Driving Licence Rules: ಗುಡ್ ನ್ಯೂಸ್, ಜೂನ್ 1ರಿಂದ ಡ್ರೈವಿಂಗ್ ಟೆಸ್ಟ್ ಕಡ್ದಾಯವಲ್ಲ; ಹೊಸ ರೂಲ್ಸ್ ಜಾರಿಗೆ ತಂದ RTO!

Driving Licence Rules: ಈ ಹಿಂದೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಬ್ಬರೂ ಕೂಡ ಡ್ರೈವಿಂಗ್ ಟೆಸ್ಟ್ ಅನ್ನು RTO ಕಚೇರಿಗೆ ಹೋಗಿ ನೀಡಬೇಕಾಗಿತ್ತು ಆದರೆ ಇನ್ನು ಮುಂದೆ ಅಂದರೆ ಜೂನ್ ಒಂದರ ನಂತರ ಹೊಸ ನಿಯಮಗಳು ಜಾರಿಗೆ ಬರ್ತಾ ಇದ್ದು ಇನ್ಮುಂದೆ ಈ ರೀತಿ ಅಲೆದಾಡಬೇಕಾದ ಅಗತ್ಯವಿಲ್ಲ ಎಂಬುದಾಗಿ ಸಾರಿಗೆ ಇಲಾಖೆ ಹೇಳಿಕೊಂಡಿದೆ. ಪ್ರತಿಯೊಬ್ಬರಿಗೂ ಕೂಡ ಹೆಚ್ಚಾಗಿ ಸಮಸ್ಯೆಯನ್ನು ಅನುಭವಿಸಬೇಕಾದ ಅಗತ್ಯ ಇರಬಾರದು ಎನ್ನುವ ಕಾರಣಕ್ಕಾಗಿ ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಬಹುದಾಗಿದೆ.

ಲೈಸೆನ್ಸ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆ!

ಇನ್ಮುಂದೆ ಲೈಸೆನ್ಸ್ ಪಡೆದುಕೊಳ್ಳುವುದಕ್ಕೆ ನೀವು RTO ಕಚೇರಿಯಲ್ಲಿ ಅಲುಗಾಡಬೇಕಾದ ಅಥವಾ ಅಲ್ಲಿ ಹೋಗಿ ಟೆಸ್ಟ್ ಪ್ರಕ್ರಿಯೆಗೆ ಒಳಗಾಗಬೇಕಾದ ಅಗತ್ಯ ಇರುವುದಿಲ್ಲ ಎಂಬುದಾಗಿ ಇಲಾಖೆ ತಿಳಿಸಿದೆ. RTO ಸಂಸ್ಥೆಯ ಮೇಲೆ ಇದ್ದಂತಹ ಭಾರ ಜವಾಬ್ದಾರಿ ಹಾಗೂ ಚಿಂತೆ ಎಲ್ಲಾ ಕೂಡ ಈ ಹೊಸ ನಿಯಮಗಳ ಕಾರಣದಿಂದಾಗಿ ಇಳಿದು ಹೋಗಿದೆ ಎಂದು ಹೇಳಬಹುದಾಗಿದೆ. ಇದರ ಜೊತೆಗೆ ಸರ್ಕಾರ ಲೈಸೆನ್ಸ್ ಪಡೆದುಕೊಳ್ಳಲು ಬೇಕಾಗಿರುವಂತಹ ಡಾಕ್ಯುಮೆಂಟ್ ವಿಚಾರದಲ್ಲಿ ಕೂಡ ಸಾಕಷ್ಟು ನೆಮ್ಮದಿ ನೀಡುವಂತಹ ಬದಲಾವಣೆಗಳನ್ನು ಜಾರಿಗೆ ತಂದಿದೆ ಎಂದು ತಿಳಿದುಬಂದಿದೆ.

ಮುಂದಿನ ದಿನಗಳಲ್ಲಿ ಅಂದರೆ ಜೀವನ ಒಂದರ ನಂತರ ನೀವು ಯಾವ ವಾಹನಕ್ಕೆ ಲೈಸೆನ್ಸ್ ಗೆ ಅಪ್ಲೈ ಮಾಡ್ತಿದ್ದೀರೋ ಅದರ ಆಧಾರದ ಮೇಲೆ ನಿಮ್ಮ ಬಳಿ ಡಾಕ್ಯೂಮೆಂಟ್ ಗಳನ್ನ ಇಲಾಖೆ ಕೇಳುತ್ತದೆ ಅನ್ನೋದನ್ನ ಈ ಮೂಲಕ ನೀವು ತಿಳಿದುಕೊಳ್ಳಬಹುದು.

ದಂಡದಲ್ಲಿ ಕೂಡ ವಿಶೇಷ ಪರಿವರ್ತನೆ!

ಯಾವುದೇ ಕಾರಣಕ್ಕೂ 18 ವರ್ಷದ ಒಳಗೆ ಇರುವಂತಹ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಇರುವ ಚಿಕ್ಕ ಮಕ್ಕಳು ವಾಹನವನ್ನು ಚಲಾಯಿಸುವ ಯಾವುದೇ ಅಧಿಕಾರ ಇರುವುದಿಲ್ಲ ಹಾಗೂ ಈ ರೀತಿ ಮಾಡಿದ್ರೆ ಅವರ ವಿರುದ್ಧ ಕಠಿಣ ಕ್ರಮವನ್ನು ಕೈ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಈ ರೀತಿ ಚಲಾಯಿಸಿದ್ದೆ ಆದಲ್ಲಿ ಅವರ ವಿರುದ್ಧ 25000 ರೂಪಾಯಿಗಳ ಫೈನ್ ವಿಧಿಸಲಾಗುತ್ತದೆ. ಈ ರೀತಿ ಸಿಕ್ಕಿಬಿದ್ರೆ ವಾಹನವನ್ನು ನೀಡಿರುವಂತಹ ಕಾರಿನ ಓನರ್ ರೆಜಿಸ್ಟ್ರೇಷನ್ ಹಾಗೂ ಲೈಸೆನ್ಸ್ ಎರಡು ಕೂಡ ರದ್ದಾಗುತ್ತದೆ. ಇನ್ನು ಆ ಹುಡುಗನಿಗೂ ಕೂಡ 25 ವರ್ಷಗಳ ಕಾಲ ಯಾವುದೇ ಕಾರಣಕ್ಕೂ ಲೈಸೆನ್ಸ್ ಅನ್ನು ನೀಡುವ ಹಾಗಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಟ್ರೈನಿಂಗ್ ಸೆಂಟರ್ ಗಳಿಗೆ ಹೊಸ ರೂಲ್ಸ್!

ಸರ್ಕಾರದ ಮಾಹಿತಿ ಪ್ರಕಾರ ದ್ವಿಚಕ್ರ ವಾಹನಗಳ ತರಬೇತಿಗಾಗಿ ಒಂದು ಎಕರೆ ಹಾಗೂ ನಾಲ್ಕು ಚಕ್ರ ವಾಹನಗಳ ತರಬೇತಿಗಾಗಿ ಎರಡು ಎಕರೆ ಜಾಗವನ್ನು ಮೀಸಲಾಗಿಸಬೇಕಾಗಿದೆ ಎಂಬುದನ್ನು ಕೂಡ ಟ್ರೈನಿಂಗ್ ಸೆಂಟರ್ ನವರಿಗೆ ತಿಳಿಸಿದೆ. ಇನ್ನು ಇಲ್ಲಿ ಟೆಸ್ಟಿಂಗ್ ಗಾಗಿ ಬೇಕಾಗಿರುವಂತಹ ಪ್ರತಿಯೊಂದು ಸೌಕರ್ಯ ಹಾಗೂ ಉಪಕರಣಗಳು ಇವೆ ಎನ್ನುವುದನ್ನು ಮೊದಲಿಗೆ ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಶುಲ್ಕ

ಶುಲ್ಕದ ವಿಚಾರದ ಬಗ್ಗೆ ಮಾತನಾಡುವುದಾದರೆ 150 ರೂಪಾಯಿಗಳ ಶುಲ್ಕವನ್ನು ಕಟ್ಟಬೇಕಾಗಿರುತ್ತದೆ. ಇದು LLR ನೀಡಬೇಕಾಗಿರುವ ಶುಲ್ಕವಾಗಿದೆ.

ಇನ್ನು ಜೂನ್ ಒಂದನೇ ತಾರೀಖಿನಿಂದ ಜಾರಿಗೆ ತರುವುದರ ಮೂಲಕ ರಸ್ತೆ ಮೇಲೆ ಸಲ್ಲಿಸುತ್ತಿರುವ ವಾಹನಗಳ ಸವಾರರಲ್ಲಿ ಒಂದು ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎನ್ನಬಹುದಾಗಿದೆ.

Driving Licence Rules