Darshan Case; ಹಣ ಇದ್ರೆ ಏನ್ ಬೇಕಾದ್ರು ಸಿಗುತ್ತೆ- ಬಳ್ಳಾರಿ ಜೈಲ್ ಗೆ ಹೋದ ಬಳಿಕ ದರ್ಶನ್ ಹಣೆಬರಹವೇ ಬದಲು ಏನಾಗಿದೆ ಗೊತ್ತೇ?

Darshan Case: ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಫೋಟೋಗಳು ವೈರಲ್ ಆದ ನಂತರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ರವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿ ಯಾವುದೇ ವಿಶೇಷ ಸೌಲಭ್ಯಗಳು ಇಲ್ಲದೆ ಸಾಮಾನ್ಯ ಖೈದಿಯ ರೀತಿಯಲ್ಲೇ ದರ್ಶನ್ ರವರು ಇರಬೇಕಾಗಿರುವಂತಹ ಪರಿಸ್ಥಿತಿ ಕಂಡುಬಂದಿದೆ.

ಇಂಡಿಯನ್ ಟಾಯ್ಲೆಟ್ ನಲ್ಲಿ ಶೌಚವನ್ನು ಮಾಡಲು ಸಾಧ್ಯವಿಲ್ಲ ಬೆನ್ನು ನೋ-ವಿದೆ ಎನ್ನುವ ಕಾರಣ ನೀಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಈಗ ಸರ್ಜಿಕಲ್ ಚೇರ್ನ ರಿಕ್ವೆಸ್ಟ್ ಗೆ ವೈದ್ಯರು ಕೂಡ ವಸ್ತು ಎಂದಿದ್ದು ಇದೊಂದು ರೀತಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ನೆಮ್ಮದಿ ನೀಡಿದೆ ಎಂದು ಹೇಳಬಹುದಾಗಿದೆ. ಈ ವಿಚಾರದ ಬಗ್ಗೆ ದರ್ಶನ್ ರವರ ವೈದ್ಯಕೀಯ ತಪಾಸಣೆ ಹಾಗೂ ಕುಟುಂಬಸ್ಥರ ಅಭಿಪ್ರಾಯಗಳನ್ನು ಕೇಳಿದ ನಂತರವಷ್ಟೇ ಸರ್ಜಿಕಲ್ ಚೇರ್ ಅನ್ನು ದರ್ಶನ್ ರವರಿಗೆ ನೀಡುವಂತಹ ಕೆಲಸವನ್ನು ಮಾಡಲಾಗಿದೆ. ಈ ಟಾಯ್ಲೆಟ್ ಸಮಸ್ಯೆಯ ಕಾರಣದಿಂದಾಗಿಯೇ ದರ್ಶನ್ ರವರು ಊಟವನ್ನು ಕೂಡ ಕಡಿಮೆ ಮಾಡಿದ್ದಾರೆ ಎಂಬುದಾಗಿ ಜೈಲರ್ ಹೇಳಿಕೊಂಡಿದ್ದಾರೆ.

ದರ್ಶನ್ ರವರನ್ನು ಹೈ ಸೆಕ್ಯೂರಿಟಿ ಸೇಲ್ ನಲ್ಲಿ ಇರಿಸಲಾಗಿದ್ದು ಅವರ ಮೇಲೆ 24 ಗಂಟೆ ಕೂಡ ಸಿಸಿಟಿವಿ ಕ್ಯಾಮೆರದ ಹದ್ದಿನ ಕಣ್ಣು ಇರಲಿದ್ದು ಅಲ್ಲಿಯೇ 360° ಕ್ಯಾಮರವನ್ನು ಕೂಡ ಅಳವಡಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಪರಪ್ಪನ ಅಗ್ರಹಾರ ಜೈಲಿನ ರೀತಿಯಲ್ಲಿ ಸಿನಿಮಾ ಕಲಾವಿದರು ಕೂಡ ಬಳ್ಳಾರಿ ಜೈಲಿಗೆ ಬಂದು ಹೋಗುವ ರೀತಿಯಲ್ಲಿ ಯಾವುದೇ ಅವಕಾಶ ಇರುವುದಿಲ್ಲ. ಇಲ್ಲಿ ಕೇವಲ ಸಂಬಂಧಿಗಳು ಹಾಗೂ ವಕೀಲರಿಗೆ ಮಾತ್ರ ದರ್ಶನ್ ರವರನ್ನು ಭೇಟಿಯಾಗುವಂತಹ ಅವಕಾಶವನ್ನ ನೀಡಲಾಗಿದೆ. ಮೊನ್ನೆ ಅಷ್ಟೇ ಅವರ ಪತ್ನಿಯಾಗಿರುವಂತಹ ವಿಜಯಲಕ್ಷ್ಮಿ ದರ್ಶನ್ ಅವರು ಕೂಡ ದರ್ಶನ್ ರವರನ್ನು ಭೇಟಿಯಾಗಿ ಬಂದಾಗ ಕ್ಯಾಮೆರಾ ಕಣ್ಣಿನಲ್ಲಿ ಕಂಡುಬಂದಂತೆ ದರ್ಶನ್ ರವರು ಸೊರಗಿರುವುದು ಕಂಡುಬಂದಿದೆ. ಜೈಲಿನಲ್ಲಿ ದರ್ಶನ್ ರವರಿಗೆ ಸಿಕ್ಕಿರುವ ರಾಜಾಜಿಥ್ಯಕ್ಕೆ ಸಂಬಂಧಪಟ್ಟಂತೆ ಕೂಡ ಮೂರು ಎಫ್ಐಆರ್ ದಾಖಲಾಗಿದೆ. ಆ ಕಡೆ ಪವಿತ್ರ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇದ್ರೆ, ಈ ಕಡೆ ದರ್ಶನ್ ಅವರನ್ನು ಬಳ್ಳಾರಿಗೆ ಕರೆ ತರಲಾಗಿದೆ. ಪವಿತ್ರ ಗೌಡ ಅವರು ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿದರು ಯಾವುದೇ ರೀತಿಯ ಸಕಾರಾತ್ಮಕ ಫಲಿತಾಂಶ ಇದರಲ್ಲಿ ಕಂಡುಬಂದಿಲ್ಲ.

ಸರ್ಜಿಕಲ್ ಚೇರ್ ಸಿಕ್ಕಿರೋದುನ್ನ ಸೋಶಿಯಲ್ ಮೀಡಿಯಾದಲ್ಲಿ ಹಣ ಇದ್ರೆ ಏನು ಬೇಕಾದ್ರೂ ಕೂಡ ಜೈಲಿನಲ್ಲಿ ಸಿಗುತ್ತೆ ಅದು ಪರಪ್ಪನ ಅಗ್ರಹಾರ ಜೈಲ್ ಆಗಿರಲಿ ಅಥವಾ ಬಳ್ಳಾರಿ ಜೈಲ್ ಆಗಿರಲಿ ಅನ್ನೋದಾಗಿ ಕೂಡ ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.

Darshan Case