Karnataka Temple: ನಿಮ್ಮ ಮಕ್ಕಳು ಅತಿಯಾಗಿ ಹಠ ಮಾಡುತ್ತಾರಾ? ಹಾಗಾದ್ರೆ ಈ ದೇವಾಲಯದಲ್ಲಿ ಮಣ್ಣಿನ ಪ್ರಸಾದ ತಿನ್ನಿಸಿದರೆ ಮಕ್ಕಳು ಶಾಂತಸ್ವರೂಪಿಗಳಾಗುತ್ತಾರಂತೆ?! ಯಾವುದು ಆ ಪುಣ್ಯ ಕ್ಷೇತ್ರ ಗೊತ್ತೆ?

Karnataka Temple: ಮಕ್ಕಳ ಹಠ, ತುಂಟಾಟ ಇವುಗಳನ್ನೆಲ್ಲ ನೋಡಿದರೆ ಮೊದಲಿಗೆ ನೆನಪಿಗೆ ಬರುವುದೇ ಈ ಯಶೋದಯ ಕಂದ ಕೃಷ್ಣ ಅಲ್ವೇ? ಕೃಷ್ಣ ಅಂದ್ರೆ ಈ ಯಶೋದೆಗೆ ಮಾತ್ರವಲ್ಲ ಎಲ್ಲಾ ಅಮ್ಮಂದಿರಿಗೂ ಮುದ್ದು. ಅದೇ ರೀತಿ ತಮ್ಮ ಮಕ್ಕಳು ಕೂಡ ಕೃಷ್ಣನಂತೆ ಹಠ ಹಿಡಿದರೆ ಮಣ್ಣನ್ನ ಕದ್ದು ತಿಂದರೆ ಅಮ್ಮ ಯಶೋದೆಯಂತೆಯೇ ದಂಡಿಸುತ್ತಾಳೆ. ಹಾಗಂತ, ಮಕ್ಕಳು ಹಠ ಹಿಡಿಯೋದು ಅಥವಾ ಮಣ್ಣು ತಿನ್ನೋದು ಹೇಳಿದ ಮಾತನ್ನು ಕೇಳಿದೆ ಇರುವುದು ಇಂತಹ ಕೆಲಸವನ್ನು ಅತಿಯಾಗಿ ಮಾಡಿದರೆ ಯಾರಿಗೂ ಸಹಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ಅದಕ್ಕಾಗಿ ಕೆಲವರು ವೈದ್ಯರ ಮೊರೆ ಹೋದರೆ ಇನ್ನೂ ಕೆಲವರು ದೇವರ ಬಳಿ ನನ್ನ ಮಗನ ಹಠ ಕಡಿಮೆ ಮಾಡು ಅಂತ ಬೇಡಿಕೊಳ್ಳುತ್ತಾರೆ ಹಾಗೆ ಭಕ್ತರ ಮಾತುಗಳನ್ನ ಆಲಿಸಿ ಮಕ್ಕಳಲ್ಲಿ ಇರುವ ಕೋಪ ಹಠ ಕಡಿಮೆ ಮಾಡಿ ಅವರು ಶಾಂತವಾಗಿ ಇರುವಂತೆ ಮಾಡುವ ಏಕೈಕ ದೇವರೇ ಕಂಚಿಕ ಪರಮೇಶ್ವರಿ (Kanchita parameshwari). ಇದನ್ನೂ ಓದಿ: Kannada Film: ಮತ್ತೆ ದೈವದ ಮೊರೆ ಹೋದ ರಿಷಬ್ ಶೆಟ್ಟಿ; ‘ಕಾಂತರಾ -2’  ಚಿತ್ರೀಕರಣಕ್ಕೆ ಅಣ್ಣಪ್ಪ ಪಂಜುರ್ಲಿ ದೈವ ನೀಡಿತೇ ಅನುಮತಿ?

ಹೌದು, ಇಲ್ಲಿ ಪೋಷಕರು ಮಕ್ಕಳನ್ನು ಕರೆದುಕೊಂಡು ಬಂದು ಮಣ್ಣನ್ನ ತಿನ್ನಿಸುತ್ತಾರೆ. ಅರೆ, ಇದೇನಿದು ಪೋಷಕರೇ ಮಣ್ಣನ್ನ ತಿನ್ನಿಸುವುದು ಅಂದ್ರೆ ಏನು ಅಂತ ನಿಮಗೆ ಆಶ್ಚರ್ಯವಾಗಬಹುದು. ಆದರೆ ಈ ಪುಣ್ಯ ಕ್ಷೇತ್ರದ ಮಹಿಮೆಯೇ ಅಂತದ್ದು ಇಲ್ಲಿ ಮೊನ್ನೆ ಬರುವ ಭಕ್ತಾದಿಗಳಿಗೆ ಪ್ರಸಾದ ಅದರಲ್ಲೂ ರಚ್ಚೆ ಹಿಡಿಯುವ ಪುಟ್ಟ ಮಕ್ಕಳನ್ನ ಇಲ್ಲಿ ಕರೆದುಕೊಂಡು ಬಂದು ಪ್ರಸಾದ ರೂಪದಲ್ಲಿ ಮಣ್ಣನ್ನು ತಿನ್ನಿಸಿದರೆ ಆ ಮಕ್ಕಳು ತಮ್ಮ ಹಟ ಕೋಪವನ್ನು ಬಿಟ್ಟು ಶಾಂತ ಸ್ವರೂಪಿಗಳಾಗುತ್ತಾರೆ. ಜೊತೆಗೆ ಕಂಡ ಕಂಡಲ್ಲಿ ಮಣ್ಣು ತಿನ್ನುವ ಹವ್ಯಾಸವನ್ನು ಕೂಡ ಬಿಟ್ಟುಬಿಡುತ್ತಾರಂತೆ. ಇಂತಹ ಪುಣ್ಯಕ್ಷೇತ್ರ ಇರೋದು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಳಿ ಬಾಡ ಎನ್ನುವ ಸ್ಥಳದಲ್ಲಿ. ಇಲ್ಲಿರುವ ಶ್ರೀ ಕಂಚಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮಕ್ಕಳಿಗೆ ಮಣ್ಣನ್ನ ಪ್ರಸಾದವಾಗಿ ನೀಡಲಾಗುತ್ತದೆ ಇದು ಇತ್ತೀಚಿಗೆ ನಡೆದುಕೊಂಡು ಬಂದ ಪದ್ಧತಿಯಲ್ಲ ತಲೆತಲಾಂತರದಿಂದ ಇಲ್ಲಿ ಅನುಸರಿಸಿಕೊಂಡು ಬರಲಾಗಿರುವ ಪದ್ಧತಿ ವರ್ಷಕ್ಕೆ ಸಾಕಷ್ಟು ಭಕ್ತರು ಇಲ್ಲಿಗೆ ಬರುತ್ತಾರೆ ಆಶೀರ್ವಾದವನ್ನು ತಮ್ಮ ಮಕ್ಕಳಿಗೆ ಪಡೆದುಕೊಂಡು ಹೋಗುತ್ತಾರೆ. ಇದನ್ನೂ ಓದಿ: Vastu Tips: ಮನೆಯಲ್ಲಿ ಹಾಲು ಉಕ್ಕಿದರೆ ಶುಭವೋ ಅಶುಭವೋ? ಏನನ್ನುತ್ತದೆ ವಾಸ್ತು ಶಾಸ್ತ್ರ ಗೊತ್ತೇ?

ಸಾಮಾನ್ಯವಾಗಿ ನಾವು ಮಣ್ಣನ್ನ ದೇವರು ಎಂದೇ ಪೂಜಿಸುತ್ತೇವೆ, ಅದರಲ್ಲೂ ಈ ದೇವಸ್ಥಾನದ ಮಣ್ಣಿಗೆ ಇಂತಹದೊಂದು ವಿಶೇಷ ಗುಣವಿದೆ. ಕಂಚಿ ಕಾಪರಮೇಶ್ವರಿ ದೇವಾಲಯ ಕಲಭರಾಜಶ್ರೀ ಅವರಿಂದ ಸ್ಥಾಪಿತವಾಗಿದೆ ಇಲ್ಲಿ ಪೂಜೆ ಮಾಡುತ್ತಾ ಇರುವ ದೇವಿಯನ್ನು ಕಂಚಿಯಿಂದ ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ಈ ಭಾಗದ ರಾಜನೇ ಮುಂದೆ ತನ್ನ ದೈವಿಕ ಕಾರಣಕ್ಕೆ ದೇವರಾಗಿ ರೂಪ ತಡೆದ ಎನ್ನುವ ಮಾತು ಕೂಡ ಇದೆ ಈ ಭಾಗದ ಕಾವಲು ದೈವವಾಗಿ ಕಾರಣಿಕ ಶಕ್ತಿಯಾಗಿ ಈ ರಾಜನು ಈ ಸ್ಥಳದಲ್ಲಿ ನೆಲೆಸಿದ್ದಾನೆ ಎನ್ನುತ್ತೆ ಇತಿಹಾಸ.

ಇಲ್ಲಿ ರಾಜನಿಗೆ ಎಂದೆ ಗುಡಿ ಕಟ್ಟಲಾಗಿದೆ. ಅದನ್ನ ಕಡಬಜ್ಜನ ಗುಡಿ ಕಲಭೇಶ್ವರ ದೇವಸ್ಥಾನ ಎಂದು ಕರೆಯಲಾಗುತ್ತದೆ. ಇಲ್ಲಿನ ಕಲಭ ರಾಜನ ಅಭಿಷೇಕದಿಂದ ನೆನೆದ ಮಣ್ಣನ್ನ ಮಕ್ಕಳಿಗೆ ಪ್ರಸಾದವಾಗಿ ನೀಡಲಾಗುತ್ತದೆ ಇದರಿಂದ ಮಕ್ಕಳ ಹೊಲವು ರೋಗ ಶಮನವಾಗುತ್ತದೆ ಎನ್ನುವ ನಂಬಿಕೆ ಇದೆ. ಇಂತಹ ಅದ್ಭುತ ಶಕ್ತಿ ಇರುವ ದೇವಿಯ ದೇವಾಲಯಕ್ಕೆ ನೀವು ಸಾಧ್ಯವಾದರೆ ಒಮ್ಮೆಯಾದರೂ ಭೇಟಿ ನೀಡಿ ಅದರಲ್ಲೂ ನಿಮ್ಮ ಮಕ್ಕಳ ಹಠ ಕಡಿಮೆ ಆಗುವುದಕ್ಕೆ, ಮಣ್ಣು ತಿನ್ನುವ ಹವ್ಯಾಸ ಕಡಿಮೆ ಆಗುವುದಕ್ಕೆ ಇಲ್ಲಿಗೆ ಬಂದು ಮಣ್ಣಿನ ಪ್ರಸಾದ ತಿನ್ನಿಸಿದರೆ ಪರಿಹಾರ ಸಿಗಬಹುದು.

AstrologyKannika ParameshwariTempleUttara Kannadaಜ್ಯೋತಿಷ್ಯಾಸ್ತ್ರ