Kannada Recipe: ಘಮಘಮಿಸುವ ದೇಸಿ ತುಪ್ಪ ಹಾಕಿ ಈ ರೀತಿ ಚಿಕನ್ ಘೀ ರೋಸ್ಟ್ ಮಾಡಿ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು! ಮಾಡಿದವರಿಗೆ ವಿಶೇಷ ಉಡುಗೊರೆ ಸಿಕ್ಕರೂ ಸಿಗಬಹುದು! ರೆಸಿಪಿ ಇಲ್ಲಿದೆ!

Kannada Recipe: ನಾನ್ ವೆಜ್ (Non veg) ಪ್ರಿಯರಿಗೆ ಅತೀ ಇಷ್ಟವಾಗುವ ಡಿಶ್ ಅಂದ್ರೆ ಚಿಕನ್ ಘೀ ರೋಸ್ಟ್ (Easy Chicken ghee roast recipe) . ಸಾಕಷ್ಟು ಜನ ರೆಸ್ಟೋರೆಂಟ್ ಗೆ ಹೋದ್ರೆ ಚಿಕನ್ ಘೀ ರೋಸ್ಟ್ ಆರ್ಡರ್ ಮಾಡುತ್ತಾರೆ. ಇನ್ಮೇಲೆ ಅಲ್ಲಿ ಇಲ್ಲಿ ತಿನ್ನೋದು ಬೇಡ ಮನೆಯಲ್ಲಿಯೇ ಸಕ್ಕತ್ತಾಗಿ ಘೀ ರೋಸ್ಟ್ ಮಾಡಬಹುದು. ಅದರಲ್ಲೂ ಘಮಘಮಿಸುವ ದೇಸಿ ತುಪ್ಪ ಹಾಕಿದ್ರಂತೂ ಸ್ವರ್ಗಕ್ಕೆ ಮೂರೇ ಗೇಣು!

ಚಿಕನ್ ಘೀ ರೋಸ್ಟ್ ಮಾಡಲು ಬೇಕಾಗುವ ಪದಾರ್ಥಗಳು:

ಸಣ್ಣ ತುಂಡುಗಳಾಗಿ ಕತ್ತರಿಸಿದ ಚಿಕನ್ ಬ್ರೆಸ್ಟ್ – 1

ಮೂರು ಚಮಚ ಮೊಸರು

ಅರ್ಧ ಚಮಚ ಅರಿಶಿನ

ಒಂದು ಚಮಚ ನಿಂಬೆ ರಸ

5-10 ಕರಿಬೇವಿನ ಎಲೆ

ಒಂದು ತುಂಡು ಬೆಲ್ಲ

3-4 ಚಮಚ ತುಪ್ಪ

ರುಚಿಗೆ ತಕ್ಕಷ್ಟು ಉಪ್ಪು

ಮಸಾಲೆಗೆ ಬೇಕಾಗುವ ವಸ್ತುಗಳು:

ಆರು ಒಣ ಮೆಣಸು

ಕಾಳು ಮೆಣಸು ಒಂದು ಚಮಚ

ಎರಡು ಲವಂಗ

ಎರಡು ಚಮಚ ಕೊತ್ತಂಬರಿ

ಒಂದು ಚಮಚ ಮೆಂತ್ಯ, ಜೀರಿಗೆ

ನಾಲ್ಕು ಎಸಳು ಬೆಳ್ಳುಳ್ಳಿ

ಒಂದು ಚಮಚ ಹುಣಸೆಹಣ್ಣಿನ ಪೇಸ್ಟ್

ಮಾಡುವ ವಿಧಾನ:

ಆರಂಭದಲ್ಲಿ ಚಿಕನ್ ಸ್ವಚ್ಛಗೊಳಿಸಿ. ಈಗ ಒಂದು ದೊಡ್ದ ಪಾತ್ರೆಯಲ್ಲಿ ಮೊಸರು, ಅರಿಶಿನ ಹಾಗೂ ನಿಂಬೆ ರಸವನ್ನು ಹಾಕಿ, ಅದಕ್ಕೆ ತೊಳೆದ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇದರಿಂದ ಚಿಕನ್ ಒಗರು ಹಾಗೂ ಹಸಿ ವಾಸನೆ ಕಡಿಮೆ ಆಗುತ್ತದೆ. 1 ಗಂಟೆ ಈ ಮಿಶ್ರಣವನ್ನು ಹಗೆಯೇ ಬಿಡಿ.

ಒಂದು ಬಾಣಲೆಯನ್ನು ಬಿಸಿ ಮಾಡಿ, ಅದಕ್ಕೆ ಒಣ ಮೆಣಸು, ಮೆಂತ್ಯ, ಜೀರಿಗೆ, ಕೊತ್ತಂಬರಿ, ಲವಂಗ ಮತ್ತು ಕಾಳುಮೆಣಸು ಹಾಕಿ ಹುರಿದುಕೊಳ್ಳಿ. ಬಳಿಕ ಗ್ಯಾಸ್ ಸ್ಟೌ ಆಫ್ ಮಾಡಿ, ಹುರಿದ ಮಸಾಲೆ ಪದಾರ್ಥಗಳನ್ನು ತಣಿಯಲು ಬಿಡಿ. ಮಸಾಲೆ ಪದಾರ್ಥಗಳು ತಣ್ಣಗಾದ ಬಳಿಕ ಒಂದು ಮಿಕ್ಸರ್ ಜಾರ್ ಗೆ ಬೆಳ್ಳುಳ್ಳಿ, ಹುಣಸೆಹಣ್ಣಿನ ಪೇಸ್ಟ್ ಹಾಗೂ ಸ್ವಲ ನೀರು ಸೇರಿಸಿ. ಅದಕ್ಕೆ ಹುರಿದ ಮಸಾಲೆಯನ್ನೂ ಹಾಕಿ ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ.

ಈಗ ಒಂದು ಕಡಾಯಿಯನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ಬಳಿಕ ಕರಿಬೇವಿನ ಎಲೆ ಹಾಕಿ ಬಾಡಿಸಿ. ಈಗ ನೆನೆಸಿಟ್ಟುಕೊಂಡ ಚಿಕನ್ ಮಿಶ್ರಣವನ್ನು ಕಡಾಯಿಗೆ ಹಾಕಿ ಚೆನ್ನಾಗಿ ಬೇಯಿಸಿ. ಬಳಿಕ ರುಬ್ಬಿದ ಮಸಾಲೆ ಪೇಸ್ಟ್ ಸೇರಿಸಿ ಮಿಶ್ರಣ ಮಾಡಿ. ತುಪ್ಪ ಚಿಕನ್ ನಿಂದ ಬೇರ್ಪಡುವವರೆಗೂ ಬೇಯಿಸಿ. ಅಗತ್ಯವಿದ್ದರೆ ಇನ್ನೂ ಸ್ವಲ್ಪ ತುಪ್ಪ ಸೇರಿಸಿಕೊಳ್ಳಬಹುದು.  ಕೊನೆಗೆ ರುಚಿಗೆ ತಕ್ಕಷು ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಮಿಶ್ರಣ ಮಾಡಿ. ಐದು ನಿಮಿಷ ಬೇಯಿಸಿ ಗ್ಯಾಸ್ ಆಪ್ ಮಾಡಿದರೆ ರುಚಿಯಾದ, ಘಮ ಘಮ ಎನ್ನುವ ಚಿಕನ್ ಘೀ ರೋಸ್ಟ್ ಸವಿಯಲು ಸಿದ್ಧ. ಅನ್ನ, ಚಪಾತಿ ಅಥವಾ ನೀರುದೋಸೆ ಜೊತೆಗೆ ಸವಿಯಿರಿ.

ChickenEasy Chicken ghee roast recipeHealthy foodLifestyleಚಿಕನ್ಮನೆ ಅಡುಗೆ