Post Office Scheme: ಅಂಚೆ ಕಚೇರಿಯಲ್ಲಿ ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನೀವು ಕೋಟ್ಯಾಧಿಶರಾಗುವುದು ಪಕ್ಕಾ; ಯಾವ ಯೋಜನೆ ಗೊತ್ತೇ?

Post Office Scheme: ಇಂದಿನ ದಿನದಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ಉದ್ಯೋಗದಲ್ಲಿ ತೊಡಗಿಕೊಂಡಿರುತ್ತಾರೆ. ತಿಂಗಳಿಗೆ ಒಂದಿಷ್ಟು ಆದಾಯವಂತೂ ಗಳಿಸುತ್ತಾರೆ. ಹೀಗೆ ದುಡಿದ ಆದಾಯದಲ್ಲಿ ಒಂದಿಷ್ಟು ಭಾಗವನ್ನು ಭವಿಷ್ಯಕ್ಕಾಗಿ ಉಳಿತಾಯ (Savings) ಮಾಡಬೇಕು. ಇಲ್ಲದಿದ್ದರೆ ಯಾವುದಾದರೂ ತುರ್ತು ಅಗತ್ಯಗಳು ಎದುರಾದಾಗ ಸಾಲ (loan) ಮಾಡುವ ಪರಿಸ್ಥಿತಿ ಬರುತ್ತದೆ. ಹೀಗೆ ಉಳಿತಾಯ ಮಾಡಿದ ಹಣವನ್ನು ಒಳ್ಳೆಯ ಜಾಗದಲ್ಲಿ, ಅಥವಾ ಹೆಚ್ಚಿನ ಲಾಭ ಬರುವ ಜಾಗದಲ್ಲಿ ಹೂಡಿಕೆ ಮಾಡುವುದು ಉತ್ತಮ. ಇದರಿಂದ ನಿಮ್ಮ ಹಣ ಉಳಿತಾಯ ಆಗುವ ಜೊತೆಗೆ ಅದೇ ನಿಮಗೆ ಲಾಭ ತಂದುಕೊಡುತ್ತದೆ. ಹೂಡಿಕೆಗೆ ಅಂಚೆ ಕಚೇರಿಗಳು ಪ್ರಶಸ್ತವಾದ ಸ್ಥಳವಾಗಿದೆ.

Post Office Scheme: ಅಂಚೆ ಕಚೇರಿಯಲ್ಲಿ ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನೀವು ಕೋಟ್ಯಾಧಿಶರಾಗುವುದು ಪಕ್ಕಾ; ಯಾವ ಯೋಜನೆ ಗೊತ್ತೇ? https://sihikahinews.com/amp/do-invest-in-these-post-office-scheme/

ಹೌದು, ಅಂಚೆ ಕಚೇರಿ (Post Office) ಗಳಲ್ಲಿ ಇಂದು ಹಲವಾರು ರೀತಿಯ ಹೂಡಿಕೆ (investment) ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಇಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣಕ್ಕೆ ಖಾತ್ರಿ ಇರುತ್ತದೆ. ಮೋಸ ಹೋಗುವ ಸಾಧ್ಯತೆಗಳು ಇರುವುದಿಲ್ಲ. ಅಂಚೆ ಕಚೇರಿಯಲ್ಲಿ ಇರುವ ಉಳಿತಾಯ ಯೋಜನೆಗಳೆಂದರೆ ಮೊದಲನೆಯದಾಗಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಮರುಕಳಿಸುವ ಠೇವಣಿ (ಆರ್.ಡಿ.), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ( ಎನ್ಎಸ್ಸಿ), ಸಮಯ ಠೇವಣಿ (ಟಿ.ಡಿ) ಇವುಗಳಲ್ಲಿ ಹೂಡಿಕೆ ಮಾಡುವುದರಿಂದ ನೀವು ಹೆಚ್ಚಿನ ಲಾಭ ಗಳಿಸಬಹುದು. ಇದನ್ನೂ ಓದಿ: Vaishnavi Gowda: ನಿಶ್ಚಿತಾರ್ಥದ ಗೊಂದಲದಿಂದ ಹೊರಬಂದ ಡಿಂಪಲ್ ಕ್ವೀನ್ ವೈಷ್ಣವಿ ಗಗನ್ ಜೊತೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ; ಏನು ಗೊತ್ತೇ?  

ಸಾರ್ವಜನಿಕ ಭವಿಷ್ಯ ನಿಧಿ: ನಾವು ಮೊದಲು ಸಾರ್ವಜನಿಕ ಭವಿಷ್ಯ ನಿಧಿ ಬಗ್ಗೆ ತಿಳಿದುಕೊಳ್ಳೊಣ. ಇದರಲ್ಲಿ ನೀವು ಪ್ರತಿ ವಾರ್ಷಿಕವಾಗಿ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಇದಕ್ಕಾಗಿ ನೀವು ತಿಂಗಳಿಗೆ 12,500 ರೂ. ಉಳಿತಾಯ ಮಾಡಬೇಕಾಗುತ್ತದೆ. ಇದರ ಮೆಚುರಿಟಿ ಅವಧಿ 15 ವರ್ಷಗಳು. ಅದರ ನಂತರ ನೀವು ಮತ್ತೆ 5 ವರ್ಷಗಳ ವರೆಗೆ ಅವಧಿ ವಿಸ್ತರಿಸಿಕೊಳ್ಳಬಹುದು. ನೀವು ತೆರಿಗೆ ಪಾವತಿದಾರರಾಗಿದ್ದರೆ ಈ ಯೋಜನೆಯಿಂದ ಪ್ರಯೋಜನ ಪಡೆದುಕೊಳ್ಳಬಹುದು. ಪ್ರಸ್ತುತ ಈ ಯೋಜನೆಯಲ್ಲಿ ಶೇ. 7.1 ಬಡ್ಡಿ ನೀಡಲಾಗುತ್ತದೆ. ನೀವು ಪ್ರತಿ ವರ್ಷ 1.5 ಲಕ್ಷ ರೂ. ಹೂಡಿಕೆ ಮಾಡಿದಲ್ಲಿ  ನಿಮಗೆ ಅಂತಿಮವಾಗಿ 1.3 ಕೋಟಿ ರೂ.ಗಳನ್ನು ಪಡೆದುಕೊಳ್ಳಬಹುದು. ಇದನ್ನೂ ಓದಿ: Job: ಪಿಯುಸಿ ಮುಗಿಸಿದವವರಿಗೆ ಸುವರ್ಣಾವಕಾಶ; ಇದೊಂದು ಅಲ್ಪಾವಧಿಯ ಕೋರ್ಸ್ ಮಾಡ್ರಿದೆ ಕೈತುಂಬ ಸಂಬಳ ಕೊಡುವ ಐಟಿ ಕಂಪನಿಗಳಲ್ಲಿ ಕೆಲಸ ಪಕ್ಕಾ!

ಆರ್ ಡಿ: ಇನ್ನು ಆರ್ ಡಿ (RD) ಯೋಜನೆ ಏನೆಂದು ತಿಳಿದುಕೊಳ್ಳೊಣ. ಈ ಯೋಜನೆಯಲ್ಲಿ ನೀವು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆಗೆ ಗರಿಷ್ಟ ಮಿತಿ ಹಾಕಲಾಗಿಲ್ಲ. ಈ ಯೋಜನೆಯಲ್ಲಿ ನಿಮಗೆ ಶೇ.5.8 ರಷ್ಟು ಬಡ್ಡಿ ನೀಡಲಾಗುತ್ತದೆ. ನೀವು ವಾರ್ಷಿಕವಾಗಿ 1.5 ಲಕ್ಷ ರೂ. ಹೂಡಿಕೆ ಮಾಡಿದರೆ 27 ವರ್ಷದಲ್ಲಿ ನಿಮಗೆ 99  ಲಕ್ಷ ರೂ. ವಾಪಸ್ ಸಿಗುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ: ಇನ್ನು ಮೂರನೇಯದಾಗಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದ ಬಗ್ಗೆ ಮಾಹಿತಿ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದಲೂ ನೀವು ತೆರಿಗೆ ವಿನಾಯತಿ ಪಡೆದುಕೊಳ್ಳಬಹುದು. ಇದರಲ್ಲಿ ಶೇ.6.8 ರಷ್ಟು ಬಡ್ಡಿ ನೀಡಲಾಗುತ್ತದೆ. ಸಣ್ಣ ಹೂಡಿಕೆಗಳ ಮೇಲಿನ ಬಡ್ಡಿದರವು ಪ್ರತಿಮೂರು ತಿಂಗಳಿಗೊಮ್ಮೆ ಬದಲಾವಣೆ ಆಗುತ್ತಿರುತ್ತದೆ. ಇದನ್ನೂ ಓದಿ: Business Idea: ಎಷ್ಟು ಕಡಿಮೆ ಹೂಡಿಕೆ ಮಾಡಿದ್ರೂ ಸರಿ; ಈ ಉದ್ಯೋಗ ಪ್ರಾರಂಭಿಸಿದರೆ ತಿಂಗಳಿಗೆ ಕನಿಷ್ಟ 4೦,೦೦೦ ರೂ. ಅಂತೂ ಎಣಿಸ್ತೀರಿ ಯಾವುದು ಗೊತ್ತೇ ಆ ಉದ್ಯೋಗ?

ಸಮಯ ಠೇವಣಿ: ಸಮಯ ಠೇವಣಿಯಲ್ಲೂ ನೀವು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ನಿಮಗೆ ಶೇ.6.7ರಷ್ಟು ಬಡ್ಡಿ ನೀಡಲಾಗುತ್ತದೆ. ನೀವು 15 ಲಕ್ಷ ರೂ. ಠೇವಣಿ ಮಾಡಿದರೆ 25 ವರ್ಷಗಳಲ್ಲಿ ನೀವು ಮಿಲೇನಿಯರ್ ಆಗಬಹುದು. ಅಲ್ಲದೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದು ಬಹಳ ಸುಕ್ಷಿತವಾಗಿದೆ.

InvestmentLifestylePost OfficePost office Schemeಅಂಚೆ ಕಚೇರಿಉಳಿತಾಯ ಯೋಜನೆ