Dubai: ದುಬೈನಲ್ಲಿ ಒಬ್ಬ ಇಂಜಿನಿಯರ್ ತಿಂಗಳಿಗೆ ಎಷ್ಟು ಹಣವನ್ನು ಸಂಪಾದನೆ ಮಾಡಬಹುದು ಗೊತ್ತಾ? ಗೊತ್ತಾದ್ರೆ ನೀವ್ ನೀರ್ ಕುಡಿಯೋದ್ ಗ್ಯಾರಂಟಿ!

Dubai: ನಮ್ಮ ದೇಶವೇ ಆಗಲಿ ಅಥವಾ ಪ್ರತಿಯೊಬ್ಬ ದೇಶದ ವ್ಯಕ್ತಿ ಕೂಡ ಜೀವನದಲ್ಲಿ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಎಲ್ಲಿಗಾದರೂ ಹೋಗಿ ಕೆಲಸ ಮಾಡಿ ದುಡಿದು ತನ್ನ ಜೀವನವನ್ನು ಸರಿಪಡಿಸಿಕೊಳ್ಳಬಹುದೇ ಎನ್ನುವುದಾಗಿ ಆಸಕ್ತಿಯನ್ನು ಹೊಂದಿದ್ದಾರೆ ಅಂದ್ರೆ ಅದು ಕೇವಲ ದುಬೈ ಮಾತ್ರ. ದುಬೈನಲ್ಲಿ ಬೇರೆ ಸ್ಥಳಗಳಿಗೆ ಹೋಲಿಸಿದರೆ ಸಿಗುವಂತಹ ಆದಾಯ ಹೆಚ್ಚು ಎಂದು ಹೇಳಬಹುದಾಗಿದೆ. ಒಂದು ಕಾಲದಲ್ಲಿ ದುಬೈ ಕೇವಲ ಮರುಭೂಮಿಯಾಗಿತ್ತು ಆದರೆ ಇಂದು ಯಾವ ರೀತಿಯಲ್ಲಿ ವೇಗವಾಗಿ ಬೆಳೆದು ನಿಂತಿರುವಂತಹ ನಗರವಾಗಿದೆ ಅನ್ನೋದನ್ನು ವಿಶೇಷವಾಗಿ ನಿಮಗೆ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ.

ಇನ್ನು ಇಲ್ಲಿ ಕೆಲಸಕ್ಕಾಗಿ ಬರುವಂತಹ ಬಹುತೇಕ ಜನರು ಭಾರತೀಯರು ಮತ್ತೊಂದು ವಿಶೇಷವಾಗಿದೆ. ಬೇರೆ ಬೇರೆ ರೀತಿಯ ಕೆಲಸಗಳು ಇಲ್ಲಿ ನಿಮಗೆ ದೊರಕುತ್ತದೆ. ಯಾವುದೇ ಕೆಲಸ ಆಗಿರಲಿ ಭಾರತದಲ್ಲಿ ದುಡಿಯೋದಕ್ಕಿಂತ ಹೆಚ್ಚಾಗಿ ಆ ಹಣವನ್ನು ನೀವು ದುಬೈಯಲ್ಲಿ ದುಡಿಯೋದಕ್ಕೆ ಸಾಧ್ಯವಿದೆ. ನಮ್ಮ ಭಾರತ ದೇಶ ಪ್ರತಿ ವರ್ಷ ಸಾಕಷ್ಟ್ ಡಾಕ್ಟರ್ ಎಂಜಿನಿಯರ್ ಗಳ ಪ್ರೊಡ್ಯೂಸ್ ಮಾಡುತ್ತಲೇ ಇರುತ್ತದೆ ಆದರೆ ಅವರಿಗೆ ಸರಿಯಾದ ಕೆಲಸ ಭಾರತದಲ್ಲಿ ಸಿಕ್ಕೆ ಸಿಗುತ್ತೆ ಅನ್ನೋದನ್ನ ಹೇಳಲಿಕ್ಕೆ ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರುವುದು ಒಬ್ಬ ಇಂಜಿನಿಯರ್ ದುಬೈನಲ್ಲಿ ಎಷ್ಟು ಹಣವನ್ನು ಸಂಪಾದನೆ ಮಾಡಬಹುದು ಎನ್ನುವುದರ ಬಗ್ಗೆ.

ದುಬೈನಲ್ಲಿ ಒಂದು ತಿಂಗಳಿಗೆ ಒಬ್ಬ ಇಂಜಿನಿಯರ್ ಎಷ್ಟು ಹಣವನ್ನು ಸಂಪಾದನೆ ಮಾಡಬಹುದು?

ಕೆಲವೊಂದು ರಿಸರ್ಚ್ಗಳ ಪ್ರಕಾರ ದುಬೈನಲ್ಲಿ ಇಂಜಿನಿಯರ್ ಗಳು 8833 ದಿನರ್ಗಳನ್ನ ದುಡಿತಾರೆ ಅನ್ನೋದಾಗಿ ತಿಳಿದು ಬಂದಿದೆ. ಇದನ್ನ ಭಾರತದ ರೂಪಾಯಿ ಕನ್ವರ್ಟ್ ಮಾಡಿದರೆ 2 ಲಕ್ಷ ರೂಪಾಯಿಗಳಿಗಿಂತಲೂ ಕೂಡ ಹೆಚ್ಚಾಗಿರುತ್ತದೆ. ಇದು ಆರಂಭಿಕವಾಗಿ ಅವರು ಪಡೆದುಕೊಳ್ಳುವಂತಹ ಸಂಬಳವಾಗಿದೆ ಆದರೆ ಬೇಡಿಕೆ ಹಾಗೂ ಅಗತ್ಯತೆ ಹೆಚ್ಚಾದಂತೆ ಇನ್ನಷ್ಟು ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಇಂತಹ ಹೆಚ್ಚಿನ ಹಣವನ್ನು ದುಡಿಯುವ ಅವಕಾಶ ಭಾರತ ದೇಶಕ್ಕಿಂತ ಹೆಚ್ಚಾಗಿ ದುಬೈಯಲ್ಲಿ ಇರುತ್ತದೆ ಎಂದು ಸಾಕಷ್ಟು ಜನರು ದುಬೈಗೆ ಬರುತ್ತಾರೆ.

ದುಬೈ ದೇಶದಲ್ಲಿ ದುಡಿಯುವಂತಹ ಅವಕಾಶ ಸಾಕಷ್ಟಿದೆ ಹೀಗಾಗಿ ಇಂಜಿನಿಯರ್ಗಳು ಸೇರಿದಂತೆ ಚಿಕ್ಕಪುಟ್ಟ ವರ್ಗದ ಕೆಲಸಗಾರರು ಕೂಡ ದುಬೈ ದೇಶಕ್ಕೆ ತಮ್ಮನ ಹೇಗಾದರೂ ಮಾಡಿ ಹೋಗುವಂತೆ ಮಾಡಬೇಕು ಎಂಬುದಾಗಿ ಸಾಲ ಸೋಲ ಮಾಡಿ ವೀಸಾ ಹಾಗೂ ಪಾಸ್ಪೋರ್ಟ್ ಮಾಡಿಸಿಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ಕೆಲವರಿಗೆ ಏಳೇಳು ಊರು ಸುತ್ತಿದ ಮೇಲೂ ಕೂಡ ನಮ್ಮೂರೇ ನಮಗೆ ಮೇಲು ಎನ್ನುವ ರೀತಿಯಲ್ಲಿ ಊರಿನಲ್ಲಿ ಕೆಲಸ ಮಾಡಿ ನೆಮ್ಮದಿಯಲ್ಲಿ ಇರುವಂತಹ ಜೀವನ ಶೈಲಿಯನ್ನು ಕೂಡ ಹೊಂದಿರುತ್ತಾರೆ. ಆದರೆ ಕೆಲವೊಮ್ಮೆ ಕುಟುಂಬದಲ್ಲಿ ಸಾಲದ ಹೊರ ಹೆಚ್ಚಾದಾಗ ಈ ರೀತಿಯ ನಿರ್ಧಾರವನ್ನು ಕೆಲವರು ಮಾಡಲು ಜಾಸ್ತಿ ಆಗಿರುತ್ತದೆ ಹೀಗಾಗಿ ಅಂತಹ ವ್ಯಕ್ತಿಗಳು ದುಬೈ ಅನ್ನು ದುಡಿಯೋದಕ್ಕೆ ತಮ್ಮ ಮೊದಲ ಆಯ್ಕೆಯನ್ನಾಗಿ ಮಾಡುತ್ತಾರೆ.

Dubai