Election: ಕೊನೆಗೂ ಬಯಲಾಯ್ತು ಸತ್ಯ, ಸಿದ್ಧರಾಮಯ್ಯ 500 ರೂ. ಕೊಟ್ಟು ಜನರನ್ನು ಕರೆತರಬೇಕು ಎಂದಿದ್ದು ಯಾಕೆ ಗೊತ್ತೇ? ಕಾಂಗ್ರೆಸ್ ಗೆ ಇದರಿಂದ ಏನಾಗಿದೆ ಗೊತ್ತೇ?

 Election: ಚುನಾವಣೆಯ ಬಿಸಿ ಜೋರಾಗಿದೆ ಎಲ್ಲಾ ಕಡೆ ಪ್ರಚಾರ ಕಾರ್ಯಗಳು ನಡೆಯುತ್ತಿದೆ ಸಮಾವೇಶಗಳಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದವರು ತಮ್ಮದೇ ಆದ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ ಈಗಾಗಲೇ ಸಾಕಷ್ಟು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದಾರೆ ಈ ಯಾತ್ರೆಯನ್ನ ಬೆಳಗಾವಿಯಲ್ಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳಕರ್, ಕೆಪಿಸಿಸಿ ರಾಜ್ಯಾಧ್ಯಕ್ಷ  ಸತೀಶ್ ಜಾರಕಿಹೊಳಿ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಇವರ ಜೊತೆಗೆ ಯಾತ್ರೆಯ ಬಸ್ ನಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಮಾತನಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಿದ್ದರಾಮಯ್ಯ ಮಾತನಾಡಿರುವ 20 ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಬಿಜೆಪಿ ಸಂಘಟನೆಗಳು ಕೂಡ ಈ ವಿಡಿಯೋ ಶೇರ್ ಮಾಡಿ ಸಿದ್ದರಾಮಯ್ಯ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಳಗಾವಿಯ ಪಂಥ ಬಾಳೆಕುಂದ್ರಿ ಗ್ರಾಮದಲ್ಲಿ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಮುಗಿಸಿ ಬಸ್ ನಲ್ಲಿ ಕುಳಿತಿದ್ದ ವೇಳೆ ಸಿದ್ದರಾಮಯ್ಯ ಹಾಡಿದ ಮಾತುಗಳು ವೈರಲ್ ಆಗಿವೆ.

ಸಿದ್ದರಾಮಯ್ಯ ಹೇಳಿದ್ದೇನು?

ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮುಂದೆ ನಡೆಯುವ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರನ್ನ ಆಹ್ವಾನಿಸುತ್ತಾರೆ. ಆಗ ಸಿದ್ದರಾಮಯ್ಯ ಅವರು, ಅವರು ಅಷ್ಟೇ ಜನರನ್ನ ಸೇರಿಸುತ್ತಾರೆ ಪ್ರತಿಯೊಬ್ಬರಿಗೂ ಐದುನೂರು ರೂಪಾಯಿಗಳನ್ನು ಕೊಟ್ಟು ಕರೆದುಕೊಂಡು ಬರಬೇಕು ಎಂಬುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಕೇವಲ 20 ಸೆಕೆಂಡುಗಳ ವಿಡಿಯೋ ಆಗಿದ್ದು ಸಿದ್ದರಾಮಯ್ಯ ಅವರ ಮುಂದಿನ ಮಾತು ಏನು ಇವರು ವಿಪಕ್ಷಗಳ ಬಗ್ಗೆ ಹೇಳಿದ್ದ ಅಥವಾ ಸಮಾವೇಶದ ಬಗ್ಗೆ ಹೇಳಿದ್ದ ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ.

ಆದರೆ ಇದು ಕಾಂಗೆಸ್ ಪಕ್ಷಕ್ಕೆ ಹೇಳಿದ್ದು ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಸಿದ್ಧರಾಮಯ್ಯ ಮಾತು ಮುಜುಗರ ತಂದಿದ್ದಂತೂ ನಿಜ. ಕೆಲವರು ಜಿಜೆಪಿಗೆ ಹಣ ಕೊಡುತ್ತಾರೆ ಎಂದು ಸಿದ್ದರಾಮಯ್ಯ ಮಾತಿನ ಅರ್ಥ ಎಂಬುದಾಗಿಯೂ ವಾದ ಮಾಡಿದ್ದಾರೆ. ಸಿದ್ಧರಾಮಯ್ಯ ಅಂತವರಿಗೆ ಈ ಮಾತು ಶೋಭೆಯಲ್ಲ ಎಂದು ಜನ ಸಿದ್ಧುಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೂ ಚುನಾವಣೆ ಪ್ರಚಾರಕ್ಕಾಗಿ ಜನರಿಗೆ ಹಣ ಕೊಟ್ಟು ವೋಟ್ ಪಡೆದುಕೊಳ್ಳುತ್ತಾರೆ ಎಂಬುದು ಮಾತ್ರ ಈ ಮಾತಿನಿಂದ ಸ್ಪಷ್ಟವಾಗುತ್ತದೆ.

election--siddaramaiah