Exit poll Gujarat 2022: ಗುಜರಾಜ್ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಹೊರಬಿತ್ತು ಎಕ್ಸಿಟ್ ಪೋಲ್; ಈ ಬಾರಿ ಗುಜರಾತ್ ಗದ್ದುಗೆ ಯಾರಿಗೆ ಗೊತ್ತಾ? ಆಪ್ ‘ಕೈ’ನಲ್ಲೂ ಇದ್ಯಾ ಅದೃಷ್ಟ?

Exit poll gujarat 2022: ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಆರಿಸಬೇಕು. ಹಾಗಾಗಿ ಭಾರತದಲ್ಲಿ ಚುನಾವಣೆಯನ್ನು ಹಬ್ಬದಂತೆ ಕಾಣಲಾಗುತ್ತದೆ. ನಿನ್ನೆ ಗುಜರಾತ್ ರಾಜ್ಯದ ಚುನಾವಣೆ ಮುಗಿದಿದ್ದು, ಎಕ್ಸಿಟ್ ಪೋಲ್ ಹೊರಬಿದ್ದಿದೆ. ಇದರಲ್ಲಿ ಅಚ್ಚರಿ ಎನಿಸುವ ಅಂಶಗಳನ್ನು ಹೊರಹಾಕಿದೆ.

Exit poll Gujarat 2022: ಗುಜರಾಜ್ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಹೊರಬಿತ್ತು ಎಕ್ಸಿಟ್ ಪೋಲ್; ಈ ಬಾರಿ ಗುಜರಾತ್ ಗದ್ದುಗೆ ಯಾರಿಗೆ ಗೊತ್ತಾ? ಆಪ್ ‘ಕೈ’ನಲ್ಲೂ ಇದ್ಯಾ ಅದೃಷ್ಟ? https://sihikahinews.com/amp/exit-poll-gujarat-2022-result/

ದೇಶದಲ್ಲಿ ಇಂದು ಬಹುತೇಕ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬೆರಳೆಣಿಕೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಹಾಗೂ ಕಾಂಗ್ರೆಸ್ ಅಧಿಕಾರದಲ್ಲಿದೆ. ಕಾಂಗ್ರೆಸ್ ಇಷ್ಟು ವರ್ಷ ಅಧಿಕಾರಕ್ಕಾಗಿ ಮಾಡಿರುವ ಕುತಂತ್ರಗಳು, ಅಲ್ಪಸಂಖ್ಯಾತರನ್ನು ಓಲೈಸುವ ಬರದಲ್ಲಿ ಬಹುಸಂಖ್ಯಾತ ಹಿಂದೂಗಳಿಗೆ ಮಾಡಿರುವ ಮೋಸಗಳು ಒಂದೊಂದಾಗಿ ಹೊರಬೀಳುತ್ತಿದೆ. ಇದೆ ಬಿಜೆಪಿಗೆ ಮತವಾಗಿ ಪರಿವರ್ತನೆ ಆಗುತ್ತಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ದೇಶ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವರ್ಚಸ್ಸು ಕೂಡ ಗೆಲುವಿಗೆ ಸಹಕಾರವಾಗಲಿದೆ ಎನ್ನುವುದು ಪ್ರಮುಖ ಅಂಶ.

ಗುಜರಾತಿನಲ್ಲಿ ಕಳೆದ 20 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಮೋದಿಯವರೆ ಮೂರು ಬಾರಿ ಗುಜರಾತಿನ ಮುಖ್ಯಮಂತ್ರಿಗಳಾಗಿದ್ದರು. ಈ ಬಾರಿಯೂ ಮೋದಿಯವರ ಸುನಾಮಿಯನ್ನು ತಡೆಯುವಲ್ಲಿ ವಿಪಕ್ಷಗಳು ವಿಫಲಾದಂತೆ ಕಂಡುಬರುತ್ತಿದೆ. ವಿಪಕ್ಷಗಳು ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ರೀತಿಯ ಬಾಣಗಳನ್ನು ಪ್ರಯೋಗಿಸಿದರೂ ಬಿಜೆಪಿ ಸೋಲಿಸುವುದು ಅಸಾಧ್ಯವಾದದ್ದು ಎನ್ನುವುದನ್ನು ಎಲ್ಲ ಎಕ್ಸಿಟ್ ಪೋಲ್ಗಳು ಹೇಳುತ್ತಿವೆ.

ಚುನಾವಣೆಗಳು ಸಮೀಪವಾಗುತ್ತಿದ್ದಂತೆ ಜಾತಿ ರಾಜಕೀಯ ಹಾಗೂ ಅಧಿಕಾರ ವಿರೋಧಿ ಅಲೆ ಹೆಚ್ಚಾಗಿ ಎಲ್ಲ ರಾಜ್ಯಗಳಲ್ಲಿ ಕಾಣಿಸುತ್ತದೆ. ಅಲ್ಲದೆ ಇದರ ವಿರುದ್ಧ ಗೆಲುವು ಸಾಧಿಸುವುದು ಹೇಗೆ ಎಂದು ಸಹಜವಾಗಿಯೇ ಅಧಿಕಾರದಲ್ಲಿರುವ ಪಕ್ಷ ಯೋಚನೆ ಮಾಡುತ್ತದೆ. ಯಾಕೆಂದರೆ ಇ ಅಧಿಕಾರ ವಿರೋಧಿ ಅಲೆ ಒಮ್ಮೆ ಎದ್ದರೆ ಅದನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಬೇರೆ ಪಕ್ಷಕ್ಕೆ ಅಧಿಕಾರ ಪಡೆಯುತ್ತದೆ.

ಈ ಅಧಿಕಾರ ವಿರೋಧಿ ಅಲೆ ಲಾಭ ಪಡೆಯುವ ವಿರೋಧ ಪಕ್ಷಗಳು ತಮಗೂ ಒಂದು ಅವಕಾಶ ನೀಡಿ ಎಂದು ಮನವಿ ಮಾಡುತ್ತಿದ್ದವು. ಅಲ್ಲದೆ ತಮಗೆ ತೋರಿದ ರೀತಿಯಲ್ಲಿ ಭರವಸೆಗಳನ್ನು ನೀಡಿ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದವು. ಆದರೆ ಗುಜರಾತಿನಲ್ಲಿ ಮೋದಿಯವರು ವಿರೋಧ ಪಕ್ಷಗಳ ಈ ರೀತಿಯ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದಂತೆ ಕಂಡುಬರುತ್ತಿದೆ. ಯಾಕೆಂದರೆ ಬಂದಿರುವ ಎಲ್ಲ ಎಕ್ಸಿಟ್ ಪೋಲ್ಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೇ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಅದರಲ್ಲಿಯೂ ಈ ಬಾರಿ ಆಪ್ನ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಚುನಾವಣೆಗೆ ೬ ತಿಂಗಳು ಇರುವಾಗಲೇ ಗುಜರಾತ್ ಅಖಾಡಕ್ಕೆ ಧುಮುಕಿದ್ದರು. ಸಿಕ್ಕಾಪಟ್ಟೆ ಆಶ್ವಾಸನೆಗಳನ್ನು, ಉಚಿತ ಭರವಸೆಗಳನ್ನು ಎಲ್ಲಕ್ಕಿಂತ ಮುಖ್ಯವಾಗಿ ದೆಹಲಿ ಮಾಡೆಲ್ ಜನರ ಮುಂದೆ ಇಟ್ಟಿದ್ದರು. ಆದರೂ ಜನರು ಅರವಿಂದ ಕೇಜ್ರಿವಾಲ್ ಅವರ ಉಚಿತ ಭರವಸೆಗಳ ಮಾತಿಗೆ ಮರುಳಾದಂತೆ ಕಂಡು ಬರುತ್ತಿಲ್ಲ.

ಗುಜರಾತ್ನಲ್ಲಿ 182 ವಿಧಾನಸಭಾ ಕ್ಷೇತ್ರಗಳಿವೆ. ಅಧಿಕಾರಕ್ಕೆ ಬರಲು 92 ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 77 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಬಹುತೇಕ ಎಲ್ಲ ಎಕ್ಸಿಟ್ ಪೋಲ್ಗಳ ಪ್ರಕಾರ ಬಿಜೆಪಿ 120 ಕ್ಕೂ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ. ಆಪ್ 10 ಸ್ಥಾನ ಹಾಗೂ ಕಾಂಗ್ರೆಸ್ 50 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಿವೆ.

Electionexit poll gujarat 2022 result