Kannada Recipe: ಬಿಗ್  ಬಾಸ್ ಮನೆಯಲ್ಲಿ ಚಿಕನ್ ಗೆ ಆಸೆ ಪಡ್ತಿದ್ದ ಕಾವ್ಯಶ್ರೀ ಅವರ ಫೇವರೆಟ್ ಡಿಶ್ ಈ ಚಿಕನ್‌ ಸ್ನಾಕ್ಸ್; ನೀವು ಮನೆಯಲ್ಲಿಯೇ ಟ್ರೈ ಮಾಡಿ ನೋಡಿ!!

Kannada Recipe: ಮಾಂಸಹಾರ (Nonveg) ಇಷ್ಟಪಡುವವರಿಗೆ ಸ್ವಲ್ಪ ಬಾಯಿ ರುಚಿ ಜಾಸ್ತಿ. ಹೊಸತೇನಾದ್ರೂ ಟ್ರೈ ಮಾಡ್ತಾನೆ ಇರಬೇಕು ಎನ್ನಿಸುತ್ತೆ. ಎಲ್ಲಿಯಾದರೂ ಚಿಕನ್ (Chicken)  ಐಟಂ ಸಕ್ಕತಾಗಿದೆ ಎಂದು ಹೇಳಿದ್ರೆ ಎಷ್ಟು ದೂರ ಪ್ರಯಾಣವಾದ್ರೂ ಸರಿ ಹೋಗಿ ತಿಂದು ಬರುವ ಕ್ರೇಜಿ ಜನರಿದ್ದಾರೆ. ಆದರೆ ನೀವು ಮನೆಯಲ್ಲಿ ಈ ತರಹದ ಒಂದು ಚಿಕನ್ ಸ್ನಾಕ್ಸ್ (Chicken snacks)  ಮಾಡಿಕೊಂಡು ತಿಂದ್ರೆ ನೀವು ಬೇರೆಲ್ಲೋ ಹೋಗಿ ತಿನ್ನುವ ನಿಮ್ಮ ಅಭ್ಯಾಸಕ್ಕೆ ಬ್ರೇಕ್ ಹಾಕ್ತೀರಾ. ಮನೆಯಲ್ಲಿಯೇ ಮತ್ತೆ ಮತ್ತೆ ಇದನ್ನ ಮಾಡಿಕೊಂಡು ತಿಂತಿರಾ. ಹಾಗಾದರೆ ಈ ರೆಸಿಪಿ (Recipe) ಮಾಡೋದು ಹೇಗೆ ನೋಡೋಣ.

Kannada Recipe: ಬಿಗ್  ಬಾಸ್ ಮನೆಯಲ್ಲಿ ಚಿಕನ್ ಗೆ ಆಸೆ ಪಡ್ತಿದ್ದ ಕಾವ್ಯಶ್ರೀ ಅವರ ಫೇವರೆಟ್ ಡಿಶ್ ಈ ಚಿಕನ್‌ ಸ್ನಾಕ್ಸ್; ನೀವು ಮನೆಯಲ್ಲಿಯೇ ಟ್ರೈ ಮಾಡಿ ನೋಡಿ!! https://sihikahinews.com/amp/easy-chicken-majestic-recipe/

ಚಿಕನ್ ಸ್ನಾಕ್ಸ್ ಮಾಡಲು ಬೇಕಾಗಿರುವ ಐಟಂ ಯಾವವು ಗೊತ್ತಾ?

ಕಾಲು ಕೆಜಿ ಬೋನ್‌ಲೆಸ್‌ ಚಿಕನ್

ಅರ್ಥ ಬೌಲ್ ಮಜ್ಜಿಗೆ

ಅರ್ಧ ಚಮಚ ಜೋಳದ ಹಿಟ್ಟು (ಕಾರ್ನ್‌ ಫ್ಲೋರ್)

ಅರ್ಧ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಚಿಟಿಕೆ ಅರಿಶಿನ

ಅರ್ಧ ಚಮಚ ಖಾರದ ಪುಡಿ

 ರುಚಿಗೆ ತಕ್ಕ ಉಪ್ಪು

ಸ್ವಲ್ಪ ಸಾಸ್‌

ನಾಲ್ಕೈದು ಬೆಳ್ಳುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)

ಸ್ವಲ್ಪ ಕರಿಬೇವು

 ಪುದೀನಾ ಎಲೆಗಳು

1 ಚಮಚ ಸೋಯಾ ಸಾಸ್‌

ಅರ್ಧ ಚಮಚ ಗರಂ ಮಸಾಲ

ಚಿಕನ್ ಸ್ನಾಕ್ಸ್ ಮಾಡೋದು ಹೇಗೆ ಗೊತ್ತಾ?

ಮೊದಲಿಗೆ ಬೋನ್ ಲೆಸ್ ಚಿಕನ್‌ ಅನ್ನು ಮಜ್ಜಿಗೆಯಲ್ಲಿ ನಾಲ್ಕು ಗಂಟೆ ಕಾಲ ನೆನೆಸಿಡಿ. ನಂತರ ಅದನ್ನು ಸೋಸಿ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಕಾರ್ನ್ ಪ್ಲೋರ್, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಈಗ ಒಂದು ಬಾಣಲೆಹೆ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಚಿಕನ್ ಪೀಸ್ ನ್ನು ಎಣ್ಣೆಯಲ್ಲಿ ಡೀಪ್‌ ಫ್ರೈ ಮಾಡಿ.  ಪ್ಯಾನ್‌ ಫ್ರೈ ಕೂಡ ಮಾಡಬಹುದು. ಮಸಾಲೆ ಮಾಡಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಹಸಿ ಮೆಣಸು, ಕರಿಬವು ಹಾಕಿ ಫ್ರೈ ಮಾಡಿ, ಬೆಳ್ಳುಳ್ಳಿ ಯನ್ನು ಹಾಕಿ ಹುರಿಯಿರಿ. ನಂತರ ಈಗ ಪುದೀನಾ ಎಲೆ, ಖಾರದ ಪುಡಿ, ಗರಂ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ  ಮೊಸರನ್ನು ಹಾಕಿ, ಪ್ಯಾನ್ ನಲ್ಲಿ ಮಿಶ್ರಣ ಸ್ವಲ್ಪ ಗಟ್ಟಿಯಾದಾಗ, ಸೋಯಾ ಸಾಸ್‌ ಹಾಕಿ. ಈಗ ಫ್ರೈ ಮಾಡಿಟ್ಟ ಚಿಕನ್‌ ಹಾಕಿ ಡ್ರೈಆಗಿ ಮಿಕ್ಸ್ ಮಾಡಿದ್ರೆ ರುಚಿಕರವಾದ ಚಿಕನ್ ಸ್ನಾಕ್ಸ್ ರೆಡಿ.

Easy chicken majestic recipeHealthy foodLifestyleRecipe