Dashan Birthday Party Issue: ಕಡೆಗೂ ಪ್ರತಿಕ್ರಿಯೆ ಕೊಟ್ರ ಡಿ ಬಾಸ್? ಸುಮ್ಮನಿರು ಇದರಲ್ಲಿ ತಪ್ಪೇನಿದೆ ಅಂತ ವಿಜಯಲಕ್ಷ್ಮಿಗೆ ಕ್ಲಾಸ್!

Dashan Birthday Party Issue: ದರ್ಶನ್ (Challenging start Darshan) ಅವರ ಹುಟ್ಟುಹಬ್ಬ (Birthday) ಅಂದ್ರೆ ಅಭಿಮಾನಿಗಳಿಗೆ ದೊಡ್ಡ ಹಬ್ಬವೇ ಸರಿ. ಪ್ರತಿ ವರ್ಷ ಸಿಕ್ಕಾಪಟ್ಟೆ ಗ್ರಾಂಡ್ (Grand)  ಆಗಿ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ದರ್ಶನ್ ಅವರ ವಿನಂತಿಯಂತೆ ದವಸ ಧಾನ್ಯಗಳನ್ನು ನೀಡುವುದರ ಮೂಲಕ ದರ್ಶನ್ ಅವರ ಅಭಿಮಾನಿಗಳು (Fans) ದರ್ಶನ್ ಅವರ ಮೇಲೆ ಇನ್ನಷ್ಟು ಹೆಚ್ಚಿನ ಅಭಿಮಾನ ತೋರಿಸಿದ್ದಾರೆ. ಈ ಎಲ್ಲಾ ದವಸ ಧಾನ್ಯಗಳನ್ನು ಅಗತ್ಯ ಇರುವವರಿಗೆ ತಲುಪಿಸುವ ಜವಾಬ್ದಾರಿಯನ್ನ ದರ್ಶನ್ ಹೊತ್ತಿದ್ದಾರೆ. ಈಗಾಗಲೇ ಆ ಕಾರ್ಯವು ಕೂಡ ನಡೆದಿದೆ. ಈ ಮೂಲಕ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಈ ವರ್ಷ ನಡೆದಿದೆ.

ಈ ನಡುವೆ ಎರಡು ಜಡೆಗಳ ವಾರ್ (War) ಕೂಡ ಆರಂಭವಾಗಿದೆ. ದರ್ಶನ್ ಅವರಿಗೆ ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ಮೇಘ ಶೆಟ್ಟಿ ತನ್ನ ಸ್ನೇಹಿತರ ಜೊತೆಗೂಡಿ ಒಂದು ಖಾಸಗಿ ಪಾರ್ಟಿ (Party) ಅರೆಂಜ್ ಮಾಡಿದ್ದರು. ಇದಕ್ಕೆ ದರ್ಶನ್ ಕೂಡ ಆಗಮಿಸಿದ್ದರು. ಸ್ನೇಹಿತರೆಲ್ಲರೂ ಸೇರಿ ಮಂದ ಬೆಳಕಿನಲ್ಲಿ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಮೇಘ ಶೆಟ್ಟಿ (Megha Shetty) ಹಾಕಿರುವ ವಿಡಿಯೋ ನೋಡುತ್ತಿದ್ದಂತೆ ದರ್ಶನ್ ಅವರ ಪತ್ನಿ ವಿಜಯ್ ಲಕ್ಷ್ಮಿ (VijayLakshmi), ಗರಂ ಆಗಿದ್ದರು. ಮೇಘಾ ಶೆಟ್ಟಿ ಅವರಿಗೆ ಈ ತರಹ ವಿಡಿಯೋವನ್ನು ಹಾಕಬೇಡಿ ಹೇಗೆ ಮಾಡಿದರೆ ನನ್ನ ಸಂಸಾರ ಒಡೆಯುತ್ತೆ ಎನ್ನುವಂತಹ ಅರ್ಥದ ಪೋಸ್ಟ್ ಮಾಡಿದ್ದರು. ಆ ಕೂಡಲೇ ನಟಿ ಮೇಘ ಶೆಟ್ಟಿ ಈ ವಿಡಿಯೋವನ್ನು ಡಿಲೀಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:Darshan Viral Video: ದರ್ಶನ್ ಗೆ ಹತ್ತಿರವಾಗಿದ್ದು ಬೇರೆ ಯಾರೋ, ಆದರೆ ವಿಜಯಲಕ್ಷ್ಮಿ ಹತ್ರ ಉಗಿಸಿಕೊಂಡಿದ್ದು ಮಾತ್ರ ಮೇಘಾ ಶೆಟ್ಟಿ; ಎಲ್ಲಾ ಗೊತ್ತಿದ್ರೂ ದರ್ಶನ್ ಮಾತ್ರ ಸುಮ್ಮನೆ ಇರೋದ್ಯಾಕೋ? ಇಲ್ಲಿದೆ ನೋಡಿ ವೈರಲ್ ವಿಡಿಯೋ!

ದರ್ಶನ್ ಅವರಿಗೆ ನೀಡಿದ ಖಾಸಗಿ ಪಾರ್ಟಿಯಲ್ಲಿ ಮೇಘ ಶೆಟ್ಟಿ ಅವರ ಜೊತೆಗೆ ಪವಿತ್ರ ಗೌಡ, ಪಾಯಲ್ ಮೊದಲಾದವರು ಉಪಸ್ಥಿತರಿದ್ದರು. ಈಗಾಗಲೇ ಪವಿತ್ರ ಗೌಡ ತಾನು ದರ್ಶನ್ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ ಅವರ ಜೊತೆಗೆ ಇರುವ ಫೋಟೋಗಳನ್ನು ಕೂಡ ಶೇರ್ ಮಾಡುತ್ತಾರೆ ಹಾಗಾಗಿ ಇದು ವಿಜಯಲಕ್ಷ್ಮಿ ಅವರಿಗೆ ಹೆಚ್ಚು ಸಿಟ್ಟು ಬರುವಂತೆ ಮಾಡಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:Aparna vastare: ಅಂದು ಆ ಒಬ್ಬ ಕಲಾವಿದೆ ಅದೊಂದು ಕೆಲಸ ಮಾಡದೇ ಇದ್ದಿದ್ರೆ ನಾವು ಮೆಟ್ರೋದಲಿ ತಪ್ಪಾದ ಕನ್ನಡ ಉಚ್ಛಾರಣೆಯಿಂದ ನಗೆಪಾಟಲಿಗೆ ಗುರಿಯಾಗುತ್ತಿದ್ದೆವು, ಜಪಾಲ್ ಕಂಪನಿ ಮಾಡಿದ ತಪ್ಪನ್ನು ಸರಿ ಮಾಡಿದ್ದು ಯಾರು ಗೊತ್ತೇ?

ಪವಿತ್ರ ಗೌಡ ಅವರ ಮೇಲಿನ ಸಿಟ್ಟನ್ನು ಮೇಘ ಶೆಟ್ಟಿ ಮೇಲೆ ತೀರಿಸಿಕೊಂಡಿದ್ದಾರೆ ವಿಜಯಲಕ್ಷ್ಮಿ ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ. ಅದೇನೇ ಇರಲಿ ಹೆಂಡತಿಯಾಗಿರುವವಳು ಗಂಡನ ಬಗ್ಗೆ ಕಾಳಜಿ ಮಾಡುವುದು ಸರಿಯಾಗಿದೆ ಎಂದು ದರ್ಶನ್ ಅಭಿಮಾನಿಗಳು ಕೂಡ ವಿಜಯಲಕ್ಷ್ಮಿ ಪರವಾಗಿ ನಿಂತಿದ್ದಾರೆ. ಇನ್ನು ಈ ಬಗ್ಗೆ ದರ್ಶನ್ ಅವರು ಪ್ರತಿಕ್ರಿಯೆ ನೀಡಲಿಲ್ಲ ಆದರೆ ಅವರ ಪ್ರತಿಕ್ರಿಯೆ ಕೆಲವರು ಕಾದು ಕುಳಿತಿದ್ದರೆ ಇನ್ನೂ ಕೆಲವರು ದರ್ಶನ್ ಅವರ ಮಾತುಗಳನ್ನ ತಾವೇ ಆಡಿದ್ದಾರೆ ವಿಜಯಲಕ್ಷ್ಮಿ ಅವರ ಪರವಾಗಿ ನಿಂತು ಹೆಣ್ಣು ಮಕ್ಕಳು ಸ್ವಲ್ಪ ಮಿತಿಯಲ್ಲಿ ಇರಬೇಕು ಎಂಬುದಾಗಿ ದರ್ಶನ್ ಪರವಾಗಿ ಕಮೆಂಟ್ ಮಾಡುತ್ತಿದ್ದಾರೆ. ಅದನ್ನೇ ಇರಲಿ ಈ ವಿಚಾರಕ್ಕೆ ದರ್ಶನ್ ಹಾಗೂ ವಿಜಯಲಕ್ಷ್ಮಿಯವರ ಮೇಲೆ ಪರಿಣಾಮ ಬೀರದೆ ಇದ್ದರೆ ಸಾಕು ಎನ್ನುವುದು ಹಲವರ ಆಶಯ.

Challenging start Darshandarshan's wifeDashan Birthday Party IssueMegha settypavitra gowdavijaylaksmiದರ್ಶನ್