Kannada Recipe: ನಾಳೆ ಬೆಳಿಗ್ಗೆ ಏನು ತಿಂಡಿ ಮಾಡೋದು ಅಂತ ಯೋಚನೆನಾ? ಚಿಂತೆನೇ ಬೇಡ ಸುಲಭವಾಗಿ ಹೀಗೆ ಹೆಸರು ಬೇಳೆ ದೋಸೆ ಮಾಡಿ ಮನೆಯವರು ಚಪ್ಪರಿಸಿಕೊಂಡು ತಿಂತ್ತಾರೆ ನೋಡಿ!

Kannada Recipe: ದಿನಾ ಹೆಂಗಸರಿಗೆ ಇದೇ ಯೋಚನೆ ಬೆಳಿಗ್ಗೆ ತಿಂಡಿ ಏನ್ ಮಾಡೋದು? ತಿಂಡಿ ರುಚಿಯಾಗಿಯೂ ಇರಬೇಕು ಆರೋಗ್ಯಕರವಾಗಿಯೂ ಇರಬೇಕು. ಆದರೆ ದಿನವೂ ಒಂದೇ ರೀತಿಯಾದ ತಿಂಡಿ ತಿನ್ನುವುದಕ್ಕೆ ಬೇಸರ ಅಲ್ವೇ? ಹಾಗಾದರೆ ಚಿಂತೆ ಬೇಡ. ಸುಲಭವಾಗಿ ಹೆಸರು ಬೇಳೆ ದೋಸೆ(Moog Dal)  ಮಾಡೋದು ಹೇಗೆ ಎನ್ನುವ ರೆಸಿಪಿ(Recipe) ಇಲ್ಲಿದೆ ನೋಡಿ.

ಹೆಸರು ಬೇಳೆ ದೋಸೆ(Moog Dal Dosa) ಮಾಡಲು ಬೇಕಾಗುವ ಸಾಮಗ್ರಿಗಳು:

ಒಂದು ಕಪ್ ಹೆಸರು ಬೇಳೆ (Moong Dal)

ಹಸಿ ಮೆಣಸು 1-2 (Chilli)

ಒಂದು ಇಂಚು ಶುಂಠಿ (Ginger)

ಒಂದು ಚಮಚ ಜೀರಿಗೆ (cumin seeds)

ಕಾಲು ಚಮಚ ಅರಿಶಿನ (Turmeric)

ಸ್ವಲ್ಪ ಕೊತ್ತಂಬರಿ ಸೊಪ್ಪು (Aoriander leavs)

ಚಿಟಿಕೆ ಇಂಗು (Asafoetida)

ಒಂದು ಚಮಚ ಉಪ್ಪು(Salt)

ಎಣ್ಣೆ  ದೋಸೆ ಕಾಯಿಸಲು(Oil)

ದೋಸೆ ಮಾಡುವ ವಿಧಾನ(Preparation):

ಮೊದಲಿಗೆ ಪಾತ್ರೆಗೆ  ಹೆಸರು ಬೇಳೆಯನ್ನು ಹಾಕಿ ಚೆನ್ಣಾಗಿ ತೊಳೆದು ಬೇಳೆ, ಮುಳುಗುವಷ್ಟು ನೀರು ಹಾಕಿ 3 ಗಂಟೆಗಳ ಕಾಲ (3 Hours) ನೆನೆಸಿಟ್ಟುಕೊಳ್ಳಿ. ಬೇಳೆ ನೆನೆದ ಬಳಿಕ ನೀರನ್ನು ಸೋಸಿ ಹೆಸರು ಬೇಳೆಯನ್ನು ಮಿಕ್ಸರ್ ಜಾರ್‌ಗೆ ಹಾಕಿ. ಇದಕ್ಕೆಹಸಿ ಮೆಣಸು, ಶುಂಠಿ ಮತ್ತು ಜೀರಿಗೆ ಸೇರಿಸಿ, ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಅರಿಶಿನ, ಸಣ್ಣದಾಗಿ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು, ಇಂಗು ಮತ್ತು  ಒಂದು ಚಮಚ ಅಥವಾ ನಿಮ್ಮ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ:ಇಂತಹ ಚಟ್ನಿಯನ್ನು ನೀವು ತಿಂದಿರಲಿಕ್ಕಿಲ್ಲ; 5 ನಿಮಿಷದಲ್ಲಿ ಮಾಡಬಹುದಾದ ಚಟ್ನಿ ಮಾಡೋದು ಹೇಗೆ ಗೊತ್ತಾ?

ಈಗ ಬ್ಯಾಟರ್ (Batter) ಸಿದ್ಧವಾಗಿದೆ. ಒಂದು ತವಾವನ್ನು ಗ್ಯಾಸ್ ಸ್ಟೋವ್ ಮೇಲಿಟ್ಟು ಬಿಸಿ ಮಾಡಿ, ಒಂದು ಸೌಟು ಹಿಟ್ಟನ್ನು ತವಾ ಮೇಲೆ ಹಾಕಿ ದೋಸೆ ಮಾಡಿ. ದೋಸೆಯ ಮೇಲೆ ಸ್ವಲ್ಪ ಎಣ್ಣೆ ಹಾಕಿ, ತವಾವನ್ನು ಮುಚ್ಚಿ, 1 ನಿಮಿಷಗಳ ಕಾಲ ಬೇಯಿಸಿ. ಮುಚ್ಚಳ ತೆಗೆಯಿರಿ. ನಂತರ ದೋಸೆಯನ್ನು ಮತ್ತೊಂದು ಮಗಲು ಮರಚಿ ಅದನ್ನೂ ಬೇಯಿಸಿ. ಇದೀಗ ರುಚಿಯಾದ ಹೆಸರು ಬೇಳೆ ದೋಸೆ ಸವಿಯಲು ಸಿದ್ಧ. ನಿಮಗಿಷ್ಟವಾದ  ಚಟ್ನಿಯ ಜೊತೆಗೆ ಸವಿಯಿರಿ.

dosadoseeasy recipekarnataka recipeMoogDalTasty foodದೋಸೆ ರೆಸಿಪಿ