Elon Musk: ಮಾನವನ ಮೆದುಳಿಗೆ ಚಿಪ್ ಅಳವಡಿಕೆ; ಮನುಷ್ಯನ ಮೆದುಳಿಗೆ ಕೈಹಾಕಲು ಮುಂದಾದ್ರಾ ಎಲಾನ್ ಮಸ್ಕ್

Elon Musk: ಪ್ರಪಂಚವು ಇಂದು ಸಿಕ್ಕಾಪಟ್ಟೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಹಾಗಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಒಂದಲ್ಲ ಒಂದು ಸಂಶೋಧನೆಗಳು ನಡೆಯುತ್ತಿವೆ. ಈಗ ಎಲಾನ್ ಮಸ್ಕ್ (Elon Musk)  ಅವರು ಮಾನವನ ಮೆದುಳಿಗೆ ಚಿಪ್ ಅಳವಡಿಸಿ ಮನುಷ್ಯನಿಗೆ ಅಪಘಾತವವಾದರೂ ಆತನ ಮೆದುಳು ನೀಡುವ ಸೂಚನೆ ಆಧರಿಸಿ ಕಂಪ್ಯೂಟರ್ ಕೆಲಸ ಮಾಡುವಂತೆ ಮಾಡಲು ಮುಂದಾಗಿದ್ದಾರೆ.

Elon Musk: ಮಾನವನ ಮೆದುಳಿಗೆ ಚಿಪ್ ಅಳವಡಿಕೆ; ಮನುಷ್ಯನ ಮೆದುಳಿಗೆ ಕೈಹಾಕಲು ಮುಂದಾದ್ರಾ ಎಲಾನ್ ಮಸ್ಕ್ https://sihikahinews.com/amp/elon-musks-company-neuralink-to-test-brain-chip-in-humans/

ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ತಮ್ಮ ನ್ಯೂರೋ ಲಿಂಕ್ ಕಂಪನಿಯ ಮೂಲಕ ಮನುಷ್ಯರ ಮೆದುಳಿಗೆ ಅಳವಡಿಸಬಹುದಾದ ರೋಬೋಟ್ ಚಿಪ್ಪನ್ನು ಶೀಘ್ರವೇ ಪರೀಕ್ಷೆ ನಡೆಸಲಿದೆ ಎಂದು ತಿಳಿದುಬಂದಿದೆ. ಇದು ಒಂದು ವೇಳೆ ಯಶಸ್ವಿಯಾದಲ್ಲಿ ಸ್ವತಃ ಎಲಾನ್ ಮಸ್ಕ್ ಅವರೇ ಈ ರೋಬೋಟ್ ಚಿಪ್ ಬಳಕೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಮಸ್ಕ್ ಅವರು ಆರಂಭಿಸಿರುವ ಸ್ಟಾರ್ಟ್ಪ್ ಕಂಪನಿಯೇ ನ್ಯುರೋಲಿಂಕ್. ಈ ಕಂಪನಿಯ ಮೂಲಕ ಮನುಷ್ಯನ ಮೆದುಳಿಗೆ ರೋಬೋಟ್ ಚಿಪ್ ಅಳವಡಿಸಿ ಆತನ ಭಾವನೆಗಳ ಮೂಲಕವಾಗಿ ಕಂಪ್ಯೂಟರೊಂದಿಗೆ ನೇರವಾಗಿ ಸಂವಹನ ನಡೆಸಲು ಸಾಧ್ಯವಾಗುವಂತೆ ಮಾಡುವುದು ಈ ಸಂಶೋಧನೆಯ ಉದ್ದೇಶವಾಗಿದೆ.

ಈ ರೋಬೋಟ್ ಚಿಪ್ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಎಫ್ಡಿಎಗೆ ಸಲ್ಲಿಸಿದ್ದೇವೆ. ಅಲ್ಲಿಂದ ಒಪ್ಪಿಗೆ ಸಿಕ್ಕರೆ ಇನ್ನು ಆರು ತಿಂಗಳಿನಲ್ಲಿ ನಾವು ಪರೀಕ್ಷೆ ಮಾಡಲಿದ್ದೇವೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.

ನ್ಯೂರೋಲಿಂಕ್ ಅಭಿವೃದ್ಧಿಪಡಿಸಿರುವ ಈ ಚಿಪ್ ಪರೀಕ್ಷೆ ಒಂದು ವೇಳೆ ಯಶಸ್ವಿಯಾದರೆ ಇದು ಮಾನವನ ಮೆದುಳನ್ನು ನಿಯಂತ್ರಿಸಲು ಸಹಾಯ ಮಾಡಲಿದೆ. ಸ್ನಾಯುಗಳನ್ನು ನಿರ್ವಹಿಸಲು ಸಾಧ್ಯವಾಗದಿರುವ ಮನುಷ್ಯರು ಸಹ ಕೆಲಸ ಮಾಡಲು ಶಕ್ತರಾಗುತ್ತಾರೆ. ಮನುಷ್ಯನ ಬೆನ್ನು ಹುರಿ ಮುರಿದಿದ್ದರೂ ಸಹ ಆತನ ದೇಹ ಸಂಪೂರ್ಣವಾಗಿ ಕೆಲಸ ಮಾಡಲು ಸಾಧ್ಯವಾಗಿಸುವ ಶಕ್ತಿ ಈ ಚಿಪ್ಗೆ ಇದೆ. ಈ ಚಿಪ್ ಅಳವಡಿಸಿಕೊಂಡಿರುವ ವ್ಯಕ್ತಿ ತನ್ನ ಮೆದುಳಿನಿಂದಲೇ ಕಂಪ್ಯೂಟರೊಂದಿಗೆ ಸಂವಹನ ನಡೆಸಿ ಕಾರ್ಯ ನಿರ್ವಹಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಎಲಾನ್ ಮಸ್ಕ್ ಅವರು 2019 ರಲ್ಲಿ ಈ ನ್ಯೂರೋಲಿಂಕ್ ಸ್ಟಾರ್ಟ್ ಅಪ್ ಕಂಪನಿ ಸ್ಥಾಪನೆ ಮಾಡಿದ್ದಾರೆ. 2020 ರಲ್ಲಿಯೇ ಈ ರೀತಿಯ ಚಿಪ್ ಅಭಿವೃದ್ಧಿ ಪಡಿಸಲಾಗಿತ್ತು. ಈಗಾಗಲೇ ನಾಣ್ಯದ ರೀತಿಯ ಚಿಪ್ ಗಳನ್ನು ಪ್ರಾಣಿಗಳಲ್ಲಿ ಅಳವಡಿಸಿ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

Elon Muskಎಲಾನ್ ಮಸ್ಕ್