Dk Shivakumar: ಚುನಾವಣೆಗೂ ಮುನ್ನ ಹೇಳದೆ ಈಗ ಷರತ್ತು ಹಾಕುತ್ತಿರುವುದಕ್ಕೆ ಡಿಕೆಶಿ ನೇರವಾಗಿ ಹೇಳಿದ್ದೇನು ಗೊತ್ತೇ?? ಹಿಂಗೂ ಹೇಳ್ತಾರಾ? ಇವೆಲ್ಲ ಬೇಕಿತ್ತಾ??

Dk Shivakumar: ಕಾಂಗ್ರೆಸ್ ಸರ್ಕಾರ(Congress Govt.) ಚುನಾವಣೆ (Election) ವೇಳೆ ರಾಜ್ಯದ ಜನತೆಗೆ 5 ಗ್ಯಾರೆಂಟಿಗಳನ್ನು ಖಚಿತವಾಗಿ ಕೊಡುವುದಾಗಿ ಹೇಳಿತ್ತು. ಆದರೆ ಚುನಾವಣೆಯಲ್ಲಿ ಗೆದ್ದು, ಅಧಿಕಾರಕ್ಕೆ ಬಂದ ನಂತರ 5 ಯೋಜನೆಗಳಿಗೆ ಷರತ್ತುಗಳನ್ನು ವಿಧಿಸಿದೆ. ಇದರ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ (D.K.Shivkumar) ಅವರಿಗೆ ಪ್ರಶ್ನೆ ಕೇಳಿದ್ದಕ್ಕೆ ಅವರು ಜಾರಿಕೊಳ್ಳುವಂಥ ಉತ್ತರ ಕೊಟ್ಟಿದ್ದು, ಜನರು ಈಗ ಕಾಂಗ್ರೆಸ್ ಪಕ್ಷದ ಮೇಲೆ ಆಕ್ರೋಶಗೊಂಡಿದ್ದಾರೆ.. ಇದನ್ನೂ ಓದಿ: Pitru dosha: ನಿಮ್ಮ ಮನೆಯಲ್ಲಿ ಹೀಗೆ ಆಗಿದ್ದರೆ ನಿಮ್ಮ ಕುಟುಂಬಕ್ಕೆ ಪಿತೃ ದೋಷ ಇದೆ ಎಂದರ್ಥ- ತಿಳಿದುಕೊಂಡು ನಿವಾರಣೆ ಮಾಡಿಸಿ, ನೀವೇ ಕಿಂಗ್ ಆಗ್ತೀರಾ.

ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿತಿಂಗಳು ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ 2000 ರೂಪಾಯಿ ಹಣ ನೀಡುವುದಾಗಿ ತಿಳಿಸಿದ್ದರು, ಈ ಯೋಜನೆಯಲ್ಲಿ ಕೆಲವು ಅನುಮನವಿತ್ತು, ಅತ್ತೆ ಸೊಸೆ ಇಬ್ಬರು ಇದ್ದಾಗ ಮನೆಯ ಯಜಮಾನಿ ಯಾರು ಎಂದು ಆಯ್ಕೆ ಮಾಡುವುದು ಹೇಗೆ ಎನ್ನುವುದಕ್ಕೆ ಗೊಂದಲ ಇದ್ದ ಕಾರಣ ಡಿಕೆಶಿ ಅವರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಮನೆಯ ಯಜಮಾನಿ ಯಾರು ಎಂದು ಜನರೇ ತೀರ್ಮಾನ ಮಾಡಬೇಕು ಎಂದಿದ್ದಾರೆ..

ನಾವು ಅವರ ಪರ್ಸನಲ್ ವಿಷಯಕ್ಕೆ ಹೋಗುವುದಿಲ್ಲ, ಅದನ್ನು ಅವರೇ ತೀರ್ಮಾನ ಮಾಡಲಿ.. ಬ್ಯಾಂಕ್ ಖಾತೆ, ವೋಟರ್ ಐಡಿ, ಆಧಾರ್ ಕಾರ್ಡ್ ಇದೆಲ್ಲವೂ ಇರಲೇಬೇಕು. ಬೇರೆಯವರ ಬ್ಯಾಂಕ್ ಖಾತೆ ಕೊಟ್ಟರೆ, ಅದಕ್ಕೆ ಹಣ ಹಾಕುವುದಿಲ್ಲ. ಒಂದೊಂದು ಮನೆಯ ವೋಟಿಂಗ್ ಲಿಸ್ಟ್ ಎಲ್ಲವೂ ಇದೆ, BPL, APL, ಅಂತ್ಯೋದಯ ಕಾರ್ಡ್ ಇವುಗಳ ಲಿಸ್ಟ್ ಇದೆ, ಫಸ್ಟ್ ನೇಮ್ ಸೆಕೆಂಡ್ ನೇಮ್ ಯಾವ ಹೆಸರು ಕೊಡಬೇಕು ಎಂದು ಕೂಡ ಅವರೇ ತೀರ್ಮಾನ ಮಾಡಬೇಕು ಎಂದಿದ್ದಾರೆ..

ಐಟಿ ರಿಟರ್ನ್ಸ್ ಕಟ್ಟುವವರ ವಿಚಾರಕ್ಕೆ, ನಾವು ಈ ಯೋಜನೆಗಳನ್ನು ಮಾಡಿದ್ದು ಬಡವರಿಗಾಗಿ, ಐಟಿ ರಿಟರ್ನ್ಸ್ ಕಟ್ಟುವವರು ನಮ್ಮ ಗ್ಯಾರಂಟಿ ಯೋಜನೆ ಬೇಕು ಎಂದು ಬಂದು ಕೇಳುವುದಿಲ್ಲ. ಹಲವರು ನಮಗೆ 2000 ಬೇಡ ಅಂತ ಪತ್ರ ಬರೆದಿದ್ದಾರೆ, ಅವರ ಹೆಸರನ್ನ ಹೇಳೋಕೆ ಆಗಲ್ಲ ಎಂದಿದ್ದಾರೆ ಡಿಕೆಶಿ. ಇನ್ನು ಉಚಿತ ವಿದ್ಯುತ್ ಯೋಜನೆ ವಿಷಯಕ್ಕೆ, ಬಾಡಿಗೆ ಮನೆಯಲ್ಲಿ ಇರುವವರಿಗೂ ವಿದ್ಯುತ್ ಕೊಡುವುದಾಗಿ ಹೇಳಿದ್ದೇವೆ, ಅದನ್ನು ಈಗಾಗಲೇ ಕ್ಲಿಯರ್ ಮಾಡಿದ್ದೇವೆ ಎಂದಿದ್ದಾರೆ. ಹಾಗೆಯೇ ಸರ್ಕಾರಿ ನೌಕರರಿಗೆ ಈ ಸೌಲಭ್ಯ ಸಿಗುತ್ತಾ ಎನ್ನುವುದಕ್ಕೆ ಮಾತ್ರ ಉತ್ತರ ಕೊಡದೆ ಹಾಗೆಯೇ ಹೋಗಿದ್ದಾರೆ. ಇದನ್ನೂ ಓದಿ: Technology: ಬದಲಾಗುತ್ತಿದೆ ಭಾರತ – ಐಫೋನ್ ಬೆನ್ನಲ್ಲೇ ಮತ್ತೊಂದು ಕಂಪನಿ ಇಂದ ಭಾರತದಲ್ಲಿಯೇ ಉತ್ಪಾದನೆ ಆರಂಭ- ಯಾವ ಕಂಪನಿ ಗೊತ್ತೇ? ಮೊಬೈಲ್ ಮತ್ತಷ್ಟು ಅಗ್ಗ.

best election newsbest news electionBJPbjp updatesbjp vs congressCongresscongress updateselection 2023election live newselection live updateselection newselection predictionjdsjds updatesjds vs bjpkannada live electionkarnataka electionKarnataka Election 2023