Easy Recipe: ಸೀತಾಫಲದಿಂದ ಮಾಡಿ ರುಚಿಯಾದ, ಬಾಯಲ್ಲಿ ನೀರೂರಿಸುವ ಪಾಯಸ ಮಾಡೋದು ಹೇಗೆ ಗೊತ್ತಾ?

Easy Recipe: ಭಾರತೀಯರಿಗೆ ಸಿಹಿ ತಿಂಡಿಗಳಲ್ಲಿ ಪಾಯಸ ಅಚ್ಚುಮೆಚ್ಚು. ಯಾವುದೇ ಶುಭ ಸಮಾರಂಭಗಳಲ್ಲಿ ಅಥವಾ ಯಾವುದೇ ಸಂತೋಷದ ವಿಚಾರಗಳನ್ನು ಹಂಚಿಕೊಳ್ಳುವಾಗಲೂ ಪಾಯಸದಂತಹ ಸಿಹಿಯನ್ನು ಹಂಚಿಕೊಂಡು ಸಂಭ್ರಮವನ್ನು ಹೆಚ್ಚಿಸಿಕೊಳ್ಳುತ್ತೇವೆ. ಇನ್ನು ಪಾಯಸದಲ್ಲಿ ಅದೆಷ್ಟು ಭಗೆ ಇರಬಹುದು ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಅದರಲ್ಲೂ ಆಯಾ ಸೀಸನ್ ನ ಹಣ್ಣು ಸಿಗುವ ಸಮಯದಲ್ಲಿ ಆ ಹಣ್ಣಿನ ಪಾಯಸ ಮಾಡಿಕೊಂಡು ತಿಂದುಬಿಡಬೇಕು. ಇದು ಆರೋಗ್ಯಕ್ಕೂ ಒಳ್ಳೆಯದು. ಬಾಯಿ ರುಚಿಯನ್ನು ಕೂಡ ಹೆಚ್ಚಿಸುತ್ತೆ. ಹಾಗಾದ್ರೆ ಇನ್ಯಾಕೆ ತಡ ಈಗಲೇ ಒಂದು ರುಚಿಯಾದ, ಸಕ್ಕತ್ ಆಗಿರುವ ಸೀತಾಫಲ (Custard apple) ಹಣ್ಣಿನ ಪಾಯಸ ಮಾಡಿಬಿಡೋಣ.

Easy Recipe: ಸೀತಾಫಲದಿಂದ ಮಾಡಿ ರುಚಿಯಾದ, ಬಾಯಲ್ಲಿ ನೀರೂರಿಸುವ ಪಾಯಸ ಮಾಡೋದು ಹೇಗೆ ಗೊತ್ತಾ? https://sihikahinews.com/amp/easy-recipe-custard-apple-payasam/

ಸೀತಾಫಲ ಹಣ್ಣಿನ ಪಾಯಸ ಮಾಡಲು ಬೇಕಾಗುವ ಸಾಮಗ್ರಿಗಳು:

ಒಂದು ಚೆನ್ನಾಗಿ ಹಣ್ಣಾದ ಸೀತಾಫಲ

ಸಕ್ಕರೆ ಅರ್ಧ ಬಟ್ಟಲು

ಕೋವ ಒಂದು ಚಮಚ

ಬಾದಾಮಿ, ಗೋಡಂಬಿ ಹಾಗೂ ದ್ರಾಕ್ಷಿ ತಲಾ ಒಂದು ಚಮಚ

ಹಾಲು ಅರ್ಧ ಲೀಟರ್

ಏಲಕ್ಕಿ ಪುಡಿ ಸ್ಪಲ್ಪ

ಮಾಡುವ ವಿಧಾನ (How to prepare);

ಮೊದಲಿಗೆ ಸೀತಾಫಲ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ. ನೀವು ಮಿಕ್ಸರ್ ಜಾರ್ ಗೆ ಹಾಕಿ ಸ್ವಲ್ಪ ರುಬ್ಬಿದರೆ ಸೀತಾಫಲ ಹಣ್ಣಿನ ಬೀಜವನ್ನು ಬಿಡಿಸಬಹುದು. ಆದರೆ ಒಂದೇ ಸಲ ರುಬ್ಬಬಾರದು. ಅಥವಾ ಒಂದು ಬೌಲ್ ನ ಮೇಲೆ ಜಾಲರಿ ಸೌಟ್ ಇಟ್ಟುಕೊಂಡು ಅದಕ್ಕೆ ಹಣ್ಣಿನ ತಿರುಳನ್ನು ಹಾಕಿ ಇನ್ನೊಂದು ಸೌಟ್ ಅತಹ್ವಾ ವಿಕ್ಸರ್ ನಿಂದ ಮಿಕ್ಸ್ ಮಾಡುತ್ತಾ ಬಂದರೆ ತಿರುಳು ಬೌಲ್ ನಲ್ಲಿ ಸಂಗ್ರಹವಾಗುತ್ತದೆ. ಉಳಿದ ಬೀಜಗಳನ್ನು ಕೈನಲ್ಲಿಯೆ ತೆಗೆಯಬಹುದು.

ಈಗ ಒಂದು ದೊಡ್ಡ ಪಾತ್ರೆಯನ್ನ ಬಿಸಿಗೆ ಇಟ್ಟು ಅದಕ್ಕೆ ಹಾಲನ್ನು ಹಾಕಿ ಕುದಿಸಿ, ಹಾಲು ಕೆನೆ ಕಟ್ಟಿಕೊಳ್ಳದ ಹಾಗೆ ಮಿಕ್ಸ್ ಮಾಡುತ್ತೀರಿ. ನಂತರ ಡ್ರೈ ಫ್ರೂಟ್ಸ್ ನ್ನು ಹಾಕಿ ಮಿಕ್ಸ್ ಮಾಡಿ. ಇದನ್ನೂ ಓದಿ:Lifestyle: ಚಳಿಗಾಲದಲ್ಲಿ ಮೊಸರು ತಿಂದ್ರೆ ನೆಗಡಿ ಆಗತ್ತಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ!

ಈಗ ಕೋವಾ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಕೇಸರಿ ದಳಗಳನ್ನೂ ಹಾಕಬಹುದು. ಕೊನೆಯಲ್ಲಿ ಸೀತಾಫಲ ಹಣ್ಣಿನ ತಿರುಳನ್ನು ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಸೀತಾಫಲ ಹಣ್ಣಿನ ಪಾಯಸ ಸವಿಯಲು ಸಿದ್ಧ. ಇದನ್ನು ಬಿಸಿ ಬಿಸಿಯಾಗಿಯೂ ಚಳಿಗಾಲದಲ್ಲಿ ತಿನ್ನಬಹುದು ಅಥವಾ ಫ್ರಿಡ್ಜ್ ನಲ್ಲಿಟ್ಟು ತಂಪಾಗಿಸಿಕೊಂಡು ತಿನ್ನಬಹುದು.

custard apple payasamHealthy foodLifestyleRecipeಅಡುಗೆ ಮನೆ