಫ್ರುಟ್ ನ್ನು ಬೆಳೆದರೆ ಎಕರೆಗೆ ಲಕ್ಷಗಟ್ಟಲೇ ಆದಾಯವನ್ನು ಗಳಿಸಬಹುದು. ಮೊದಲ ಹಂತದಲ್ಲಿ ಈ ಬೆಳೆ ಬೆಳೆಯುವುದಕ್ಕೆ ಸುಮಾರು ನಾಲ್ಕು ಲಕ್ಷ ವೆಚ್ಚವಾಗುತ್ತದೆ.

ಇನ್ನು ಡ್ರಾಗನ್ ಫ್ರುಟ್ ಗಳ ಬಗ್ಗೆ ಹೇಳುವುದಾದರೆ ಒಮ್ದು ಋತುವಿನಲ್ಲಿ ಸುಮಾರು ಮೂರು ಬಾರಿ ಬೆಳೆ ಬರುತ್ತದೆ. ಒಂದು ವರದಲ್ಲಿ 50-60 ಡ್ರಾಗನ್ ಫ್ರುಟ್ ಬೆಳೆಯುತ್ತದೆ. ಒಂದು ಹಣ್ಣು ಸುಮಾರು 400ಗ್ರಾಂ ತೂಕ ಹೊಂದಿರುತ್ತದೆ. ದೇಸದಲ್ಲಿ ಡ್ರಾಗನ್ ಫ್ರುಟ್ ಗೆ ಹೆಚ್ಚು ಬೇಡಿಕೆಯಿದ್ದು ಒಂದು ಕೆಜಿಗೆ 200-250ರುಪಾಯಿಗಳಷ್ಟು ಬೆಲೆಯಿದೆ. ಹಾಗಾಗಿ ಒಂದು ಮರದಿಂದ ಕನಿಷ್ಟ ಅಂದ್ರೂ ಐದು ಸಾವಿರ ಆದಾಯ ಗಳಿಸಬಹುದು!

ಡ್ರಾಗನ್ ಫ್ರುಟ್ ಅತ್ಯಂತ ಬೇಗ ಫಲ ನೀಡುವ ಗಿಡ. ಗಿಡ ನೆಟ್ಟ ಒಂದೇ ವರ್ಷದಲ್ಲಿ ನೀವು ಫಲವನು ಪಡೆಯುತ್ತೀರಿ. ಒಂದು ಎಕರೆಗೆ ಸುಮಾರು 1700 ಗಿಡಗಳನ್ನು ಹಾಕಿದರೆ, ಲೆಕ್ಕಾಚಾರದ ಪ್ರಕಾರ ಒಂದು ಎಕರೆಗೆ ಒಂದು ಬೆಳೆಯಿಂದ ಸುಮಾರು 70 ಲಕ್ಷದವರೆಗೆ ಆದಾಯ ಗಳಿಸಬಹುದು.

20-30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಈ ಹಣ್ಣು ಬೆಳೆಯುತ್ತದೆ. ಈ ಬೆಳೆ ಬೆಳೆಯಲು ಅಷ್ಟು ಮಣ್ಣಿನ ಗುಣಮಟ್ಟ ಇಲದಿದ್ದರೂ ಇಳುವರಿ ಉತ್ತಮವಾಗಿರುತ್ತದೆ. ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಇದನ್ನು ಬೆಳೆಸುವುದು ಸುಲಭ.  ಹೆಚ್ಚಿನ ಸೂರ್ಯನ ಬೆಳಕು ಈ ಬೆಳೆಗೆ ಬೇಕಾಗಿಲ್ಲ. ಮರಳು ಮಣ್ಣಿನಲ್ಲಿಯೂ ಕೂಡ ಡ್ರಾಗನ್ ಫ್ರುಟ್ ಬೆಳೆಯಬಹುದು. ಮಣ್ಣಿನ ಪಿ ಹೆಚ್ ಮಟ್ಟ 5.5-7ರಷ್ಟಿರಬೇಕು.

ಇನ್ನು ಡಬಹು ಬೇಡಿಕೆಯ ಡ್ರಾಗನ್ ಫ್ರುಟ್ ಪ್ರಯೋಜನ ಏನು ಅಂದ್ರೆ, ಜಾಮ್, ಹಣ್ಣಿನ ರಸ, ಜೆಲ್ಲಿ ಉತ್ಪನ್ನಗಳಲ್ಲಿ, ಕೈಸ್ ಕ್ರೀಮ್, ಕೆಲವು ಸೌಂದರ್ಯವರ್ಧಕಗಳಲ್ಲಿ, ವೈನ್ ತಯಾರಿಕೆಯಲ್ಲಿ ಮುಖ್ಯವಸ್ತುವಾಗಿ ಬಳಸಲ್ಪಡುತ್ತದೆ. ಅಲ್ಲದೇ ಆರೋಗ್ಯಕ್ಕೆ ಕೂಡ ಅತೀ ಪ್ರಯೋಜನಕಾರಿ. ಹಾಗಾಗಿ ಜನರು ಹೆಚ್ಚಾಗಿ ಡ್ರಾಗನ್ ಫ್ರುಟ್ ನ್ನು ಆಹಾರದಲ್ಲಿ ಸೇರಿಸುತ್ತಿದ್ದಾರೆ.

Comments (0)
Add Comment